ಶ್ರೀನಿವಾಸಪುರ:ಬೆಸ್ಕಾಂ ಸಿಬ್ಬಂದಿ ವಿದ್ಯತ್ ಕಂಬದ ಮೇಲೆ ಹರಡಿದ್ದ ಮರದ ಕೊಂಬೆ ತಗೆಯುವಾಗ ಮುರಿದ ವಿದ್ಯತ್ ಕಂಬಗಳು ಶಾಲ ಆವರಣದಲ್ಲಿ ಉರಳಿ ಬಿದ್ದು ಆವರಣದಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿರುವ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯಲ್ಲಿ ಇಂದು ಮಧ್ಯಾನಃ ನಡೆದಿರುತ್ತದೆ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಮಾರಣಾಂತಿಕವಾಗಿ ಗಾಯಗೊಂಡಿರುತ್ತಾರೆ. ಕಂಬ ಬಿಳುತ್ತಿದ್ದಂತೆ ವಿದ್ಯಾರ್ಥಿಗಳು ಒಡಿ ಹೋಗಲು ಪ್ರಯತ್ನಿಸಿರುತ್ತಾರೆ ಆದರೂ ಸಾಧ್ಯವಾಗದೆ ಗಾಯಗೊಂಡಿರುತ್ತಾರೆ ಅವರು ಊಟ ತಟ್ಟೆ ನೀರಿನ ಬಾಟಲಗಳು ಚಪ್ಪಲಿಗಳು ಕಂಬದ ಅಡಿಯಲ್ಲಿ ಸಿಲುಕಿ ನುಜ್ಜುಗುಜ್ಜಾಗಿವೆ.
ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಾದು ಹೋಗಿರುವ ವಿದ್ಯತ್ ತಂತಿಗಳ ಮೇಲೆ ಶಾಲ ಅವರಣದಲ್ಲಿನ ಮರದ ಕೊಂಬೆಗಳು ಹರಡಿಕೊಂಡಿದ್ದು ಇದನ್ನು ತೆರವುಗೊಳಿಸುವ ಸಲುವಾಗಿ ಬೆಸ್ಕಾಂ ಸಿಬ್ಬಂದಿ ಕೊಂಬೆಗಳನ್ನು ಕಡದಿರುತ್ತಾರೆ ಕಡಿದ ಕೊಂಬೆಗಳು ವಿದ್ಯತ್ ತಂತಿಗಳ ಮೇಲೆ ಬಿದ್ದಾಗ ಅದನ್ನು ತಗೆಯಲು ಬೆಸ್ಕಾಂ ಸಿಬ್ಬಂದಿ ಇಲ್ಲದೆ ಹಗ್ಗ ಹಾಕಿ ಎಳೆದಾಗ ಎರಡು ವಿದ್ಯತ್ ಕಂಬಗಳು ನೆಲಕ್ಕೆ ಉರಳಿ ಬಿದ್ದಿವೆ ಈ ಸಂದರ್ಭದಲ್ಲಿ ಶಾಲಾ ಅವರಣದಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳ ಬಿದ್ದಿರುತ್ತದೆ ಇದರಿಂದ ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಪೋಲಿಸರು ತಿಳಿಸಿರುತ್ತಾರೆ.
ಬಿದ್ದ ಮರದ ಕೊಂಬೆ ಸಾಗಿಸಲು ಬೆಸ್ಕಾಂನವರು ಕ್ರೆನ್ ಬಳಸದೆ ಪೂರ್ವಯೋಜನೆ(preplan) ಹಾಗೆ ಶಾಲ ಅವರಣ ಎಂದು ಆಲೋಚಿಸದೆ ಹಗ್ಗ ಹಾಕಿ ಎಳೆದಿರುವುದೆ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಬಗ್ಗೆ ಬೆಸ್ಕಾಂ ಎಇಇ ರಾಮತಿರ್ಥ ಪ್ರತಿಕ್ರಿಯಿಸಿ ಮರದ ಕೊಂಬೆ ತೆರವು ಗೊಳಿಸಲು ವಿದ್ಯತ್ ಸಂಪರ್ಕ ಆಫ್ ಮಾಡಿ ಕಾರ್ಯಚರಣೆ ನಡೆಸುತ್ತ ಇದ್ದೆವು ಕಡೆದ ಮರದ ಕೊಂಬೆ ಅನಾಮತ್ತು ವಿದ್ಯತ್ ತಂತಿ ಬಿದ್ದಿರುತ್ತದೆ ಎನ್ನುತ್ತಾರೆ. ಘಟನಾ ಸ್ಥಳಕ್ಕೆ ಬೆಸ್ಕಾಂ ಇಇ ನಟರಾಜ್ ಗೌವನಪಲ್ಲಿ ಪೋಲಿಸ್ ವೃತ್ತ ನೀರಿಕ್ಷಕ ಜಯಾನಂದ್ ತೆರೆಳಿ ಪರಶೀಲನೆ ನಡೆಸಿರುತ್ತಾರೆ ಈ ಸಂಬಂದ ಗೌವನಪಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಮಕ್ಕೆ ಅಗ್ರಹ
ಘಟನೆಗೆ ಬೆಸ್ಕಾಂ ನಿರ್ಲಕ್ಷ್ಯತನವೆ ಘಟನೆಗೆ ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಅಧ್ಯಕ್ಷ ಸುಬ್ರಮಣಿ ಆರೋಪಿಸಿದ್ದು ಮಕ್ಕಳ ಬದುಕು ಕುರಿತಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದೆ ಮಕ್ಕಳ ಚಿಕಿತ್ಸೆಗೆ ಬೆಸ್ಕಾಂ ಅಧಿಕಾರಿಗಳೆ ಜವಬ್ದಾರಿ ಹೋರಬೇಕು ಎಂದು ಅಗ್ರಹಿಸಿರುತ್ತಾರೆ.