- ರಾಜ್ಯದಲ್ಲಿ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿ ಬಿಡುಗಡೆ.
- ವಿಮಾನ ನಿಲ್ದಾಣದಲ್ಲಿ ಹೊರಗಿನಿಂದ ಬರುವವರ ಸಂಪೂರ್ಣ ತಪಾಸಣೆ.
- ಬೂಸ್ಟರ್ ಡೋಸ್ ತೆಗೆದುಕೊಳ್ಳದವರು ಈ ಕೂಡಲೆ ಪಡೆದುಕೊಳ್ಳುಲು ಮನವಿ.
- ಪ್ರತಿ ತಾಲ್ಲೂಕಲ್ಲೂ ಕೋವಿಡ್ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ.
ನ್ಯೂಜ್ ಡೆಸ್ಕ್: ಕರ್ನಾಟಕದಲ್ಲೂ ಮುನ್ನಚ್ಚೆರಿಕೆಯಾಗಿ ಮುಖ್ಯಮಂತ್ರಿ ಅರೋಗ್ಯಸಚಿವರು ಅಧಿಕಾರಿಗಳ ಸಭೆ ನಡೆಸಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು ಅದರಂತೆ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಮಾಸ್ಕ್ ಕಡ್ಡಾಯ ಸೇರಿದಂತೆ, ಸಾರ್ವಜನಿಕ ಸಭೆ,ಮದುವೆ ಸಮಾರಂಭಗಳಿಗೆ ಜಾಗ್ರತೆ ವಹಿಸುವಂತೆ ಸೂಚಿಸಿದೆ.
ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಆಸ್ಪತ್ರೆ ಇರುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳು ಕೂಡಾ ಕೋವಿಡ್ -19 ರೋಗಿಗಳಿಗೆ ಕೆಲವು ಹಾಸಿಗೆಗಳನ್ನು ಕಾಯ್ದಿರಿಸುತ್ತವೆ. ಶೇ. 80 ರಷ್ಟು ಜನರು ಇನ್ನೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ. ಅಂತಹವರು ಕೂಡಲೇ ಡೋಸ್ ಪಡೆದುಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಸಲಹೆ ನೀಡಿದ್ದಾರೆ.
ಸಾಕಷ್ಟು ಲಸಿಕೆ ದಾಸ್ತಾನು ಇದೆಯೇ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ.ವಿಮಾನ ನಿಲ್ದಾಣದಲ್ಲಿ ಹೊರಗಿನಿಂದ ಬರುವವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಕೆಲ ಶಸಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು ಕೇಂದ್ರದ ಸಲಹೆಯನ್ನು ರಾಜ್ಯಗಳು ಅನುಸರಿಸುತ್ತಿವೆ ಎಂದಿರುತ್ತಾರೆ.
ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ, ಪ್ರಪಂಚದಾದ್ಯಂತ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯಾಗಿದ್ದು, ಮುಂಬರುವ ಕ್ರಿಸ್ಮನಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಗತ್ಯವಾಗಿ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
ಮುಚ್ಚಿದ ಸ್ಥಳಗಳು ಅಂದರೇ, ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಕಚೇರಿಗಳು ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನಯಾನ ಸಂದರ್ಭದಲ್ಲಿ ಮಾಸ್ಕ್ ಧರಿಸಿವುದು ತೀರಾ ಅಗತ್ಯವಾಗಿರುತ್ತದೆ. ಅದರಲ್ಲೂ, ವಿಶೇಷವಾಗಿ ವೃದ್ಧರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಒಳಾಂಗಣದಲ್ಲಿದ್ದಾಗಲೂ ಮಾಸ್ಕ್ ಧರಿಸಿವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಉಳಿದಂತೆ ಕೋವಿಡ್ ಬೂಸ್ಟರ್ ಡೋಸ್ ಪಡೆಯದವರು ಶೀಘ್ರವಾಗಿ ಲಸಿಕೆ ಪಡೆದುಕೊಳ್ಳುವಂತೆ ಹೇಳಿದ್ದಾರೆ.
- ಚೀನಾದ ಸೋಂಕಿತರು ರೋಗಲಕ್ಷಣ ತೋರಿಸದಿದ್ದು ಇಂದಿನ ಆತಂಕಕ್ಕೆ ಕಾರಣ
- ಲಾಕ್ಡೌನ್ ತೆರವುಗೊಳಿದಾಗ ಸೋಂಕು ಇದ್ದ ಚೀನಿಯರು ಉದಾಸೀನತೆ ತೋರಿದ್ದು
- ಆಘಾತಕಾರಿ ಸಂಗತಿ ಬೂಸ್ಟರ್ ಡೋಸ್ ಪಡೆದವರಿಗು ಸೋಂಕು ತಗುಲುತ್ತಿದೆ.
- ದುರ್ಬಲ ಲಸಿಕೆ,ಅಸಮರ್ಪಕ ಲಸಿಕೆ ನೀತಿಯಿಂದ ಚೀನಾಗೆ ಕಂಟಕ.
2 ವರ್ಷಗಳ ಕಾಲ ಜನರನ್ನು ರಣ ರಕ್ಕಸನಂತೆ ಕಾಡಿ ಹಿಂಡಿ ಹಿಪ್ಪೆ ಮಾಡಿದ್ದ ಕೊರೊನಾ (Coronavirus), ಚೀನಾದಲ್ಲಿ ಅಬ್ಬರಿಸಿ ಅಲ್ಲಿನ ಜನರನ್ನು ನರಕದ ಕೂಪಕ್ಕೆ ತಳ್ಳಿದೆ ನೂರಾರು ಜನರ ನರಳಾಟ ಕಣ್ಣೆದುರು ರಾಚುತ್ತವೆ. ಈ ಹಿಂದಿನ ಕೊರೋನಾದ ಎಲ್ಲಾ ದಾಖಲೆಗಳನ್ನು ಮೀರಿ ಅಮೆರಿಕ,ಇಟಲಿ,ಭಾರತದ ಕೆಲವು ರಾಜ್ಯಗಳಲ್ಲಿ ಸಂಭವಿಸಿದಕ್ಕಿಂತ ಕರ್ಣಕಟೋರವಾದ ಕೋವಿಡ್ ಅಂತರ್ನಾದ ದೃಶ್ಯಗಳು ಚೀನಾದ ಒಡಲಿನಿಂದ ಹೊರಬರುತ್ತಿವೆ. ವಿಶ್ವದ ಮಿಕ್ಕೆಲ್ಲ ನಗರಗಳು ಕೊರೊನಾವನ್ನು ಹೊರದಬ್ಬಿ ಮಾಮೂಲಿ ಜನಜೀವನಕ್ಕೆ ತೆರೆದುಕೊಂಡಿದ್ದರೂ ಚೀನಾ ಮಾತ್ರ ಕೊರೊನಾ ವಂಶವಾಹಿನಿಯನ್ನು ಆಕ್ಟೋಪಸ್ ನಂತೆ ಸಾಕುತ್ತ ಬಂದು ಈಗ ಜನರನ್ನು ಸಾವಿನಂಚಿಗೆ ನೂಕುತ್ತಿದೆ. ಕೊರೋನಾ ಕೂಡ ಚೀನಾ ದೇಶವನ್ನು ತನ್ನ ಮಾಯಾಪಾಶದಲ್ಲಿ ಕಟ್ಟಿಹಾಕಿಕೊಂಡಿದೆ. ಚೀನಾದಲ್ಲಿ ಕರೋನಾ ಎಡವಟ್ಟಾಗಲು 5 ಪ್ರಮುಖ ಕಾರಣಗಳನ್ನು ಎನ್ನಲಾಗಿದ್ದು,ದುರ್ಬಲ ಲಸಿಕೆ, ಝೀರೋ ಕೋವಿಡ್ ನೀತಿ, ಸಂಬಂಧದೊಳಗೆ ಮದುವೆ, ಅಸಮರ್ಪಕ ಲಸಿಕೆ ನೀತಿ, ದೋಷಯುಕ್ತ ಆಹಾರ ಕ್ರಮ ಕಾರಣವಂತೆ.
ಕರೋನಾದ ಜ್ವರದಲ್ಲೂ ಶವ ಸುಡುತ್ತಿರುವ ಸ್ಮಶಾನದ ಸಿಬ್ಬಂದಿ ಬೇಡಪ್ಪ ಬೇಡ ಯಾವ ಶತೃವಿಗೂ ಬೇಡ ಚೀನಾದ ಪರಿಸ್ಥೀತಿ.
ಹೆಸರು ಬದಲಿಸಿಕೊಂಡು BF.7 ಹೆಸರಲ್ಲಿ ಜನರನ್ನು ಕಾಡಲು ಸಜ್ಜಾಗಿರುವ ಕರೋನಾ ಚೀನಾವನ್ನು ಕಾಡುತ್ತಿರುವ ಪರಿ ಇದು ಚೀನಾದಲ್ಲಿ ಕೋವಿಡ್ ಮಹಾ ಸ್ಫೋಟ ಉಂಟಾಗಿರುವ ಹಿನ್ನೆಲೆಯಲ್ಲಿ ಗಡಿದಾಟಿ ಭಾರತದಲ್ಲೂ ಕರೋನಾ ಅಬ್ಬರಿಸಬಹುದು ಎಂದು ಭಾರತ ಕೂಡಾ ಸರ್ವ ರೀತಿಯಲ್ಲೂ ಸಜ್ಜಾಗುತ್ತಿದೆ ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಳ ಸೇರಿದಂತೆ ಕೋವಿಡ್ ಸೋಂಕಿನ ಸ್ಥಿತಿಗತಿ ಮೇಲೆ ಕಣ್ಗಾವಲು ವಹಿಸುವ ಅಗತ್ಯತೆಯ ನೀಗಾವಹಿಸಲಾಗುತ್ತಿದೆ.