ಶ್ರೀನಿವಾಸಪುರ:ಶ್ರೀನಿವಾಸಪುರದ ವಿದ್ಯಾರ್ಥಿಗಳು ಕಂಪನಿ ಸೆಕೆರೆಟರಿ ಕೊರ್ಸ್ Company Secretary ಒದಲು ಬೆಂಗಳೂರು ತಿರುಪತಿ ಹೈದರಾಬಾದ್ ನಂತಹ ನಗರಗಳಿಗೆ ಹೋಗಾಬೇಕಾದ ಅನಿವಾರ್ಯತೆ ಇತ್ತು ಅಂತ ಕಂಪನಿ ಸೆಕೆರೆಟರಿ ವಿದ್ಯಾಭ್ಯಾಸ ಮಾಡಲು ಶ್ರೀನಿವಾಸಪುರದಲ್ಲಿಯೇ ಕೇಂದ್ರ ಪ್ರಾರಂಭವಾಗಿದೆ.
ಭಾರತದ ಪ್ರಖ್ಯಾತ ಐ.ಸಿ.ಎಸ್.ಸಿThe Institute of Company Secretaries of India (ICSI) ಸಂಸ್ಥೆ ಶ್ರೀನಿವಾಸಪುರದ ಗಂಗೋತ್ರಿ ಕಾಲೇಜ್ ಸಹಯೋಗದೊಂದಿಗೆ ಪ್ರಾರಂಭಿಸಿದೆ.
ಪಟ್ಟಣದಲ್ಲಿರುವ ಗಂಗೋತ್ರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಐ.ಸಿ.ಎಸ್.ಸಿThe Institute of Company Secretaries of India (ICSI) ಕೋರ್ಸ್ ತರಬೇತಿ ಕೇಂದ್ರ ನಡೆಯಲಿದೆ ಎಂದು ಗಂಗೋತ್ರಿ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಅಮರನಾಥ್ ಹೇಳಿದರು. ಅವರು ಮಾತನಾಡಿ ಕಂಪನಿ ಸೆಕೆರೆಟರಿ ತರಬೇತಿ ಪಡೆದವರು ದೇಶ ವಿದೇಶಗಳಲ್ಲಿ ಕಾರ್ಪೋರೇಟರ್ ಸಂಸ್ಥೆಗಳಲ್ಲಿ ಅತ್ಯುನತ್ತ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಇದೊಂದು ಉತ್ತಮ ಅವಕಾಶ ಬಳಸಿಕೊಳ್ಳುವಂತೆ ಹೇಳಿದರು.
ICSI ಸಂಸ್ಥೆಯ ಬೆಂಗಳೂರು ಕಚೇರಿ ಮುಖ್ಯಸ್ಥ ನಮನ್ ಜೋಷಿ ಮಾತನಾಡಿ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ICSI ಸಂಸ್ಥೆ ಕಂಪನಿ ಸೆಕೆರೆಟರಿ (CS) ಕೋರ್ಸ್ನ ವಿದ್ಯಾರ್ಥಿಗಳಿಗೆ ಉನ್ನತ-ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವ ಜೊತೆಗೆ CS ಸದಸ್ಯರಿಗೂ ಉತ್ತಮ ಗುಣಮಟ್ಟದ ಸೆಟ್ ಮಾನದಂಡಗಳನ್ನು ಒದಗಿಸುತ್ತಿದೆ ಪ್ರಸ್ತುತ, ICSI ರೋಲ್ನಲ್ಲಿ 65,000 ಕ್ಕೂ ಹೆಚ್ಚು ಸದಸ್ಯರು ಮತ್ತು ಸುಮಾರು 2.5 ಲಕ್ಷ ವಿದ್ಯಾರ್ಥಿಗಳು ಇರುವುದಾಗಿ ಹೇಳಿದರು.
ಗಂಗೋತ್ರಿ ಕಾಲೇಜು ಸಂಸ್ಥಾಪಕ ಕಾರ್ಯದರ್ಶಿ ಮುರಳಿನಾಥ್ ಮಾತನಾಡಿ ಗ್ರಾಮೀಣ ಭಾಗದ ಯುವಕರ ಭವಿಷ್ಯತ್ತು ಬದಲಾವಣೆಗೆ ಕಾಲ ಕೂಡಿ ಬಂದಿದೆ CS ಕೋರ್ಸ್ನ ತರಬೇತಿ ಪಡೆದು ಬದಲಾವಣೆಯ ಜಗತ್ತಿನಲ್ಲಿ ಜಾಗತಿಕ ಮಟ್ಟದಲ್ಲಿ ಉನ್ನತ ಉದ್ಯೋಗದ ಅವಕಾಶ ಪಡೆದು ತಮ್ಮ ಬದುಕಿನಲ್ಲಿ ಹೊಸ ಹೆಜ್ಜೆ ಇಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ICSI ಸಂಸ್ಥೆಯ ಬೆಂಗಳೂರು ಕಚೇರಿ ನಾಗೇಂದ್ರ ರಾವ್,ವಿದ್ಯಾಧಿಕಾರಿ ನೂರ್ ಸುಮಯ್ಯ,ಸದಸ್ಯ ಕೃಷ್ಣಮೋಹನ್ ಗಂಗೋತ್ರಿ ಕಾಲೇಜು ಪ್ರಾಂಶುಪಾಲ ಸುಬ್ರಮಣಿ ಮತ್ತು ಸಿಬ್ಬಂದಿ ಮುಂತಾದವರು ಇದ್ದರು.