ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಮಾರಕವಾಗಿದೆ ಕಳೆದ 40 ವರ್ಷಗಳಿಂದ ಇಲ್ಲಿನ ಜನರನ್ನು ಮೋಸಮಾಡಿ ರಾಜಕೀಯ ಮಾಡಿಕೊಂಡು ಬರಲಾಗುತ್ತಿದೆ ಜನರ ಬದುಕಿಗೆ ಸಾಮಾಜಿಕ ಆರ್ಥಿಕ ಬದ್ರತೆ ಒದಗಿಸಲು ಸಾದ್ಯವಾಗದ ರಾಜಕಾರಣ ನಡೆಯುತ್ತಿದೆ ಎಂದು ಗುಂಜೂರುಶ್ರೀನಿವಾಸರೆಡ್ದಿ ವಿಷಾದ ವ್ಯಕ್ತಪಡಿಸಿದರು.ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮುದುವಾಡಿ ತಾಲೂಕುಪಂಚಾಯಿತಿ ಕ್ಷೇತ್ರದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗು ಜೆಡಿಎಸ್ ಪಕ್ಷದ ಪ್ರಭಾವಿ ಯುವ ಮುಖಂಡ ಮಂಜುನಾಥ್ ಹಾಗು ಗಟ್ಟಹಳ್ಳಿ ವಿಶ್ವನಾಥ್ ಅವರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಮಹಿಳೆಯರಿಗೆ ಕೌಶಲ್ಯ ಆಧಾರಿತ ಸ್ವಾಲಂಬನೆ ಬದುಕು ಕಟ್ಟಿಕೊಡಬೇಕಾದ ಇಲ್ಲಿನ ಆಡಳಿತಾರೂಡ ರಾಜಕಾರಣಿ ಡಿಸಿಸಿ ಬ್ಯಾಂಕ್ ಸಾಲ ನಿಡುತ್ತೇನೆ ಎಂದು ಜನರನ್ನು ಸೇರಿಸಿ ಮತಯಾಚಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗುವನಲ್ಲ ಇಲ್ಲಿನ ರಾಜಕೀಯಕ್ಕೆ ಹೊಸ ಆಯಾಮ ನೀಡಲು ಬಂದಿರುವುದಾಗಿ ಸ್ಪಷ್ಟ ಪಡಿಸಿದರು.
ಗುಂಜೂರುಶ್ರೀನಿವಾಸರೆಡ್ದಿ ಬಣ ಸೇರ್ಪಡೆಯಾದ ಮಂಜುನಾಥ ಮಾತನಾಡಿ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಇದೆ ಇದುವರಿಗೂ ನಡೆಯುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ವಯಸ್ಸಾಗಿದೆ ಹಾಗೆ ಅಭಿವೃದ್ದಿಗೆ ಮಂಕುಬಡಿದಿದೆ ಈ ಎಲ್ಲಾ ಕಾರಣಗಳಿಂದ ಬೆಸೆತ್ತು ಗುಂಜೂರುಶ್ರೀನಿವಾಸರೆಡ್ದಿ ನಾಯಕತ್ವ ಮೆಚ್ಚಿ ಅವರೊಂದಿಗೆ ಗುರುತಿಸಿಕೊಳ್ಳಲು ಮುಂದಾಗಿರುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ನಮ್ಮ ಭಾಗದ ಇತರೆ ಪಕ್ಷದ ಕಾರ್ಯಕರ್ತರು ಗುಂಜೂರುಶ್ರೀನಿವಾಸರೆಡ್ದಿ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುಂಜೂರುಶ್ರೀನಿವಾಸರೆಡ್ದಿ ಬಣದ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಪ್ರಕಾಶ್, ವಾಲ್ಮಿಕಿ ಗುರುಕುಲ ಪಿಠ ಜಿಲ್ಲಾಧ್ಯಕ್ಷ ಹರೀಶ್ ನಾಯಕ್, ಮಾಜಿ ಸದಸ್ಯಮೊಹಮದ್ ಆಲಿ, ಹಿಂದುಳಿದ ವರ್ಗಗಳ ಯುವಮುಖಂಡ ಶ್ರೀರಾಮ್,ಪಟೇಲ್ ಷಫಿ,ಹೆಬ್ಬಟರಫೀಕ್,ಬಂಗವಾದಿ ನಾಗರಾಜಗೌಡ ಮುಂತಾದವರು ಇದ್ದರು.