ಶ್ರೀನಿವಾಸಪುರ:ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಅವರು ಮನಸ್ಸು ಮಾಡಿದರೆ ಸಮಾಜದ ದಿಕ್ಕು ದಸೆ ಬದಲಿಸಬಹುದು ಎಂದು ಸಂಸದ ಮುನಿಸ್ವಾಮಿ ಹೇಳಿದರು ಅವರು ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯೋಜಿಸಿದ್ದ ತಾಲ್ಲೂಕು ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಮಹತ್ವವನ್ನು ಮೋದಿ ಸರ್ಕಾರ ನೀಡಿದೆ ವಿಶೇಷವಾಗಿ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಭಾವಿ ಪ್ರಜೆಗಳ ಭವಿಷ್ಯ ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಿಲವು ಇದೆ ಎಂದರು ಶಿಕ್ಷಕರು ಸರ್ಕಾರಿ ಶಾಲೆಯ ಮಕ್ಕಳ ಉಜ್ವಲ ಭವಿಷ್ಯತ್ ರೂಪಿಸಲು ಖಾಸಗಿ ಶಾಲೆಗಳಿಗೆ ಪೈಪೋಟಿಯಾಗಿ ಹಚ್ಚಿನ ಒತ್ತುಕೊಟ್ಟು ಕಾರ್ಯನಿರ್ವಹಿಸುವಂತೆ ಹೇಳಿದರು.
ಪ್ರತಿ ತಾಲ್ಲೂಕಿನಲ್ಲೂ ಗುರುಭವನ ನಿರ್ಮಿಸಲು ಬೆಂಬಲ ನೀಡುವುದಾಗಿ ಹೇಳಿದ ಅವರು ಶಿಕ್ಷಕರ ಸಂಘಗಳಲ್ಲಿನ ಗುಂಪುಗಾರಿಕೆ ಬಿಟ್ಟು ಒಮ್ಮತವಾಗಿ ಮುಂದೆ ಬಂದರೆ ಸಹಕಾರ ನೀಡುತ್ತೇನೆ ಎಂದರು.
ಅಕ್ಟೋಬರ್ 2 ಗಾಂಧಿ ಜಯಂತಿಯಂದು ಕೋಲಾರದಲ್ಲಿ ಆಯೋಜಿಸಿರುವ ರಕ್ತದಾನ ಶಿಭಿರದಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕೆಂದು ಕೋರಿದರು
ಮೇಷ್ಟ್ರುಗಳೇ ಹೀಗೆ ಮಾತನಾಡಿದರೆ ಹೇಗೆ?
ಸಂಸದ ಭಾಷಣ ಮಾಡಲು ಎದ್ದು ನಿಂತಾಗ ಸಭೆಯಲ್ಲಿ ಮಾತಿಸದ್ದು ಕೇಳಿಬರುತಿತ್ತು ನಿರೂಪಕರು ನಿಶ್ಯಬ್ದವಾಗಿರಿ ಎಂದು ಪದೆ ಪದೆ ಹೇಳುತ್ತಿದ್ದರು ಮಾತಿನ ಸದ್ದು ಅಡುಗದ ಹಿನ್ನಲೆಯಲ್ಲಿ ಸಂಸದ ಮುನಿಸ್ವಾಮಿ ತಾವೇ ಮೈಕ್ ಹಿಡಿದು ಶಿಕ್ಷಕರೆ ನೀವು ಶಾಲೆಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿದರೇ ಗದ್ದಲ ಮಾಡಿದರೆ ಗದರಿಸಿ ನಿಶ್ಯಬ್ದವಾಗಿ ಪಾಠ ಕೇಳುವಂತೆ ಬುದ್ದಿ ಹೇಳುವ ನಿವೇ ಆಯೋಜಿಸಿರುವ ಶಿಕ್ಷಕರ ದಿನಾಚರಣೆ ಸಭೆಯಲ್ಲಿ ಗುಸು ಗುಸು ಎಂದು ಮಾತನಾಡುವುದು ಎಷ್ಟು ಸರಿ ನನ್ನನ್ನು ಕಾರ್ಯಕ್ರಮಕ್ಕೆ ಕರೆದು ನಾನು ಮಾತನಾಡುವ ಸಂದರ್ಭದಲ್ಲಿ ನೀವು ನಿಮ್ಮ ಪಕ್ಕದಲ್ಲಿರುವರನ್ನು ಮಾತನಾಡುತ್ತ ಗದ್ದಲಮಯ ವಾತವರಣ ನಿರ್ಮಾಣ ಮಾಡಿದರೆ ಹೇಗೆ ಎಂದು ಅಸಮಾದಾನ ಹೊರಹಾಕಿದರು.
ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಿಕ್ಷಕರು ಜ್ಞಾನದ ಫ್ಯಾಕ್ಟರಿಯ ನೌಕರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಇತ್ತೀಚಿನ ಬೆಳವಣಿಗೆಯಲ್ಲಿ ಶಿಕ್ಷಕ ವೃತ್ತಿಯ ಜೊತೆಗೆ ಶಾಲೆಯ ಇನ್ನಿತರೆ ಕೆಲಸ ಕಾರ್ಯಗಳಲ್ಲೂ ಒತ್ತಡದಿಂದ ತೊಡಗಿಸಿಕೊಂಡ ಪರಿಣಾಮ ಶಿಕ್ಷಕ ಮಿತ್ರರು ಮಧು ಮೇಹ ಮತ್ತು ರಕ್ತದ ಒತ್ತಡ ದಿಂದ ಬಳಲುತ್ತಿದ್ದಾರೆ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಇದನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಪತ್ರ ಬರೆದಿರುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಶಿಕ್ಷಕ ಹುದ್ದೆ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತ ವಾಗಿರುವಂತೆ ಅಡುಗೆ ಕೋಣೆ, ತರಬೇತಿಗಳು ಇನ್ನಿತರೆ ಶಾಲೆಯ ಜವಾಬ್ದಾರಿಗಳನ್ನು ಸಡಿಲಗೊಳಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ಮಾಡುವ ಕುರಿತಾಗಿ ತಿಳಿಸಿದರು.
ದೇಶದ ಪ್ರಧಾನ ಮಂತ್ರಿ ಮೋದೀಜಿ ಅವರ ಮಾತೃ ಸೇವೆ ನಮಗೆ ಆದರ್ಶವಾಗಬೇಕು ಬಿ.ಜೆ.ಪಿ. ಸರ್ಕಾರಗಳು ಶಿಕ್ಷಕರನ್ನು ಗೌರವಿಸುತ್ತದೆ, ಉದಾಹರಣೆಯಾಗಿ ಮಾಜಿ ರಾಷ್ಟçಪತಿ ಅಬ್ದುಲ್ ಕಲಾಂ, ಈಗಿನ ರಾಷ್ಟçಪತಿ ದ್ರೌಪತಿ ಮುರಮು ಇವರೂ ಸಹ ಶಿಕ್ಷಕರಾಗಿದ್ದರು, ಶಿಕ್ಷಕರಾಗಿದ್ದವರು ರಾಜಕಾರಣರಾಗಬಹುದು, ಆದರೆ ಇನ್ನಿತರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಶಿಕ್ಷಕರಾಗಲು ಸಾಧ್ಯವಿಲ್ಲ ಎಂದರು. 7ನೇ ವೇತನ ಆಯೋಗದಂತೆ ರಾಜ್ಯ ಸರ್ಕಾರದ ನೌಕರರಿಗೂ ಇದರ ಲಾಭ ದೊರೆಯಲಿದೆ ಎಂದ ಅವರು ಎನ್.ಪಿ.ಎಸ್. ನೌಕರರ ಸಂಘದ ಬೇಡಿಕೆಗಳು ಈಡೇರುವ ದಿನಗಳು ದೂರವಿಲ್ಲ ನಿಮ್ಮ ಸಮಸ್ಯೆಗಳಿಗೆ ನಾವು ದ್ವನಿಯಾಗಿ ನಿಲ್ಲುತ್ತೇವೆ ಎಂದರು,
ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇದೇ ತಾಲೂಕಿನ ಅಭ್ಯರ್ಥಿ ಸ್ಪರ್ದಿಸಿದ್ದರು ತಾಲೂಕಿನ ಶಿಕ್ಷಕರು ಅತಿ ಹೆಚ್ಚು ಮತಗಳನ್ನು ಚಿದಾನಂದ ಗೌಡರಿಗೆ ನೀಡುವ ಮೂಲಕ ಗೆಲವಿಗೆ ಸಹಕರಿಸಿದ್ದಾರೆ ಹಾಗಾಗಿ ಚಿದಾನಂದ ಗೌಡರು ತಮ್ಮ ಸ್ವಂತ ತಾಲೂಕು ಶಿರಾ ತಾಲ್ಲೂಕಿಗೆ ಅನುದಾನ ನೀಡುವಂತೆ ನಮ್ಮ ತಾಲ್ಲೂಕಿಗೂ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.
ಶಿಕ್ಷಕರ ಸಂಘದ ಗುಂಪುಗಾಕೆಗೆ ಅಂತ್ಯ ಹಾಡಿ
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್, ಜೆ.ಡಿ.ಎಸ್. ಬಿ.ಜೆ.ಪಿ. ಪಕ್ಷಗಳ ಮುಖಂಡರ ನಡುವೆ ಒಬ್ಬರ ವಿರುದ್ದ ಒಬ್ಬರು ಆರೋಪ ಪ್ರತ್ಯಾರೋಪ ಟೀಕೆ ಸಹಜ ಹಾಗೆ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಒಂದೇ ಟೇಬಲ್ ನಲ್ಲಿ ಕೂತು ಊಟ ಮಾಡುತ್ತಾರ್ರಿ ಅದು ರಾಜಕಾರಣ. ಆದರೆ ಶಿಕ್ಷಕರಾದ ನೀವು ಅತ್ಯಂತ ಪವಿತ್ರವಾದ ವೃತ್ತಿಯಲ್ಲಿದ್ದೀರಿ ನೀಮಗೆ ಯಾಕೆ ಬಣ ಅಥಾವ ಗುಂಪುಗಾರಿಕೆ ರಾಜಕೀಯ ಈ ಕೂಡಲೆ ಅಂತಹ ಸಂಸೃತಿಯನ್ನು ಬಿಡುವಂತೆ ಹೇಳಿದ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಲೂರುಬೈರೆಡ್ಡಿ ಹಾಗು ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ ರವರುಗಳು ತಮ್ಮ ವೈಯುಕ್ತಿಕ ವೈಮನಸ್ಯಗಳನ್ನು ಬದಿಗೊತ್ತಿ ಸಂಘಟಿತರಾಗುವಂತೆ ತಿಳಿಸಿದರು.
ಶಾಸಕ ರಮೇಶ್ ಕುಮಾರ್ ಗೈರು
ಶಿಕ್ಷಕರ ದಿನಾಚರಣೆಗೆ ಕಾರ್ಯಕ್ರಮ ದಿಂದ ಸ್ಥಳೀಯ ಶಾಸಕ ರಮೇಶ್ ಕುಮಾರ್ ದೂರ ಉಳಿದಿದ್ದು ಕೆಲ ಶಿಕ್ಷಕರಿಗೆ ಬೇಸರ ತರಿಸಿದ್ದರೆ ಕೆಲ ಶಿಕ್ಷಕರಂತೂ ಸಭೆಯ ಮದ್ಯ ಎದ್ದು ಹೋದರು.
ಶಿಕ್ಷಕರ ಸಂಘದ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಬಿ.ಇ.ಒ. ಉಮಾದೇವಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಎನ್. ವೇಣುಗೋಪಾಲ್, ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷ ಅಶೋಕ್, ಮುಖಂಡ ರೋಣೂರು ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್, ಸ.ನೌ.ಸಂ ಅಧ್ಯಕ್ಷ ಬಂಗವಾದಿ ನಾಗರಾಜ್, ಬಿ.ಆರ್.ಸಿ. ವಸಂತಮ್ಮ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕಿ ಸುಲೋಚನ, ಪ್ರಾ.ಶಾ.ಶಿ. ಸಂ. ಅಧ್ಯಕ್ಷ ಬೈರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಖಜಾನ್ಸಿ ವೇಣುಗೋಪಾಲ್, ಇತರೆ ಪದಾಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.