ನ್ಯೂಜ್ ಡೆಸ್ಕ್: ತಿರುಮಲದಲ್ಲಿ ದೇವರ ದರ್ಶನಕ್ಕೆ ಅನಕೂಲ ಆಗುವಂತೆ ಮಂಗಳವಾರದಿಂದ ಟಿಟಿಡಿ ಸ್ಲಾಟೆಡ್ ಸರ್ವ ದರ್ಶನ ಟೋಕನ್ ವ್ಯವಸ್ಥೆಯನ್ನು ಪುನಃ ಪರಿಚಯಿಸಲಾಗುತ್ತಿದೆ. ತಿರುಮಲಲ್ಲಿ ವೆಂಕಟೇಶ್ವರ ಸ್ವಾಮಿ ಸರ್ವದರ್ಶನ ಟೈಮ್ಸ್ಲಾಟ್ ಟೋಕನ್ ಗಳನ್ನು ವಿತರಿಸಲಾಗುವುದು. ತಿರುಪತಿಯ ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಕಾಂಪ್ಲೆಕ್ಸ್ ಮತ್ತು ಗೋವಿಂದರಾಜಸ್ವಾಮಿ ಚತ್ರಗಳಲ್ಲಿ ಸ್ಥಾಪಿಸಲಾಗಿರುವ ಕೌಂಟರ್ಗಳ ಮೂಲಕ ಟೋಕನ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಶನಿವಾರ, ಭಾನುವಾರ ಮತ್ತು ಸೋಮವಾರದಂದು ದಿನಕ್ಕೆ 25 ಸಾವಿರ ಟೋಕನ್ ಮತ್ತು ಇತರೆ ದಿನಗಳಲ್ಲಿ ದಿನಕ್ಕೆ 15 ಸಾವಿರ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ. ಟೋಕನ್ ಪಡೆದ ಭಕ್ತರು ಅದೇ ದಿನ ದರ್ಶನ ಪಡೆಯುವಂತ ವ್ಯವಸ್ಥೆ ಮಾಡಲಾಗಿದೆ ಎಂದಿರುತ್ತಾರೆ. ಮೂರು ಪ್ರದೇಶಗಳಲ್ಲಿ 30 ಕೌಂಟರ್ಗಳ ಮೂಲಕ ಟೋಕನ್ಗಳನ್ನು ನೀಡಲಾಗುವುದು ಮತ್ತು ನಿಗದಿತ ಕೋಟಾ ಪೂರ್ಣಗೊಂಡ ನಂತರ ಕೌಂಟರ್ಗಳನ್ನು ಮುಚ್ಚಲಾಗುತ್ತದೆ.
ಟೋಕನ್ ಇಲ್ಲದ ಭಕ್ತರು ನೇರವಾಗಿ ತಿರುಮಲ ತಲುಪಿದರೆ ಅಲ್ಲಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ಮೂಲಕ ಶ್ರೀವಾರಿ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಈಗಿನ ವ್ಯವಸ್ಥೆಗಳನ್ನು ನೋಡಿಕೊಂಡು ಆಗುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಹಂತಹಂತವಾಗಿ ಟೋಕನ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಆಧಾರ್ ನೋಂದಣಿ ಮಾಡಿಸಿ ಟೋಕನ್ ನೀಡುವುದರಿಂದ ಭಕ್ತರು ದರ್ಶನ ಪಡೆದಿರಲಿ,ಪಡೆಯದೆ ಇರಲಿ ತಿಂಗಳಿಗೊಮ್ಮೆ ಮಾತ್ರ ಟೋಕನ್ ಪಡೆಯಲು ಅವಕಾಶವಿರುತ್ತದೆ.
ಟಿಟಿಡಿ ಇಒ ಧರ್ಮಾರೆಡ್ಡಿ ಅವರೆ ತಿಳಿಸಿರುವಂತೆ ಸಾಮಾನ್ಯ ಭಕ್ತಾದಿಗಳಿಗೂ ಅನಕೂಲ ಆಗುವಂತೆ ಕಾಯುವ ಸಮಯವನ್ನು ಕಡಿಮೆ ಮಾಡಲು,ಪ್ರಾಯೋಗಿಕವಾಗಿ ವಿಐಪಿ ದರ್ಶನದ ಸಮಯವನ್ನು ಡಿಸೆಂಬರ್ 1 ರಿಂದ ಬೆಳಿಗ್ಗೆ 8 ಗಂಟೆಗೆ ಬದಲಾಯಿಸಲಾಗುತ್ತದೆ ಇದರಿಂದ ಸಾಮಾನ್ಯರಿಗೂ ದರ್ಶನ ಸೌಲಭ್ಯದ ಪ್ರಯೋಜನ ಕಲ್ಪಿಸಿದಂತಾಗುತ್ತದೆ ವಸತಿ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆ ಮಾಡಲು ಶ್ರೀವಾಣಿ ಟ್ರಸ್ಟ್ ಮೂಲಕ ಮಾಧವಂ ವಿಶ್ರಾಂತಿ ಗೃಹದಲ್ಲಿ ವಸತಿ ಒದಗಿಸಲಾಗುವುದು ಎಂದಿರುತ್ತಾರೆ.