ಶ್ರೀನಿವಾಸಪುರ:- ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಎರಡು ಗುಂಪುಗಳು ಸಾರ್ವಜನಿಕವಾಗಿ ಹಾಡು ಹಗಲೆ ಮಚ್ಚು, ದೊಣ್ಣೆ, ರಾಡ್ ಗಳಿಂದ ಬಡಿದಾಡಿಕೊಂಡಿದ್ದಾರೆ ಈ ಸಮಯದಲ್ಲಿ ಹಲವರ ತಲೆಗೆ ಪೆಟ್ಟಾಗಿ ಗಾಯಗೊಂಡು ರಕ್ತ ಸುರಿಯುತ್ತಿದ್ದ ದೃಶ್ಯ ಸ್ಥಳೀಯ ಜನರನ್ನು ಬೆಚ್ಚಿ ಬಿಳಿಸಿರುವಂತ ಘಟನೆ ಭಾನುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿರುತ್ತದೆ.
ಪಟ್ಟಣದ ವೇಣು ಶಾಲೆಯ ಮುಂಬಾಗದಲ್ಲಿ ಘಟನೆ ನಡೆದಿದ್ದು ಘಟನೆಯಲ್ಲಿ ಹಲ್ಲೆಗೊಳಗಾಗಿರುವ ನಾಲ್ಕು ಮಂದಿ ಪೈಕಿ ಕೆ.ಎಸ್.ಆರ್.ಟಿ.ಸಿ ಕಂಡೇಕ್ಟರ್ ವೇಣು ಮತ್ತು ಇತರರು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದಾರೆ.
ತಾಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಜಮೀನು ತಕರಾರಿಗೆ ಸಂಭಂದಿಸಿದಂತೆ ಒಂದೇ ಸಮುದಾಯದ ಕೃಷ್ಣಪ್ಪ ಮತ್ತು ಗಂಗರಾಜು ಎಂಬ ಎರಡು ಕುಟುಂಬಗಳ ನಡುವೆ ರಸ್ತೆ ವಿಚಾರದಲ್ಲಿ ನ್ಯಾಯ ಪಂಚಾಯಿತಿಗಳು ನಡೆದು ಇತ್ಯರ್ಥವಾಗದ ಹಿನ್ನಲೆಯಲ್ಲಿ ಇಂದು ಪಟ್ಟಣದಲ್ಲಿ ಕೂತು ಮಾತನಾಡುವ ಬಗ್ಗೆ ತಿರ್ಮಾನಿಸಲಾಗಿತ್ತು ಅದರಂತೆ ಇಂದು ಎರಡು ಕಡೆಯವರು ಕೂತು ಮಾತನಾಡುತ್ತಿರುವಾಗ ಎರಡು ಕಡೆಯವರ ನಡುವೆ ಒಮ್ಮತ ಮೂಡದೆ ಮಾತಿನ ಚಕಮುಖಿ ನಡೆದಿದೆ ನಂತರ ಕೈ ಕೈ ಮೀಲಾಯಿಸುವ ಹಂತ ತಲುಪಿದ್ದು ಎರಡು ಕಡೆಯವರು ತಮ್ಮವರಿಗೆ ಕರೆ ಮಾಡಿ ಗಲಾಟೆಯಾಗುತ್ತಿದೆ ಎಂದು ಮಾಹಿತಿ ರವಾನಿಸಿಕೊಂಡ ಹಿನ್ನಲೆಯಲ್ಲಿ ಊರಿಂದ ಮಚ್ಚು ದೊಣ್ಣೆಗಳನ್ನು ತಂದ ಯುವಕರು ನಡು ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಬೀಸಿ ಎರಡು ಕಡೆಯವರನ್ನು ಚದುರಿಸಿರುತ್ತಾರೆ ಬಡಿದಾಟದಲ್ಲಿ ಕಂಡೇಕ್ಟರ್ ವೇಣು ಹಲವರಿಗೆ ಗಾಯಗಳಾಗಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸುಮಾರು ಒಂಬತ್ತು ಮಂದಿಯನ್ನು ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.ಸ್ಥಳಕ್ಕೆ ಪೋಲಿಸ್ ಇನ್ಸೆಪೇಕ್ಟರ್ ನಾರಯಣಸ್ವಾಮಿ ಭೇಟಿ ನೀಡಿರುತ್ತಾರೆ.
ಮಚ್ಚು ಹಿಡಿದು ಹೊಡೆದಾಡುತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವರು ಸ್ಥಳೀಯವಾಗಿ ವ್ಯಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಟ್ಟಿದ್ದು ಇದನ್ನು ನೋಡಿದ ಪಟ್ಟಣದ ಜನತೆ ಗಾಭಾರಿಯಾಗಿದ್ದಾರೆ ಜೊತೆಗೆ ಇಂದು ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ್ದ ಬಹುತೇಕ ಗಣೇಶನಗಳನ್ನು ವಿಸರ್ಜನೆ ಮೆರವಣಿಗೆ ಇದ್ದದರಿಂದ ಜನತೆ ಜಮೀನು ಗಲಾಟೆಯನ್ನು ನಿಮಜ್ಜನ ಸಂದರ್ಭಕ್ಕೆ ಕಲ್ಪಿಸಿಕೊಂಡು ಆತಂಕಕ್ಕೆ ಒಳಗಾಗಿದ್ದರು.
ತಿರುಗಿ ಬಿದ್ದ ಸಾರ್ವಜನಿಕರು ಎರಡು ಗುಂಪುಗಳು ಬಡಿದಾಡಿಕೊಳ್ಳುತ್ತಿದ್ದ ಸ್ಥಳದಲ್ಲಿದ್ದ ಸಾರ್ವಜನಿಕರು ಬಡಿದಾಡಿಕೊಳ್ಳುತ್ತಿದ್ದ ವ್ಯಕ್ತಿಗಳ ವಿರುದ್ದ ತಿರುಗಿ ಬಿದಿದ್ದಾರೆ ಜಾಂಡ್ ಬೆತ್ತಡಿ ಜಮೀನಿಗಾಗಿ ಸಾರ್ವಜನಿಕವಾಗಿ ಪ್ರಾಣಹಾನಿಯಾಗುವಷ್ಟು ಬಡಿದಾಡಿಕೊಳ್ಳುತ್ತಿರ? ಎಂದು ಪ್ರರಸಭೆ ಸದಸ್ಯರು ರೈತ ಸಂಘದ ಮುಖಂಡರು ತೀವ್ರಧಾಟಿಯಲ್ಲಿ ಬೈಯ್ದು ಬುದ್ದಿ ಹೇಳಿದ್ದಾರೆ. ಪೋಲಿಸ್ ರಾಮಚಂದ್ರ ನೇತ್ರುತ್ವದಲ್ಲಿ ಪೋಲಿಸರು ಲಾಠಿ ಬಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದವರನ್ನು ಚದುರಿಸುತ್ತಿದ್ದರೆ ಗಲಭೆ ಕೊರರು ಪೋಲಿಸರಿಂದ ಲಾಠಿ ಕಿತ್ತುಕೊಳ್ಳಲು ಮುಂದಾದ ಘಟನೆಯೂ ನಡೆದಿದೆ.