ನ್ಯೂಜ್ ಡೆಸ್ಕ್: ಕಳೆದ ಎರಡೂವರೆ ವರ್ಷಗಳಿಂದ ಕೊರೊನಾ ಸೋಂಕು ಇಡಿ ಪ್ರಪಂಚವನ್ನು ಬೆಂಬಿಡದೆ ಕಾಡುತ್ತಿದೆ. ಮೊದಲನೆ ಅಲೆ, ಎರಡನೇ ಅಲೆ ಇದರ ಜೊತೆಗೆ ಹೊಸ ಹೊಸ ರೂಪಾಂತರಗಳಲ್ಲಿ ಜನರನ್ನು ಇನ್ನಿಲ್ಲದೆ ಕಾಡುತ್ತಿದೆ. ಇದಕ್ಕೆ ಅಂತ್ಯವಿಲ್ಲದಾಗಿದೆ. ಅಪಾಯಕಾರಿ ಮತ್ತು ಮಾರಣಾಂತಿಕ ಡೆಲ್ಟಾ ರೂಪಾಂತರಕ್ಕಿಂತ ಭಿನ್ನವಾಗಿ, ಒಮಿಕ್ರಾನ್ ಕೊರೊನಾವೈರಸ್ ಸೋಂಕಿನ ಸೌಮ್ಯ ಪ್ರಕರಣಗಳಿಗೆ ಕಾರಣವಾಗುತ್ತದೆ ಮತ್ತು ಸಾಮಾನ್ಯ ಶೀತ ಅಥವಾ ಜ್ವರದಂತಹ ಇತರ ಉಸಿರಾಟದ ಸೋಂಕುಗಳನ್ನು ಹೋಲುವಂತಿದೆ ಎಂದು ತಜ್ಙರ ಹೇಳುತ್ತಾರೆ.
ಕೊರೊನಾವೈರಸ್ (Coronavirus) ಭಾರತದಲ್ಲೂ ಕಡಿಮೆಯಾಗುತ್ತಿಲ್ಲ,ಹೊಸ-ಹೊಸ ರೂಪಾಂತರದಲ್ಲಿ ಮತ್ತೆ ಮತ್ತೆ ಕೊವಿಡ್ ಸೋಂಕು (COVID-19) ವಕ್ಕರಿಸುತ್ತಿದೆ. ಒಮಿಕ್ರಾನ್ ಮತ್ತು ಕೊರೊನಾ ಸ್ಥಿತಿಯ ಕುರಿತಂತೆ ಭಾರತ ಸರ್ಕಾರದ ಅರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಹೊಸ ರೂಪದ ಒಮಿಕ್ರಾನ್ ರೂಪಾಂತರ (Omicron Variant) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ದೇಶಾದ್ಯಂತ ಮಾಸ್ಕ್ (Face Mask) ಧರಿಸುವುದನ್ನು ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಿರುವುದಾಗಿ ಹೇಳಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಕೊವಿಡ್ ಮಾರ್ಗಸೂಚಿಗಳನ್ನು ಮುಂದುವರೆಸುವ ಕುರಿತಾಗಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರಿಯ ಉಪ-ರೂಪಾಂತರಗಳನ್ನು ತಡೆಯುವ ಕುರಿತಾಗಿ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್, ಎನ್ಐಟಿಐ ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪಾಲ್, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್ಕೆ ಪಾಲ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು!
ಭಾರತದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳಲ್ಲಿ ಶೇ. 17.7ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಮಿಕ್ರಾನ್ ರೂಪಾಂತರದ ಹೊಸ ಉಪ-ರೂಪವಾದ XBB ಕೇರಳ ಸೇರಿದಂತೆ ದೇಶದ ಇತರ ಕೆಲವು ಭಾಗಗಳಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್-ಬಿಎ.2.3.20 ಮತ್ತು ಬಿಕ್ಯೂ.1 ರೂಪಾಂತರದ ಉಪ-ವೇರಿಯಂಟ್ಗಳು ಪತ್ತೆಯಾಗಿವೆ. ಗುಜರಾತ್ನಲ್ಲಿ ಬಿಎಫ್-7 ರೂಪಾಂತರಿ ಪತ್ತೆಯಾಗಿದೆ. ಇತರ ರೂಪಾಂತರಗಳಂತೆ ಓಮಿಕ್ರಾನ್ BF.7 ನ ರೋಗಲಕ್ಷಣಗಳು ಒಂದೇ ಎನ್ನಲಾಗಿದ್ದು, ಉಸಿರು ಕಟ್ಟುವಿಕೆ, ಗಂಟಲು ಕೆರೆತ,ಆಯಾಸ, ಕೆಮ್ಮು, ಶೀತ, ಜ್ವರ ಹೆಚ್ಚಾಗಿ ಕಾಣಿಸಿಕೊಂಡು ಮೈಕೈ ನೋವು ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಓಮಿಕ್ರಾನ್ BF. 7 ಎಂದರೇನು ?
ಇತ್ತೀಚಿನ ಓಮಿಕ್ರಾನ್ ಸಬ್ವೇರಿಯಂಟ್ BF. 7 ಅನ್ನು ಮೊದಲು ವಾಯುವ್ಯ ಚೀನಾದ ಒಳ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು. ಚೀನಾದಲ್ಲಿ ಇತ್ತೀಚಿನ ಉಲ್ಬಣಕ್ಕೆ ಉಪ-ರೂಪಾಂತರಗಳು ಕಾರಣವಾಗಿವೆ. ಇದು ಅತ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಈಗಾಗಲೇ ಯುನೈಟೆಡ್ ಸ್ಟೇಟ್ಸ್, ಯುಕೆ, ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂನಲ್ಲಿ ಪತ್ತೆಯಾಗಿದೆ.
ಹೊಸ ಸಾಂಕ್ರಾಮಿಕ ಓಮಿಕ್ರಾನ್ ಉಪ ರೂಪಾಂತರ BF.7 ಓಮಿಕ್ರಾನ್ ಉಪ ರೂಪಾಂತರಗಳಾದ BA.5.1.7 ಮತ್ತು BF.7 – ಚೀನಾದ ಮಂಗೋಲಿಯಾದ ಪ್ರದೇಶದಿಂದ ಬಂದಿದೆ ಎನ್ನುವ ಮಾತು ಇದೆ ವರದಿಗಳ ಪ್ರಕಾರ, ಇತ್ತೀಚೆಗೆ ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಓಮಿಕ್ರಾನ್ ರೂಪಾಂತರಗಳಾದ BF.7 ಮತ್ತು BA.5.1.7 ಗಳೇ ಕಾರಣ ಎನ್ನಲಾಗುತ್ತಿದೆ.
ಬೆಳಕಿನ ಹಬ್ಬ ದೀಪಾವಳಿ ಹೊತ್ತಿನಲ್ಲಿ ದೇಶದಲ್ಲಿ ರೂಪಾಂತರಿ BF..7 ವೈರಸ್ ಹೆಚ್ಚಾಗಿ ಹರಡ ಬಹುದು ಎನ್ನಲಾಗಿದ್ದು ಪೂರಕ ಎನ್ನುವಂತೆ ಇತ್ತೀಚೆಗೆ ಚೀನಾ, ಅಮೆರಿಕ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 4 ರಂದು ಹೊಸ ರೂಪಾಂತರ ಪತ್ತೆಯಾದ ನಂತರ, ಚೀನಾ ಹೊಸ ಲಾಕ್ಡೌನ್ ಮತ್ತು ಪ್ರಯಾಣ ನಿರ್ಬಂಧಗಳನ್ನು ಘೋಷಿಸಿತು ಎನ್ನಲಾಗಿದೆ.
ಕೇರಳ,ಮಹಾರಾಷ್ಟ್ರ,ಕರ್ನಾಟಕ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಪ್ರಕರಣಗಳಲ್ಲಿ ಹೆಚ್ಚಳವನ್ನು ತೋರಿಸಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದೆ.
ಜನತೆ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ತಜ್ಙರ ಅಭಿಪ್ರಾಯಪಟ್ಟಿದ್ದಾರೆ.