ಶ್ರೀನಿವಾಸಪುರ:ಮಾವು ಬೆಳೆಗಾರರಿಗೆ ಬೆಳೆ ವಿಮಾ ಕಂಪನಿ ವಂಚನೆಮಾಡಿರುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಶ್ರೀನಿವಾಸಪುರ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಮಾವು ಬೆಳೆಗಾರರ ಬೆಡಿಕೆ ಮನವಿ ಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿಬೇಕು ಎಂದು ಪಟ್ಟು ಹಿಡಿದು ಮಾವುಬೆಳೆಗಾರರು ಇಂದಿರಾಭವನ್ ವೃತ್ತದಲ್ಲಿ ಧರಣಿ ನಿರತರಾಗಿದ್ದಾರೆ.
ತಹಶಿಲ್ದಾರ್,ಇನ್ಸಪೇಕ್ಟರ್ ಮಾತಿಗೂ ಜಗ್ಗದ ಬೆಳೆಗಾರು!
ಬಂದ್ ವಾಪಸ್ಸು ಪಡೆಯದೆ ಮಾವುಬೆಳೆಗಾರರು ಬಿಗಿ ಪಟ್ಟು ಹಿಡಿದಿದ್ದ ಹಿನ್ನಲೆಯಲ್ಲಿ ಮಧ್ಹಾನದ ಹೊತ್ತಿಗೆ ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಶೀರಿನ್ ತಾಜ್,ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಖುದ್ದಾಗಿ ಧರಣಿ ನಿರತ ಮಾವು ಬೆಳೆಗಾರರ ಬಳಿ ಬಂದು ಅವರೊಂದಿಗೆ ಡಾಂಬರು ನೆಲದಲ್ಲಿ ಕುಳಿತು ಬಂದ್ ಹಿಂಪಡೆಯುವಂತೆ ಮನವರಿಕೆ ಮಾಡಿದರಾದರೂ ಮಾವು ಬೆಳೆಗಾರರ ನೋವು ಭಾವನೆಗಳನ್ನು ಅರ್ಥಮಾಡಿಕೊಳ್ಳದ ಜಿಲ್ಲಾಧಿಕಾರಿ ಅಥಾವ ಜಿಲ್ಲಾ ಉಸ್ತುವಾರಿ ಸಚಿವ ಸ್ಥಳಕ್ಕೆ ಬಂದು ಖುದ್ದು ಮನವಿ ಸ್ವೀಕರಿಸಿ ಬೆಳೆಹಾನಿ ಪರಿಹಾರ ಪೂರ್ಣಪಾವತಿ, ಬೆಳೆ ವಿಮೆ ಪರಿಹಾರ ಹಾಗು ತಾಲೂಕಿನಲ್ಲಿ ಮಾವು ಜ್ಯೂಸ್ ಫ್ಯಾಕ್ಟರಿ ತೆರೆಯಲು ವಾಗ್ದಾನ ನೀಡುವಂತೆ ಧರಣಿ ಮುಂದುವರಿಸಿದರು.
ಮಾವು ಬೆಳೆಗಾರ ವಿಚಾರದಲ್ಲಿ ಸರ್ಕಾರದ ಧೋರಣೆ ಬದಲಾಗಬೇಕು ಬೇಡಿಕೆ ಈಡೆರಿಸುವ ಕುರಿತಂತೆ ನ್ಯಾಯ ಒದಗಿಸಿಕೊಡಬೇಕು ಎಂದು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಬೆಳೆಗಾರರು ತಮ್ಮ ಆಕ್ರೋಶ ಹೋರಹಾಕಿದರು.
ಈ ಸಂದರ್ಬದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ,ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್, ಕುಮಾರ್ ಕೆ ಪಿ ಆರ್ ಎಸ್ ರಾಜ್ಯ ಉಪಾಧ್ಯಕ್ಷ ಪಿ ಆರ್ ಸೂರ್ಯನಾರಾಯಣ, ಸಂಘದ ಪದಾಧಿಕಾರಿಗಳಾದ ಎನ್ ವೀರಪ್ಪ ರೆಡ್ಡಿ, ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ, ಬೈಚೇಗೌಡ, ಸೈಯದ್ ಫಾರೂಕ್,ವಿಶ್ವನಾಥ ರೆಡ್ಡಿ,ಗಂಧಮ್ ಶ್ರೀನಿವಾಸರೆಡ್ದಿ,ನಿಲಟೂರು ಚಂದ್ರಶೇಖರೆಡ್ಡಿ, ಚಲ್ದಿಗಾನಹಳ್ಳಿಬೈರೆಡ್ಡಿ,ಶಿವರಾಜ್, ಶ್ರೀಧರ್ ಮುಂತಾದವರು ಭಾಗವಹಿಸಿದರು.