ಶ್ರೀನಿವಾಸಪುರ:ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಸಾಗಿಸುತಿದ್ದ 21 ಕೆಜಿ ಗಾಂಜಾವನ್ನು ಶ್ರೀನಿವಾಸಪುರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಕೋಲಾರ ಮೂಲದ ವ್ಯಕ್ತಿಯನ್ನು ಬಂಧಿಸಿರುತ್ತಾರೆ.
ಶ್ರೀನಿವಾಸಪುರ ತಾಲೂಕಿನ ವಳಗೆರನಹಳ್ಳಿ ಬಳಿ ಗಾಂಜಾ ವಶಕ್ಕೆ ಪಡೆದುಕೊಂಡಿರುವ ಪೋಲಿಸರು ಗಾಂಜಾ ಸಾಗಿಸುತ್ತಿದ್ದ ನೂರ್ ಪಾಷಾ ನನ್ನು ಬಂಧಿಸಿರುತ್ತಾರೆ. ಆರೋಪಿಯಿಂದ 21 ಕೆಜಿ ತೂಕದ, 10 ಲಕ್ಷ ಬೆಲೆ ಬಾಳುವ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ವಶಕ್ಕೆ ತಗೆದುಕೊಂಡಿದ್ದಾರೆ.
ರೇಷ್ಮೆ ವ್ಯಾಪಾರಿಯ ಗಾಂಜ ದಂದೆ?
ಆರೋಪಿ ನೂರ್ ಪಾಷಾ ಕೋಲಾರ ನಗರದ ಟವರ್ ನಿವಾಸಿಯಾಗಿರುವ ಮೂಲತಃ ರೇಷ್ಮೆ ಕಾರ್ಮಿಕನಾಗಿದ್ದು ಗಾಂಜವನ್ನು ಆಂಧ್ರದ ವಿಶಾಕಪಟ್ಟಣಂ ನಿಂದ ತಂದು ಇಲ್ಲಿ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.
ಕೋಲಾರ ಜಿಲ್ಲಾ ಎಸ್.ಪಿ ದೇವರಾಜ್ ಮಾರ್ಗದರ್ಶನದಲ್ಲಿ ಮುಳಬಾಗಿಲು ಪ್ರಭಾರೆ ಡಿ.ವೈ.ಎಸ್.ಪಿ ಮುರಳಿಧರ್ ಸೂಚನೆಯಂತೆ
ಶ್ರೀನಿವಾಸಪುರ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ನಾರಯಣಸ್ವಾಮಿ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಶ್ರೀನಿವಾಸಪುರ ಅಪರಾಧ ವಿಭಾಗದ ಎ.ಎಸ್.ಐ ಅಮೀದ್ ಖಾನ್, ಸಿಬ್ಬಂದಿ ಮಂಜುನಾಥ್,ಸುರೇಶ್, ವೆಂಕಟಾಚಲಪತಿ, ರಾಮಚಂದ್ರ, ಷಫಿಉಲ್ಲಾ,ಸಂದೀಪ್,ರಿಜ್ವಾನ್,ಸುಬಾನ್ ಮುಂತಾದವರು ಪಾಲ್ಗೋಂಡಿದ್ದರು.
ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾರಿ ಮೊತ್ತದ ಗಾಂಜ ವಶಪಡಿಸಿಕೊಂಡಿರುವ ಶ್ರೀನಿವಾಸಪುರ ಪೋಲಿಸರ ಕಾರ್ಯಚರಣೆಯನ್ನು ಕೋಲಾರ ಜಿಲ್ಲಾ ಎಸ್.ಪಿ ದೇವರಾಜ್ ಶ್ಲಾಘಿಸಿದ್ದಾರೆ.
ಇತ್ತಿಚಿಗೆ ಆಂಧ್ರದಿಂದ ಅಕ್ರಮವಾಗಿ ಗಾಂಜ ಕರ್ನಾಟಕಕ್ಕೆ ತರುತ್ತಿರುವುದು ಸಾಮನ್ಯವಾಗಿದ್ದು ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ