- ನೂತನವಾಗಿ ಕಾಣಿಪಾಕಂ ದೇವಾಲಯ ನಿರ್ಮಾಣ
- ಶ್ರೀ ಕಾಳಹಸ್ತಿ ದೇವಸ್ಥಾನದ ಶೈಲಿಯಲ್ಲಿ ನಿರ್ಮಾಣ
- ಪಲ್ಲವ ಹಾಗು ವಿಜಯನಗರ ವಾಸ್ತುಶಿಲ್ಪದ ಪರಿಕಲ್ಪನೆ
- ಆಂಧ್ರ ಮೂಲದ ಎನ್ ಆರ್ ಐ ಗಳು ದಾನಿಗಳು
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುರಾತನವಾದ ಐತಿಹಾಸಿಕ ಪುಣ್ಯಕ್ಷೇತ್ರವಾದ ಕಾಣಿಪಾಕಂ ಸ್ವಯಂ ಉದ್ಭವ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನವನ್ನು ಭಕ್ತರಿಗೆ ಅನಕೂಲವಾಗುವ ರಿತಿಯಲ್ಲಿ ನೂತನವಾಗಿ ಪಲ್ಲವ ಹಾಗು ವಿಜಯನಗರ ವಾಸ್ತುಶಿಲ್ಪದಂತೆ ಶ್ರೀ ಕಾಳಹಸ್ತಿ ದೇವಸ್ಥಾನದ ಶೈಲಿಯಲ್ಲಿ ಪುನರ್ನಿರ್ಮಾಣಮಾಡಲಾಗಿದ್ದು ಈ ತಿಂಗಳ 21 ದಂದು ಭಾನುವಾರ ನೂತನ ದೇವಾಲಯ ಲೋಕಾರ್ಪಣೆಯಾಗಲಿದೆ.
ತೀರಾ ಇಕ್ಕಾಟ್ಟಾದ ಮುಖಮಂಟಪದ ಮೂಲಕ ಭಕ್ತರು ಗರ್ಬಗುಡಿಯ ಬಳಿ ಹೋಗಿ ದರ್ಶನ ಪಡೆಯುತ್ತಿದ್ದು ಇದರಿಂದ ಭಕ್ತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರು ಈ ಹಿನ್ನಲೆಯಲ್ಲಿ ಭಕ್ತರ ಅನಕೂಲಕ್ಕಾಗಿ ಅಮೇರಿಕಾದ ಬೊಸ್ಟನ್ ನಲ್ಲಿ ನೆಲೆಸಿರುವ ಗಾಯಿತ್ರಿದೇವಿ ಮತ್ತು ಐಕರವಿ ಹಾಗು ಜಾನಕಿ ಮತ್ತು ಗುತ್ತಿಕೊಂಡಶ್ರೀನಿವಾಸ್ ದಂಪತಿಗಳು ಇವರು ಮೂಲ ಆಂಧ್ರದವರು ದೇವಸ್ಥಾನದ ಪುನರ್ ನಿರ್ಮಾಣದ ದಾನಿಗಳಾಗಿ ಸುಮಾರು 10 ಕೋಟಿಗೂ ಹೆಚ್ಚು ದೇಣಿಗೆ ನೀಡುವ ಮೂಲಕ ಮೂಶಿಕ ಮಂಟಪದ ವರಗಿನ ದೇವಾಲಯ ಕೆಡವಿ ನೂತನವಾಗಿ ವಿಸ್ತಾರವಾದ ದೇವಾಲಯವನ್ನು ಪುನರನಿರ್ಮಾಣಮಾಡಲಾಗಿದೆ.
ದೇವಾಲಯದ ಪುನರ್ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಮಾರಂಭ ಕಳೆದ ವರ್ಷ ಜೂನ್ 13 ರಂದು ಪ್ರಾರಂಭವಾಗಿದ್ದು , ದೇವಾಲಯದ ಗರ್ಭಗುಡಿಯ ಗೋಡೆಗಳನ್ನು ಹಾಗೆ ಉಳಿಸಿಕೊಂಡು ಛಾವಣಿ ಎತ್ತರಿಸಿ ಮೂಶಿಕಮಂಟಪದೊಂದಿಗೆ ಜೊಡಿಸಿ ನಿರ್ಮಾಣ ಮಾಡಿರುವ ವಿಶಾಲವಾದ ದೇವಾಲಯದಲ್ಲಿ ಗಾಳಿ ಬೆಳಕು ಒಳಗೆ ಬರುವುದರಿಂದ ಸ್ವಯಂ ಉದ್ಭವ ಶ್ರೀ ವರಸಿಧಿ ವಿನಾಯಕ ದೇವರನ್ನು ಭಕ್ತರು ಅನಂದದಾಯಕವಾಗಿ ಆಹ್ಲಾದಕರವಾಗಿ ವೀಕ್ಷಿಸಬಹುದಾಗಿರುತ್ತದೆ ಎನ್ನುತ್ತಾರೆ ದೇವಾಲಯದ ಅಧಿಕಾರಿಗಳು.
ಕಾಣಿಪಾಕಂ ನೂತನ ದೇವಾಲದಲ್ಲಿ ಪೂರ್ವಭಾವಿಯಾಗಿ ದಿನಾಂಕ 15/8/22 ಸೋಮವಾರದಿಂದ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಿರುವ ಯಾಗಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 7 ಮತ್ತು ಸಂಜೆ 4.30ಕ್ಕೆ ಚತುರ್ವೇದ ವಿಶೇಷ ಹೋಮ ಹವನ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು 21 ದಂದು ಭಾನುವಾರದವರಿಗೂ ಕಾರ್ಯಕ್ರಮಗಳು ನಡಯಲಿದೆ ಈಗಾಗಲೆ ಧ್ವಜ ಸ್ಥಂಬ ಸ್ಥಾಪನೆಯಾಗಿದ್ದು ಬುಧವಾರ ಕಲಶ ಸ್ಥಾಪನೆಯಾಗಿದೆ.ಶ್ರಾವಣ ಬಹುಳ ದಶಮಿ ಅಂದರೆ 21 ದಂದು ಭಾನುವಾರ ಬೆಳೆಗ್ಗೆ 8ರಿಂದ9 ಮೃಗಶಿರಾ ನಕ್ಷತ್ರದ ಕನ್ಯಾಲಗ್ನದಲ್ಲಿ ವಿಮಾನಗೋಪುರ ಮತ್ತು ಧ್ವಜ ಸ್ಥಂಬಕ್ಕೆ ಮಹಾಕುಂಭಾಭಿಷೇಕ ನಡೆಸುವ ಮೂಲಕ ದೇವಾಲಯ ಲೋಕಾರ್ಪಣೆಯಾಗಲಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಾಯಿಂಟ್ ಕಮೀಷನರ್ ಮಾದಾಲ ವೆಂಕಟ ಸುರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸಂಗ್ರಹ ಬರಹ:ಚ.ಶ್ರೀನಿವಾಸಮೂರ್ತಿ.