ನ್ಯೂಜ್ ಡೆಸ್ಕ್: ಕಣಿವೆ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು ಈ ತಿಂಗಳ 12 ರಂದು ಶನಿವಾರ ಮತದಾನ ನಡೆಯಲಿದೆ ಹಿಮಾಚಲ ಪ್ರದೇಶದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ,ರಾಜ್ಯವನ್ನು ರೂ.64,904 ಕೋಟಿ ಸಾಲದಿಂದ ಪಾರು ಮಾಡುವುದು ಅಷ್ಟಕಷ್ಟ ಎನ್ನಲಾಗಿದೆ ಇಂತಹ ರಾಜ್ಯದಲ್ಲಿ ಇಲ್ಲಿನ ಸರ್ಕಾರಕ್ಕೆ ಪ್ರಮುಖ ಸವಾಲಾಗಿದೆ. ಆದಾಗ್ಯೂ ಇಲ್ಲಿನ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಪರವಾಗಿ ಸ್ಪರ್ಧಿಸುವವರಲ್ಲಿ ಬಹುತೇಕ ಅಭ್ಯರ್ಥಿಗಳು ಕುಬೇರರು ಎಂಬುದು ಗಮನಾರ್ಹ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್) ವರದಿಯ ಪ್ರಕಾರ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಶೇಕಡಾ 90 ರಷ್ಟು ಕೋಟ್ಯಾಧಿಪತಿಗಳು. ಬಿಜೆಪಿಯಿಂದ ಸ್ಪರ್ಧಿಸುತ್ತಿರುವವರಲ್ಲಿ ಶೇ 82ರಷ್ಟು ಮಂದಿ ಕೋಟ್ಯಾಧಿಪತಿಗಳು. ಒಟ್ಟು 61 ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು 56 ಬಿಜೆಪಿ ಅಭ್ಯರ್ಥಿಗಳು ಕೋಟಿ ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿಯಿಂದ ಶಿಮ್ಲಾದ ಚೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಬಲ್ವೀರ್ ಸಿಂಗ್ ವರ್ಮಾ 128 ಕೋಟಿ ಆಸ್ತಿಯೊಂದಿಗೆ ಕುಬೇರನ ಸ್ಥಾನದಲ್ಲಿ ಅಗ್ರಸ್ಥಾನದಲ್ಲಿದ್ದರೆ. ಶಿಮ್ಲಾ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ 101 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಗ್ರೋಟಾ ಸ್ಥಾನಕ್ಕೆ ಸ್ಪರ್ಧಿಸಿರುವ ದಿವಂಗತ ಕಾಂಗ್ರೆಸ್ ನಾಯಕ ಜಿಎಸ್ ಬಾಲಿ ಅವರ ಪುತ್ರ ಆರ್ ಎಸ್ ಬಾಲಿ 96.33 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರಾಜ್ಯದ 68 ವಿಧಾನಸಭಾ ಸ್ಥಾನಗಳಿಗೆ 412 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ,ಇವರಲ್ಲಿ ಶೇಕಡಾ 55… ಅಂದರೆ 226 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು. ಆಮ್ ಆದ್ಮಿ ಪಕ್ಷದಲ್ಲೂ 35 ಮಂದಿ ಲಕ್ಷಾಧಿಪತಿಗಳು ಇದ್ದು ಒಟ್ಟು 67 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಎಸ್ಪಿ 53 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಇವರಲ್ಲಿ 13 ಮಂದಿ ಲಕ್ಷಾಧಿಪತಿಗಳಿದ್ದಾರೆ. ಸಿಪಿಎಂನಿಂದ ನಾಲ್ವರು ಲಕ್ಷಾಧಿಪತಿಗಳು ಸ್ಪರ್ಧಿಸಿದ್ದರೆ.ಉಳಿದಂತೆ 45 ಮಂದಿ ಲಕ್ಷಾಧಿಶ್ವರರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.
ಆಡಳಿತಾ ರೂಡ ಬಿಜೆಪಿ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿ ಕ್ಯಾಂಪೆನ್ ಮಾಡಿರುತ್ತಾರೆ. ಪ್ರಸ್ತುತ ತಿಂಗಳ ಭಾರತ್ ಜೋಡೋ ಯಾತ್ರೆಯಲ್ಲಿರುವ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮುನ್ನಡೆಸಿದರು. ಎಎಪಿಯಗೆ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಮುನ್ನಡೆಸಿದರು.