ಶ್ರೀನಿವಾಸಪುರ: ತೆಲುಗು ಚಿತ್ರ ರಂಗದ ರೆಬಲ್ ಸ್ಟಾರ್ ಕೃಷ್ಣಂರಾಜು ಹಾಗು ಪದ್ಮಶ್ರೀ,ನಟಶೇಖರ ಕೃಷ್ಣ ಅವರುಗಳಿಗೆ ಶ್ರೀನಿವಾಸಪುರದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗು ದಲಿತ ಸಮುದಾಯದ ಹಿರಿಯ ಮುಖಂಡ ಉಪ್ಪರಪಲ್ಲಿ ತಿಮ್ಮಯ್ಯ ಮಾತನಾಡಿ ತೆಲುಗು ಚಿತ್ರ ನಟರಾದ ಹಾಗು ಕೃಷ್ಣಂರಾಜು ಒಂದೇ ಸಮಕಾಲಿನ ನಟರು ಇಬ್ಬರು ಸಹ ನಿರ್ದೇಶಕರಾಗಿ ನಿರ್ಮಾಪಕರು ಆಗಿದ್ದರು.
ಬ್ರಿಟಿಷರ್ ವಿರುದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸಿತಾರಾಮರಾಜು ಪಾತ್ರ ಮಾಡುವ ಮೂಲಕ ತೆಲಗು ಸಿನಿಮಾ ಮೂಲಕ ದೊಡ್ಡಸ್ಟಾರ್ ಪಟ್ಟ ಗಳಿಸಿದ ಸೂಪರ್ ಸ್ಟಾರ್ ಕೃಷ್ಣ ಅದ್ಭುತವಾದ ಕಲಾವಿದ ಮಹಾನ್ ಸಾಹಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಕೌಟುಂಬಿಕ ಸಾಮರಸ್ಯದ ಅನೇಕ ಚಿತ್ರಗಳಲ್ಲಿ ನಟಿಸಿ ತೆಲಗು ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದ ಮೇರು ನಟರಾಗಿದ್ದ ಕೃಷ್ಣ ರಾಜಕೀಯವಾಗಿ ದೂರ ಉಳಿದಿದ್ದರು ಎಂದು ಅವರ ಜೀವನ ಚರಿತ್ರೆಯ ಕುರಿತಾಗಿ ಹೇಳಿದರು.ತೆಲಗು ಚಿತ್ರ ರಂಗದ ರೆಬೆಲ್ ಸ್ಟಾರ್ ಕೃಷ್ಣಂರಾಜು ಸಹ ಬಹುದೊಡ್ಡ ನಟ ರೆಬಲ್ ಸ್ಟಾರ್ ಕೃಷ್ಣಂರಾಜು 70 ದಶಕದಲ್ಲಿ ಸಾಮಜಿಕ ಸಂದೇಶಗಳನ್ನು ಸಾರುವ ಹಲವಾರು ಚಿತ್ರಗಳಲ್ಲಿ ನಟಿಸಿದ ಅವರು ರಾಜಕೀಯ ರಂಗದಲ್ಲೂ ರಾರಾಜಿಸಿ ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಇಬ್ಬರ ಅಗಲಿಕೆ ನಮ್ಮಂತ ಸಿನಿ ಪ್ರೇಕ್ಷಕರಿಗೆ ತುಂಬಲಾರದ ನಷ್ಟ ಎಂದರು.
ಆವಲಕುಪ್ಪ ಬಾಬು ಮಾತನಾಡಿ ರೆಬಲ್ ಸ್ಟಾರ್ ಎಂದು ಕೃಷ್ಣಂರಾಜು ಎಂದು ಖ್ಯಾತರಾಗಿದ್ದರು ಅವರು ಭಕ್ತ ಪ್ರಧಾನ ಪಾತ್ರಗಳಾದ ಭಕ್ತ ಕನ್ನಪ್ಪ,ಶ್ರೀಕೃಷ್ಣಾವತಾರಂ ನಂತ ದೇವರ ಸಿನಿಮಾ ರೈತಕುಟುಂಬಮ್, ಪುಟ್ಟಿಂಟಿ ಗೌರವಂ ನಂತ ಕೌಟಂಬಿಕ ಸಿನಿಮಾಗಳಲ್ಲಿ ನಟಿಸಿದ್ದರು. ಸೂಪರ್ ಸ್ಟಾರ್ ಕೃಷ್ಣ ಸಹ ತೆಲಗು ಸಿನಿಮಾ ರಂಗದ ಮೇರು ನಟ ಅವರು ಫ್ಯಾಂಟೆಸಿ ಐತಿಹಾಸಿಕ ಸಾಮಾಜಿಕ ಪೌರಾಣಿಕ ಸಿನಿಮಾಗಳಲ್ಲಿ ನಟಿಸಿ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದರು. ಈ ಇಬ್ಬರ ನಟರ ಸಾವು ಆಂಧ್ರದ ಗಡಿಯಲ್ಲಿರುವ ತೆಲಗು ಸಿನಿಮಾ ಪ್ರೇಕ್ಷಕರಾದ ನಮಗೆ ಅತ್ಯಂತ ನೋವಿನ ಸಂಗತಿ ಇಬ್ಬರ ಅಗಲಿಕೆ ತೆಲಗು ಸಿನಿಮಾ ರಂಗದ ಒಂದು ಶಕೆಯ ನಟರ ಅದ್ಯಾಯ ಮುಗಿದಂತಾಯಿತು ಎಂದರು.
ಈ ಸಂದರ್ಬದಲ್ಲಿ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ನಾಗರಾಜ್ ಪ್ರಮುಖ ದಲಿತ ಮುಖಂಡರಾದ ರಾಮಾಂಜಮ್ಮ,ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾದ್ಯಕ್ಷ ಬೈಚೇಗೌಡ, ನೌಕರರ ಸಂಘದ ಉಪಾದ್ಯಕ್ಷ ಶಿಕ್ಷಕಕೃಷ್ಣಪ್ಪ, ಪತ್ರಕರ್ತರಾದ ರಮೇಶ್, ಉಪೇಂದ್ರ, ಸೋಮಶೇಖರ್, ಆವಲಕುಪ್ಪ ನಾಗರಾಜ್, ಕೃಷ್ಣ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Saturday, November 23