ನ್ಯೂಜ್ ಡೆಸ್ಕ್: ಸಾಲ ಮಾಡಿ ಚುನಾವಣೆಯಲ್ಲಿ ಗೆದ್ದ ಯುವಕನೊಬ್ಬ ಚುನಾವಣೆಗಾಗಿ ಮಾಡಿದ ಸಾಲ ತಿರಿಸಲಾಗದೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವ ರಾಜಕಾರಣಿ ಜನ ಪ್ರತಿನಿಧಿಯಾಗಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಸಾಲ ಮಾಡಿ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಸಾಲ ತಿರಿಸಲಿಕ್ಕೆ ಸಾದ್ಯವಾಗದೆ ಆತ್ಮಹತ್ಯೆ ಶರಣಾಗಿದ್ದಾನೆ!
ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಇಬ್ರಾಹಿಂಪಟ್ಟಣದ ಮೂಲರಾಂಪುರದಲ್ಲಿ ಈ ಹಿಂದೆ ಎರಡು ಬಾರಿ ಎಂಪಿಟಿಸಿ(ಗ್ರಾಮ ಪಂಚಾಯಿತಿ ಸದಸ್ಯ) ಗಾಗಿ ಒಮ್ಮೆ ಸರಪಂಚ್ (ಗ್ರಾಮ ಪಂಚಾತಿಯಿ ಅಧ್ಯಕ್ಷ) ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವನು ಹಿಂದೆ ಸರಿಯದೆ ಸರಪಂಚ್ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಿ ಛಲಬಿಡದ ತ್ರಿವಿಕ್ರಮನಂತೆ ಸರ್ಪಂಚ್ ಚುನಾವಣೆಯಲ್ಲಿ ಸ್ಪರ್ದಿಸಿ ಮೂಲರಾಂಪುರ ಸರಪಂಚ್ ಆಗಿ ಗೆದ್ದ ಯುವಕ ಸಂಚು ಸಂತೋಷ್ ಚುನಾವಣಾ ವೆಚ್ಚಕ್ಕಾಗಿ ಸಿಕ್ಕ ಸಿಕ್ಕ ಕಡೆ ಸಾಲ ಮಾಡಿಕೊಂಡಿದ್ದ ಸಾಲದ ಮೊತ್ತ 30 ಲಕ್ಷ ರೂ ತಿರಿಸಲು ಸಾಧ್ಯವಾಗದೆ ದಿಕ್ಕುತೊಚದಂತಾಗಿ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ತೆತ್ತಿದ್ದಾರೆ
ದಾರುಣವಾಗಿ ಜೀವನದ ಅಂತ್ಯ ಕಂಡುಕೊಂಡಿರುವ ಯುವ ರಾಜಕಾರಣಿ ಮೃತ ಸಂತೋಷ್(37) ತೆಲಂಗಾಣದ ಆಡಿಳಿತಾರೂಡ ಟಿ.ಆರ್.ಎಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ ಎನ್ನಲಾಗಿದ್ದು ಸಾಲದ ವಿಚಾರವಾಗಿ ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದನಾದರೂ ಕುಟುಂಬಸ್ಥರ ಎಚ್ಚರಿಕೆಯಿಂದ ಬಚಾವಾಗಿದ್ದ ಎನ್ನುತ್ತಾರೆ ಆಪ್ತರು.