ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಸದಾ ಗಿಜಗೂಡುವ ರಸ್ತೆಯೆಂದೆ ಗುರಿತಿಸಿ ಜೊತೆಗೆ ಅತಿಹೆಚ್ಚು ತೆರಿಗೆ ಕಟ್ಟುವ ಪ್ರದೇಶ ಎಂದು ಬಿಂಬಿತವಾಗಿ ಎಲೆಕ್ಟ್ರಾನಿಕ್ಸ್,ಎಲೆಕ್ಟ್ರಿಕಲ್,ಹಾರ್ಡ್ವೇರ್,ವಾಹನಗಳ ಬಿಡಿಭಾಗಗಳು ಸೇರಿದಂತೆ ಹಲವಾರು ವಸ್ತುಗಳ ಬೃಹತ್ ಅಂಗಡಿಗಳ ವ್ಯಾಪಾರ ಕೇಂದ್ರವಾಗಿರುವ ಎಸ್ಪಿ ರೋಡ್ (SP Road)ಅನ್ನು ಅಲ್ಲಿನ ಅಂಗಡಿ ಮಾಲಿಕರು ಡಿಸೆಂಬರ್ 13ಕ್ಕೆ ಬಂದ್ ಮಾಡಲಿದ್ದಾರಂತೆ!
ಬೆಂಗಳೂರಿನ ಮಹಾನಗರದಲ್ಲಿ ವ್ಯಾಪಾರಿ ಕೇಂದ್ರವಾಗಿ ಹಾಟ್ಸ್ಪಾಟ್ ರಸ್ತೆಯಂದು ಗುರುತಿಸಿಕೊಂಡಿರುವ ಎಸ್ಪಿ ರೋಡ್ ಬಂದ್ ಆಗಲಿದಿಯಂತೆ ಡಿಸೆಂಬರ್ 13ಕ್ಕೆ ಎಸ್ಪಿ ರೋಡ್ ಸಂಪೂರ್ಣ ಸ್ತಬ್ಧವಾಗಲಿದೆ. ಅಂದು ಹಾರ್ಡ್ವೇರ್,ಎಲೆಕ್ಟ್ರಿಕಲ್ ಸೇರಿ ಪ್ರತಿ ವಹಿವಾಟನ್ನು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಅಲ್ಲಿನ ವ್ಯಾಪಾರಸ್ಥರು ಬಂದ್ ಮಾಡಿ,ಸಾವಿರಾರು ವರ್ತಕರು ವಿಧಾನಸೌಧದತ್ತ ಮೆರವಣಿಗೆ ಹೋಗಲಿದ್ದಾರಂತೆ.
ಕೆ.ಆರ್ ಮಾರ್ಕೆಟ್ನಿಂದ (K.R Market) ಎಸ್ಪಿ ರಸ್ತೆ ಮೂಲಕ ಟೌನ್ಹಾಲ್ ಕಡೆಗೆ ಬಂದಿರುವ ಜಲಮಂಡಳಿಯ ಒಳಚರಂಡಿ ಒಡೆದಿದೆ,ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯ ವಾರ್ಡ್ನ ರಸ್ತೆ, ಚರಂಡಿಯ ಕಲುಷಿತ ನೀರು,ಎಸ್ಪಿ ರಸ್ತೆಯ ಅಂಗಡಿಗಳಿಗೆ ನುಗ್ಗುತ್ತೆ. ಇದರಿಂದ ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಗಬ್ಬುವಾಸನೆ ಬರುತ್ತದೆ ವ್ಯಾಪಾರಸ್ಥರು ಅಂಗಡಿಗಳಿಗೆ ಬರೋಕೆ ಆಗುತ್ತಿಲ್ಲ. ಪ್ರತಿನಿತ್ಯ ಲಕ್ಷಾಂತರ ವ್ಯಾಪಾರ ವಹಿವಾಟು ಆಗುತಿತ್ತು ಈಗ ನಮಗೆ ವ್ಯಾಪಾರ ಆಗುತ್ತಿಲ್ಲ ನಾವು ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿದ್ದೇವೆ. ಕ್ಷೇತ್ರದ ಶಾಸಕರನ್ನು ಕೇಳಿದರೆ ನೀವು ನಮಗೆ ಓಟ್ ಹಾಕಿಲ್ಲ ಎನ್ನುತ್ತಾರೆ.
ರಸ್ತೆಯ ಪಕ್ಕದಲ್ಲೇ ಪಾರ್ಕ್ ಇದೆ ಅದರ ನಿರ್ವಹಣೆ ಇಲ್ಲದೆ ಅದ್ವಾನಗೊಂಡು ಸ್ವರೂಪ ಕಳೆದುಕೊಳ್ಳುತ್ತಿದೆ,ಫುಟ್ಪಾತ್ ಮೇಲೆನೇ ಜನ ಮೂತ್ರ ವಿಸರ್ಜನೆ ಮಾಡ್ತಾರೆ ಇದರಿಂದ ಪಾದಾಚಾರಿಗಳ ಓಡಾಟಕ್ಕೂ ಉಪಯೋಗವಾಗುತ್ತಿಲ್ಲ ಅಂಗಡಿಗಳ ಮುಂದಿರುವ ಚರಂಡಿಗಳಲ್ಲಿ ಹಲವು ವರ್ಷಗಳಿಂದ ಹೂಳನ್ನು ತೆಗೆಯದ ಪರಿಣಾಮ ಸ್ವಲ್ಪ ಮಳೆಯಾದ್ರೂ ಮೋರಿ ಮೇಲೆ ಕೊಳಚೆ ನೀರು ಹರಿಯುತ್ತದೆ ಈ ಬಗ್ಗೆ ವರ್ತಕರು ವಿಧಾನ ಸೌದತ್ತ ಮೆರವಣಿಗೆ ಹೋಗುವ ಮೂಲಕ ಸರ್ಕಾರ ಗಮನ ಹರಿಸಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳಲಾಗಿದೆ.