ನ್ಯೂಜ್ ಡೆಸ್ಕ್:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಮಾಂಡಸ್ ಚಂಡಮಾರುತದಿಂದ ಕೋಲಾರ,ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯ ಜೊತೆಗೆ ಸಾಧಾರಣ ಮಳೆ ಅಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಹೇಳಿದೆ.
ಇಂದು ಸಂಜೆಯ ಹೊತ್ತಿಗೆ ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗುವ ಸಾದ್ಯತೆ ಇರುವುದಾಗಿ ಹೇಳಲಾಗುತ್ತಿದೆ. ಮೋಡ ಕವಿದ ವಾತಾವರಣ ಮುಂದುವರೆಯಲಿದೆ.
ತಮಿಳುನಾಡಿನಲ್ಲಿ ಮಾಂಡೋಸ್ ಚಂಡಮಾರುತ ಅಬ್ಬರ ಜೋರಾಗಿದ್ದು ಸೈಕ್ಲೋನ್ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಅಂದಾಜು 6ಮಿ.ಮೀ ಮಳೆ ಸಾಧ್ಯತೆ ಇದೆ. ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು,ಮಂಡ್ಯ,ಚಾಮರಾಜನಗರ,ತುಮಕೂರು,ಚಿಕ್ಕಮಂಗಳೂರು,ರಾಮನಗರದಲ್ಲಿ ಡಿಸೆಂಬರ್ 13 ರವರಿಗೂ ಯಲ್ಲೊ ಅಲರ್ಟ್ ಗೋಷಿಸಲಾಗಿದೆ ಆಂಧ್ರದ ರಾಯಲಸೀಮಾ ಜಿಲ್ಲೆ ಸೇರಿದಂತೆ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜಾ ನೀಡಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ “ಮಾಂಡೋಸ್” ಚಂಡಮಾರುತವು ಸುಮಾರು 12 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತ ನೈಋತ್ಯಕ್ಕೆ ಪ್ರಯಾಣಿಸುತ್ತದೆ ಟ್ರಿಂಕೋಮಲಿಯಿಂದ 240 ಕಿಮೀ ಉತ್ತರ-ಈಶಾನ್ಯಕ್ಕೆ (ಶ್ರೀಲಂಕಾ), ಜಾಫ್ನಾದಿಂದ 270 ಕಿಮೀ ಪೂರ್ವ-ಈಶಾನ್ಯಕ್ಕೆ (ಶ್ರೀಲಂಕಾ), ಕಾರೈಕಲ್ನಿಂದ 270 ಕಿಮೀ ಪೂರ್ವ-ಆಗ್ನೇಯಕ್ಕೆ, ಚೆನ್ನೈನಿಂದ 350 ಕಿಮೀ ಆಗ್ನೇಯದಲ್ಲಿ ಕೇಂದ್ರೀಕೃತವಾಗುತ್ತದೆ.
ಐಎಂಡಿ (IMD) ಪ್ರಕಾರ, ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರಚನೆಯಾದ ಚಂಡಮಾರುತವನ್ನು
ಮಾಂಡೋಸ್ ಚಂಡಮಾರುತವಾಗಿ ಪರಿಣಮಿಸಲಿದೆ. ಕ್ರಮೇಣ ದುರ್ಬಲಗೊಂಡು ಸಂಜೆ ಹೊತ್ತಿಗೆ ಬಿರುಗಾಳಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಪುದುಚೇರಿ ಮತ್ತು ಶ್ರೀಹರಿಕೋಟಾ ನಡುವೆ ಮಹಾಬಲಿಪುರಂನಲ್ಲಿ ಕರಾವಳಿಯನ್ನು ದಾಟಲಾಗುತ್ತದೆ. ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂದು ಮಧ್ಯರಾತ್ರಿ 65-75 ಕಿಮೀ ವೇಗದಲ್ಲಿ ಗಂಟೆಗೆ 85 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾದ್ಯತೆ ಇದ್ದು ಮಂಡೂಸ್ ಚಂಡಮಾರುತದ ಬಗ್ಗೆ ವಿಶೇಷವಾಗಿ ಆಂಧ್ರದ ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ಜಾಗರೂಕರಾಗಿರಲು ತಿಳಿಸಲಾಗಿದೆ.
ತಿರುಮಲದಲ್ಲಿ ಗಡಗಡ ಚಳಿ!
ಮಂಡೂಸ್ ಚಂಡಮಾರುತದ ಎಫೇಕ್ಟ್ ಶ್ರೀ ವೆಂಕಟೇಶ್ವರನ ಸನ್ನಿಧಾನ ತಿರುಮಲ ಬೆಟ್ಟದ ಮೇಲೆ ಗಡಗಡ ಚಳಿಯಿದ್ದು ಇಂದು ರಾತ್ರಿ ತಮಿಳುನಾಡು-ಮಹಾಬಲಿಪುರಂನ ಕರಾವಳಿಯಲ್ಲಿ ಶನಿವಾರ ಚಂಡಮಾರುತ ತೀರ ದಾಟುವ ಸಾಧ್ಯತೆ ಇರುವುದರಿಂದ ಮಾಂಡೋಸ್ ಚಂಡಮಾರುತದ ಪರಿಣಾಮ ತಿರುಮಲಕ್ಕೆ ಅಪ್ಪಳಿಸಿದೆ. ಬೆಟ್ಟದ ಮೇಲೆ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಘಾಟ್ ರಸ್ತೆಗಳು ಭೂಕುಸಿತವಾಗಬಹುದು ಎಂದು ಮುಂಜಾಗ್ರತೆಯಿಂದ ಟಿಟಿಡಿ ಅಧಿಕಾರಿಗಳು ಕ್ರೇನ್ ಹಾಗೂ ಆಟೋ ಕ್ಲಿನಿಕ್ ವಾಹನಗಳನ್ನು ಸಿದ್ಧವಾಗಿಸಿಕೊಂಡಿದ್ದಾರೆ.