ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಆವಲಕುಪ್ಪ ಗ್ರಾಮದ ಬಳಿ ಸೆಪ್ಟೆಂಬರ್ 9 ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತ ವ್ಯಕ್ತಿ ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ (45) ಎಂದು ಖಾತ್ರಿಯಾಗಿತ್ತು ಈ ಸಂಭಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು ಅದಕ್ಕೂ ಮುಂಚಿತವಾಗಿ ಕೊಲೆಯಾದ ವ್ಯಕ್ತಿ ಕುರಿತಾಗಿ ಸೆಪ್ಟಂಬರ್ 7 ರಂದು ವ್ಯಕ್ತಿ ಕಾಣೆಯಾಗಿರುವುದಾಗಿ ದೂರುದಾಖಲಾಗಿತ್ತು ಇದರಿಂದಾಗಿ ನಾಪತ್ತೆಯಾಗಿದ್ದ ಅಪ್ಪಿರೆಡ್ಡಿ ಕೊಲೆಯಾದ ಬಗ್ಗೆ ಕುರಿತಾಗಿ ಶ್ರೀನಿವಾಸಪುರ ಪೋಲಿಸರು ನಾನಾ ರೀತಿಯಲ್ಲಿ ತನಿಖೆ ನಡೆಸಿ ಅಪ್ಪಿರೆಡ್ಡಿಯನ್ನು ಹತ್ಯೆ ಮಾಡಿದ ಕೊಲೆಗಡಕರನ್ನು 3-4 ದಿನಗಳ ಅಂತರದಲ್ಲಿ ಪತ್ತೆ ಹಚ್ಚಿರುತ್ತಾರೆ.
ಮೃತ ಅಪ್ಪಿರೆಡ್ಡಿಯ ಸ್ನೇಹಿತರಾದ ಆಲಂಬಗಿರಿ ಗ್ರಾಮದ ಮಂಜುನಾಥ್ ಬಿನ್ ರೆಡ್ಡೆಪ್ಪ ಹಾಗೂ ಮಂಜುನಾಥ್ ಬಿನ್ ನರಸಿಂಹಯ್ಯ ಎನ್ನುವರೇ ಕೊಲೆಮಾಡಿದ್ದು ಸೆಪ್ಟೆಂಬರ್ 6ರಂದು ಅಪ್ಪಿರೆಡ್ಡಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಪಟ್ಟಣದ ಹೋಟೆಲ್ ನಲ್ಲಿ ಊಟ ಮಾಡಿ ನಂತರ ಮದ್ಯ ಸೇವಿಸಿ ಅವಲಕುಪ್ಪದ ಹತ್ತಿರ ಅಮಾನಿಕೆರೆಯ ರಾಜಕಾಲುವೆಯ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆದೊಯಿದು ಸುತ್ತಿಗೆಯಿಂದ ಹೋಡೆದು ಸಾಯಿಸಿ ಆತನ ಬಳಿ ಇದ್ದ ಬಂಗಾರದ ಉಂಗುರ ಕತ್ತಿನ ಸರ ಇನ್ನಿತರೆ ವಡವೆಗಳನ್ನು ತಗೆದುಕೊಂಡು ಹೋಗಿರುತ್ತಾರೆ ಎಂದು ಮುಳಬಾಗಿಲು ಡಿ.ವೈ.ಎಸ್.ಪಿ ಜಯಶಂಕರ್ ಮತ್ತು ಶ್ರೀನಿವಾಸಪುರ ಇನ್ಸೆಪೇಕ್ಟರ್ ನಾರಯಣಸ್ವಾಮಿ ತಿಳಿಸಿರುತ್ತಾರೆ.