ನ್ಯೂಜ್ ಡೆಸ್ಕ್: ಇದೇನು ರಜನಿಕಾಂತ್ ಸಿನಿಮಾ ಅಲ್ಲ ಇದದೊಂದು ನಿಜ ಘಟನೆ,ಮೀನು ಮಾರಾಟಗಾರ ವ್ಯಕ್ತಿಯೊಬ್ಬ ಮನೆ ಸಾಲ ತಿರಿಸಲಾಗದೆ ಮನೆಗೆ ಜಪ್ತಿ ನೋಟಿಸ್ ಬಂದಿತ್ತು ಈದೇ ಸಂದರ್ಭದಲ್ಲಿ 70 ಲಕ್ಷ ಲಾಟರಿ ಹೊಡೆದು ವ್ಯಕ್ತಿ ಮನೆಯ ಸಾಲದ ಸುಳಿಯಿಂದ ಬಚಾವಾದ ಪರಕರಣ ಕೆರಳದಲ್ಲಿ ನಡೆದಿದೆ.
ಅಕ್ಟೋಬರ್ 12 ರ ಬುಧವಾರ, ಕೇರಳದ ಕೊಲ್ಲಂ ಜಿಲ್ಲೆಯ ಮಿನಗಪಲ್ಲಿಯ ನಿಷ್ಕಪಟ ಪೂಕುಂಜು ಅವರ ಜೀವನದಲ್ಲಿ ಅತ್ಯಂತ ಪವಾಡಸದೃಶ್ಯವಾದ ಘಟನೆ ನಡೆದಿದೆ.
ಎಂಟು ವರ್ಷಗಳ ಹಿಂದೆ ಪೂಕುಂಜು ಮನೆ ಕಟ್ಟಲು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ 7.45 ಲಕ್ಷ ರೂಪಾಯಿ ಸಾಲ ಮಾಡಿದ್ದು ಅಂದಿನಿಂದ ಸಾಲ ತೀರಿಸಲು ಸಾದ್ಯವಾಗದೆ ಆರ್ಥಿಕ ಇಕ್ಕಟ್ಟಿನಲ್ಲಿ ಸಿಲುಕಿ ಪರದಾಡುತ್ತಿದ್ದ ಸಾಲದ ಲೆಕ್ಕ ಬಡ್ಡಿ ಸೇರಿ ಸುಮಾರು 12 ಲಕ್ಷ ರೂ. ಆಗಿತ್ತು. ಸಾಲ ಮರುಪಾವತಿಸಲು ಸಾಧ್ಯವಾಗದ ಪೂಕುಂಜು ಅವರಿಗೆ ಬ್ಯಾಂಕ್ ಅಟ್ಯಾಚ್ಮೆಂಟ್(ಜಪ್ತಿ) ನೋಟಿಸ್ ನೀಡಲಾಗಿದೆ.ನೋಟಿಸ್ ಸ್ವೀಕರಿಸಿದ ಒಂದೂವರೆ ಗಂಟೆಯ ನಂತರ ಅವರಿಗೆ ಅವರು ಸಹೋದರ ಕರೆ ಮಾಡಿ, 70 ಲಕ್ಷ ರೂಪಾಯಿ ಲಾಟರಿ ಹೊಡೆದಿರುವ ವಿಚಾರ ತಿಳಿಸಿದ್ದಾರೆ.
ಲಾಟರಿ ಖರಿದಿಸಿದ್ದು ಪೂಕುಂಜು ತಂದೆ!
40 ವರ್ಷದ ಪೂಕುಂಜು ತನ್ನ ಮೋಟಾರ್ ಸೈಕಲ್ನಲ್ಲಿ ಮೀನು ಮಾರಾಟ ಮಾಡುವ ಮೂಲಕ ಕುಟುಂಬವನ್ನು ಸಾಕುತ್ತಿದ್ದು ಪತ್ನಿ ಮುಮ್ತಾಜ್, ಮಗ ಮುನೀರ್ ಮತ್ತು ಮಗಳು ಮುಹ್ಸಿನಾ ಅವರೊಂದಿಗೆ ವಾಸವಾಗಿದ್ದ
ಅವರ ತಂದೆ ಯೂಸುಫ್ ಕುಂಜುಗೆ ಆಗಾಗ ಲಾಟರಿ ಖರೀದಿಸುವ ಹವ್ಯಾಸ ಇದ್ದು ಆದರೆ ಪೂಕುಂಜು ಲಾಟರಿ ಟಿಕೆಟ್ಗಳನ್ನು ಖರೀದಿಸುವುದು ವಿರಳ. ಪ್ಲಾಮೂಟ್ಟಿಲ್ ಮಾರುಕಟ್ಟೆಯಲ್ಲಿ ಲಾಟರಿ ಮಾರಾಟಗಾರ ಗೋಪಾಲ ಪಿಳ್ಳೈ ಅವರಿಂದ ಲಾಟರಿ ಟಿಕೆಟ್ ಖರೀದಿಸಿದ್ದು,ಅವರಿಗೆ 70 ಲಕ್ಷ ರೂಪಾಯಿ ಲಾಟರಿ ಹೊಡೆದಿದೆ.
ಇಂತಹುದೆ ಮತ್ತೊಂದು ಲಾಟರಿ ಪವಾಡ
ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬರಿಗೆ 1 ಕೋಟಿ ರೂಪಾಯಿ ಲಾಟರಿ ಮೂಲಕ ಬಂದು ಮಾರಾಟಕ್ಕೆ ಇಟ್ಟಿದ್ದ ಮನೆ ಉಳಿಸಿಕೊಂಡಿರುವ ಘಟನೆ ಕಳೆದ ಜುಲೈ ತಿಂಗಳಲ್ಲಿ ಕೇರಳದಲ್ಲಿ ನಡೆದಿರುತ್ತದೆ.
ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬ ಸಾಲ ತೀರಿಸಲು ತನ್ನ ಮನೆ ಮಾರಾಟ ಮಾಡುವ ಗಂಟೆಗಳ ಮೊದಲು 1 ಕೋಟಿ ರೂಪಾಯಿಗಳ ಲಾಟರಿ ವಿಜೇತನಾದ ಘಟನೆ ಹೆಚ್ಚಾಗಿ ಕನ್ನಡಿಗರೆ ಇರುವಂತ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ನಡೆದಿದೆ ಮಂಜೇಶ್ವರದ ಮೊಹಮ್ಮದ್ ಬಾವ ತಮ್ಮ 45 ಲಕ್ಷ ಸಾಲವನ್ನು ತೀರಿಸಲು ಹೊಸದಾಗಿ ನಿರ್ಮಿಸಿದ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಆದರೆ ಸಂಕಷ್ಟದ ಮಾರಾಟವಾಗಿದ್ದರಿಂದ ಎಂಟು ತಿಂಗಳ ಹಿಂದೆ ನಿರ್ಮಿಸಿದ 2,000 ಚದರ ಅಡಿಯ ಮನೆಯನ್ನು 40 ಲಕ್ಷ ರೂ.ಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿತ್ತು ಮನೆ ಖರೀದಿ ಮಾಡಿದ್ದ ಖರೀದಿದಾರರು ಮೊತ್ತವನ್ನು ಪಾವತಿಸಲು ಸಿದ್ಧರಾಗಿದ್ದರು, ಆದರೆ ವಹಿವಾಟಿನ ಕೆಲವು ಗಂಟೆಗಳ ಮೊದಲು, ಅವರು ಕೇರಳ ಸರ್ಕಾರ ನಡೆಸುತ್ತಿರುವ ಫಿಫ್ಟಿ-ಫಿಫ್ಟಿ ಲಾಟರಿಯಲ್ಲಿ 1 ಕೋಟಿ ಲಾಟರಿ ಗೆದ್ದಿರುವ ವ್ಯಕ್ತಿ ತನ್ನ ಕನಸಿನ ಮನೆಯನ್ನು ಲಾಟರಿ ಗೆದ್ದು ಉಳಿಸಿಕೊಂಡಿದ್ದಾನೆ.
ಕರ್ನಾಟಕದಲ್ಲಿ ಲಾಟರಿ ನಿಷೇದ, ಕುಮಾರಸ್ವಾಮಿ ಕ್ರಾಂತಿ ಕಾರಿ ನಿರ್ಣಯ
ಲಾಟರಿ ಅನ್ನುವುದು ಅದೃಷ್ಟದ ಆಟ ಎಷ್ಟೊ ಜನರ ಹಣ ಒಬ್ಬರಿಗೆ ಲಾಟರಿಯಾಗಿ ಹೊಡೆಯುವುದು ಇದೊಂದು ಜೂಜಾಟ ಎಂದು ಹೇಳಲಾಗುತ್ತದೆ. ಲಾಟರಿ ಚಟಕ್ಕೆ ಬಿದ್ದವರು ಪ್ರತಿದಿನ ಸಾವಿರಾರು ರೂಪಾಯಿಗಳನ್ನು ಲಾಟರಿ ಕೊಳ್ಳುತ್ತಾರೆ ಇದರಲ್ಲಿ ಸಾವಿರಾರು ಜನರು ಹಣ ಕಳೆದುಕೊಂಡರೆ ಒಬ್ಬ ಅನಕೂಲಪಡೆಯುವಂತ ವ್ಯವಸ್ಥೆ , ಒಬ್ಬ ಲಾಟರಿ ಗೆದ್ದು ಬೀಗಿದರೆ ಸಾವಿರಾರು ಜನ ಲಾಟರಿಯಲ್ಲಿ ಹಣ ತೊಡಗಿಸಿಕೊಂಡು ಅಸಾಯಕತೆಯಿಂದ ನರಳುತ್ತಾರೆ.ಇಂತಹ ಘಟನೆಗಳು ಕರ್ನಾಟಕದಲ್ಲಿ ಹೆಚ್ಚಾದಾಗ ಕೆಲ ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ನಾಟಕದಲ್ಲಿ ಲಾಟರಿ ನಿಷೇಧಿಸಿ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದ್ದರು.