ಶ್ರೀನಿವಾಸಪುರ:KSRTC ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಪರಿಣಾಮ ಕೋಲಾರದಿಂದ ಶ್ರೀನಿವಾಸಪುರಕ್ಕೆ ಬರಲು ತಡರಾತ್ರಿ ಬಸ್ ಇಲ್ಲದೆ ವಿದ್ಯಾರ್ಥಿನಿಯರು ಕೋಲಾರ ಬಸ್ ನಿಲ್ದಾಣದಲ್ಲಿ ಪರಿದಾಡಿದ ಘಟನೆ ನಡೆದಿರುತ್ತದೆ.
ಕೊನೆಗೆ ಶ್ರೀನಿವಾಸಪುರದ ವ್ಯಕ್ತಿಯೊಬ್ಬರು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ ಮದ್ಯರಾತ್ರಿ ಬಂದಂತ ಬಸ್ ನಲ್ಲಿ ಶ್ರೀನಿವಾಸಪುರಕ್ಕೆ ಕರೆತಂದಿರುತ್ತಾರೆ. ಕರೆತಂದ ವ್ಯಕ್ತಿ ನಡೆದ ಘಟನೆಯನ್ನು ವಿವರಿಸಿ ಜನಪ್ರತಿನಿಧಿಗಳಿಗೆ ವ್ಯಾಟ್ಸಾಪ್ ಮೆಸೆಜ್ ಕಳಿಸಿ ಈ ಸಮಯದಲ್ಲಿ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಶ್ರೀನಿವಾಸಪುರದ ಇಬ್ಬರು ವಿದ್ಯಾರ್ಥಿನಿಯರು ಹಾಗು ಇಬ್ಬರು ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ಶಿಕ್ಷಣದ ಟ್ರೈನಿಂಗ್ ಸಂಬಂದ ಬೆಂಗಳೂರಿಗೆ ಹೋಗಿ ಬರುವಾಗ ತಡವಾಗಿದೆ ಸುಮಾರು ರಾತ್ರಿ 9:30 ಗಂಟೆಗೆ ಕೋಲಾರ KSRTC ಬಸ್ ನಿಲ್ದಾಣಕ್ಕೆ ಬಂದಿದ್ದಾರೆ ಆಗಷ್ಟೆ 15-20 ನಿಮಿಷಕ್ಕೆ ಮುಂಚೆ ಕೋಲಾರ ದಿಂದ ಶ್ರೀನಿವಾಸಪುರಕ್ಕೆ ಬಸ್ ಹೋರಟು ಹೋಗಿದೆ ಇನ್ನೂ ಶ್ರೀನಿವಾಸಪುರಕ್ಕೆ ಹೋಗಲು ಬಸ್ ಇಲ್ಲ ಎಂದು ಕೋಲಾರ ಬಸ್ ನಿಲ್ದಾಣದಲ್ಲಿ KSRTC ಸಿಬ್ಬಂದಿ ಹೇಳಿದಾರೆ ಇದರಿಂದ ಆತಂಕ ಗೊಂಡ ವಿದ್ಯಾರ್ಥಿಗಳು ಭಿತಿಯಿಂದ ಬಸ್ ನಿಲ್ದಾಣದಲ್ಲಿ ಕುಳಿತು ಚಡಪಡಿಸುತ್ತಿದ್ದಾರೆ ಇವರ ಚಡಪಡಿಕೆ ಕಂಡ ಶ್ರೀನಿವಾಸಪುರದ ವ್ಯಕ್ತಿಯೊಬ್ಬರು ಹೋಗಿ ಮಾತನಾಡಿಸಿ ಯಾರು ಏನು ಎಂದು ಅವರಿಂದ ವಿವರ ಪಡೆದು ನಾನು ಶ್ರೀನಿವಾಸಪುರಕ್ಕೆ ಹೋಗಬೇಕು ಆತಂಕ ಬೇಡ ಗಾಬಾರಿಯಾಗಬೇಡಿ ಸುಮಾರು 12 ಗಂಟೆ ಬಸ್ ಬರಬಹುದು ಎಂದು ಧೈರ್ಯ ತುಂಬಿದ್ದಾರೆ ಆದರೂ ವಿದ್ಯಾರ್ಥಿನಿಯರ ಆತಂಕಕ್ಕೆ ಕೊನೆಯೇ ಇರಲಿಲ್ಲ ಎನ್ನುತ್ತಾರೆ ವ್ಯಕ್ತಿ, ಕೊನೆಗೆ 12 ಗಂಟೆಯ ನಂತರ ಧರ್ಮಸ್ಥಳ ಬಸ್ ಬಂದ ನಂತರ ವಿದ್ಯಾರ್ಥಿನಿಯರು ಕೊಂಚ ಮಟ್ಟಿಗೆ ನಿರಾಳರಾದರು ಅದರೆ ಅವರು ಕೋಲಾರ ಬಸ್ ನಿಲ್ದಾಣದಲ್ಲಿ ಪಡುತ್ತಿದ್ದ ಕಷ್ಟ ಕಂಡ ಸ್ವತಃ ಆ ವ್ಯಕ್ತಿ ಭಾವುಕರಾದರು.
KSRTC ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಪರಿಣಾಮ ಕೋಲಾರದಿಂದ ಶ್ರೀನಿವಾಸಪುರಕ್ಕೆ ಬರುವಲ್ಲಿ ಮಾತ್ರ ತೊಂದರೆ ಇಲ್ಲ, ಶ್ರೀನಿವಾಸಪುರಕ್ಕೆ ಭೌಗೋಳಿಕವಾಗಿ ಹತ್ತಿರವಾಗಿರುವ ನಗರಗಳಾದ ಚಿಂತಾಮಣಿ ಪುಂಗನೂರು, ಮದನಪಲ್ಲಿ ಹಾಗು ಮುಳಬಾಗಿಲಿನಿಂದ ಶ್ರೀನಿವಾಸಪುರಕ್ಕೆ ಬರಲು ಸಂಜೆಯಾದ ನಂತರ ಸಮರ್ಪಕವಾದ ಬಸ್ ಸೌಕರ್ಯ ಇಲ್ಲ ಎಂದು ಜನ ಹಲವಾರು ಬಾರಿ KSRTC ಅಧಿಕಾರಿಗಳ ಬಳಿ ಪರಿಪರಿಯಾಗಿ ಬೇಡಿಕೊಂಡರು ಸ್ಪಂದಿಸಿಲ್ಲ ಎಂದು ದೂರುತ್ತಾರೆ.
ಶ್ರೀನಿವಾಸಪುರದವರು ಇತರೆ ಊರುಗಳಿಗೆ ಹೋಗಲು KSRTC ಯನ್ನು ನಂಬಿ ಬೆಳಿಗ್ಗೆ ಹೋಗಿ ಸಂಜೆ ವಾಪಸ್ಸು ಆಗಬೇಕು ಎಂದರೆ ಸಾಧ್ಯವಿಲ್ಲದ ಮಾತು ಎನ್ನುತ್ತಾರೆ, ಇಂದು ಪ್ರಯಾಣ ಹೋದವರು ಸಂಜೆ ವಾಪಸ್ಸು ಬರಲು ಸಾಧ್ಯವಾಗದೆ ಮಾರನೆ ದಿನ ಬರುವಂತಾಗುತ್ತದೆ ಬರಲೇ ಬೇಕು ಎನ್ನುವುದಾದರೆ ಹರಸಾಹಸ ಪಡಬೇಕು ಎನ್ನುತ್ತಾರೆ.
ಸಂಜೆ ಬೆಂಗಳೂರಿನಿಂದ ಬರಲು ಖಾಸಗಿ ಬಸ್ ಗತಿ.
ಬೆಂಗಳೂರಿನ ಮೆಜೆಸ್ಟಿಕ್ ನಿಂದ ಸಂಜೆ ವೇಳೆ ದೂರದ ತೆಲಂಗಾಣಕ್ಕೆ,ಆಂಧ್ರದ ಕರಾವಳಿಗೆ ಕೆರಳದ ಮೂಲೆ ಜಿಲ್ಲೆಗಳಿಗೆ ತಮಿಳುನಾಡಿನ ಕೊನೆಯ ಅಂಚು ಕನ್ಯಾಕುಮಾರಿಗೂ ಸೇರಿದಂತೆ ಇಡಿ ದಕ್ಷೀಣ ಭಾರತದ ಎಲ್ಲಾ ಕಡೆಗೂ KSRTC ಬಸ್ ಸೇವೆ ಇದೆ ಆದರೆ ಶ್ರೀನಿವಾಸಪುರಕ್ಕೆ ಮಾತ್ರ KSRTC ಸೇವೆ ಇಲ್ಲ ಇದೆಂತ ಧೋರಣೆ ಶ್ರೀನಿವಾಸಪುರಕ್ಕೆ ಯಾಕೆ ಬಸ್ಸು ಸೌಕರ್ಯ ಒದಗಿಸದೆ ಅನ್ಯಾಯ ಮಾಡುತ್ತಿರುವುದು ಎಂದು ಇಲ್ಲಿನ ಜನಸಾಮಾನ್ಯರ ಪ್ರಶ್ನೆ.ಸಂಜೆ ಬಳಿಕ ಶ್ರೀನಿವಾಸಪುರಕ್ಕೆ ಬಸ್ ಸೌಲಭ್ಯ ಒದಗಿಸದಂತೆ ಖಾಸಗಿ ಬಸ್ಸುಗಳ.ಲಾಭಿ ಅಥವಾ ಪಟ್ಟಬದ್ರರ ಒತ್ತಡ ಏನಾದರೂ ಇದೀಯಾ ಯಾಕೆ ಎನ್ನುವ ಮಾತುಕೇಳಿಬರುತ್ತಿದೆ
ಪಟ್ಟಣದಲ್ಲಿ ಎರಡು KSRTC ಬಸ್ ನಿಲ್ದಾಣಗಳು
ಮಾವಿನ ನಗರಿ ಶ್ರೀನಿವಾಸಪುರ ಪಟ್ಟಣದಲ್ಲಿ ಎರಡು KSRTC ಬಸ್ ನಿಲ್ದಾಣಗಳು ಇವೆ ನೂತನ ಬಸ್ ನಿಲ್ದಾಣದಲ್ಲಿ ಬಾರಿ ಸಂಖ್ಯೆಯಲ್ಲಿ ನಿಲ್ಲಿಸಬಹುದಾದ ಬಸ್ ಬೇ ಇದೆಯಾದರು ಅರ್ದ ಗಂಟೆಯ ಪ್ರಯಾಣದ ಹೋರ ಊರುಗಳಿಗೆ ಹೋಗಲು ಬಸ್ ಗಾಗಿ ಗಂಟಗಟ್ಟಲೆ ಕಾಯುವಂತ ಅನಿವಾರ್ಯದ ಕರ್ಮ ಇಲ್ಲಿನ ಜನ ಅನುಭವಿಸುತ್ತಿದ್ದಾರೆ.
ಸಾರಿಗೆ ಸೌಕರ್ಯ ಕೂಡ ಮೂಲಭೂತ ಸೌಕರ್ಯಗಳಲ್ಲೊಂದು ಎಂದು ಪಿ.ಅರ್.ಸೂರಿ ಹೇಳುತ್ತಾರೆ.
ಬೆಂಗಳೂರಿನಿಂದ ಕೋಲಾರದಿಂದ ಚಿಂತಾಮಣಿಯಿಂದ ತಡ ಸಂಜೆ ಶ್ರೀನಿವಾಸಪುರಕ್ಕೆ ಬರಲು KSRTC ಬಸ್ ಸೌಕರ್ಯ ಒದಗಿಸುವಂತೆ ರಾಘವೇಂದ್ರ ರಾವ್ ಒತ್ತಾಯಿಸಿದ್ದಾರೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Monday, November 25