- ತೆಲಂಗಾಣ ಗಡಿಯಲ್ಲಿನ ಹೈದರಾಬಾದ್ ಕರ್ನಾಟಕದಲ್ಲಿ BRS ಪಕ್ಷ ವಿಸ್ತರಣೆ
- ಹಳೇ ಮೈಸೂರು ಭಾಗದಲ್ಲಿ JDS ಜೊತೆ ಹೊಂದಾವಣಿಕೆ
- ಕರ್ನಾಟಕದ ಹಿಂದುಳಿದ ಮುಖಂಡರ ಜೊತೆ BRSಸಂಪರ್ಕ
- ದೇಶದಲ್ಲಿ BRS ಅನ್ನು ಪರ್ಯಾಯ ರಾಜಕೀಯ ಶಕ್ತಿಯಾಗಿಸುವ ಪ್ರಯತ್ನ
ನ್ಯೂಜ್ ಡೆಸ್ಕ್: ಕರ್ನಾಟಕ ರಾಜ್ಯದಲ್ಲೂ ತೆಲಂಗಾಣ ರಾಜ್ಯದ ಆಡಳಿತರೂಡ ಕೆ.ಸಿ.ಚಂದ್ರಶೇಖರ್ ರಾವ್ ನೇತೃತ್ವದ BRS ಪಕ್ಷದ ಕಾರ್ಯಚಟುವಟಿಕೆ ಶುರುವಾಗಿದೆ ಇತ್ತಿಚಿಗೆ 200ಕ್ಕೂ ಹೆಚ್ಚು ಕಾರ್ಯಕರ್ತರು BRS ಪಕ್ಷದ ಸದಸ್ಯತ್ವ ಪಡೆದು ಬಿ.ಆರ್.ಎಸ್ ಸೇರಿದ್ದಾರೆ.ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಕೆಲ ಯುವ ಮುಖಂಡರು ಇತ್ತೀಚೆಗೆ ಬಿ.ಆರ್.ಎಸ್ ಪಕ್ಷದ ಹಿರಿಯ ಮುಖಂಡ ತೆಲಂಗಾಣ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ವಿನೋದ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ಕರ್ನಾಟಕದ ವಿವಿಧ ಹಿಂದುಳಿದ ಸಮಾಜಗಳ ಮುಖಂಡರು BRS ಪಕ್ಷವನ್ನು ತಮ್ಮ ರಾಜ್ಯಗಳಿಗೆ ವಿಸ್ತರಿಸುವಂತೆ ಆಹ್ವಾನಿಸಿದ್ದರು. ಅದರಂತೆ ಪಕ್ಷದ ಕಾರ್ಯಚಟುವಟಿಕೆ ವಿಸ್ತರಣಾ ಕಾರ್ಯಕ್ರಮವನ್ನು BRS ಮುಖಂಡರು ಆರಂಭಿಸಿದ್ದಾರೆ.
ಕರ್ನಾಟಕದ ಬೀದರ್ ತಾಲೂಕಿನ ಚಿಲ್ಲರಗಿ ಗ್ರಾಮದಲ್ಲಿ ತೆಲಂಗಾಣದ ನಾರಾಯಣಖೇಡ್ ಶಾಸಕ ಮಹಿರೆಡ್ಡಿ ಭೂಪಾಲರೆಡ್ಡಿ ನೇತೃತ್ವದಲ್ಲಿ ಕರ್ನಾಟಕದ ಕೆಲವರಿಗೆ ಬಿಆರ್ಎಸ್ ಪಕ್ಷದ ಸದಸ್ಯತ್ವ ನೀಡಿ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ.
ಈ ಸಂದರ್ಬದಲ್ಲಿ ಅವರು ಮಾತನಾಡಿ ತೆಲಂಗಾಣ ಸಿಎಂ ಕೆಸಿಆರ್ ತೆಲಂಗಾಣದಲ್ಲಿ ಜಾರಿಗೆ ತಂದಿರುವ ಜನರ ಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನತೆ ಆಕರ್ಷಿತರಾಗಿದ್ದು ಕಾರ್ಯಕ್ರಮಗಳು ಕರ್ನಾಟಕದಲ್ಲೂ ಖ್ಯಾತಿ ಪಡದಿದೆ ಈ ಹಿನ್ನಲೆಯಲ್ಲಿ ಬಿ.ಆರ್.ಎಸ್ ಸೇರಲು ಸಾಕಷ್ಟು ಮಂದಿ ಬರುತ್ತಿದ್ದಾರೆ. ತೆಲಂಗಾಣ ಜನರು ಮೆಚ್ಚಿದ ಆಡಳಿತದ ಆಧಾರದ ಮೇಲೆ ಬಿ.ಆರ್.ಎಸ್ ದೇಶಾದ್ಯಂತ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲಿದೆ ಎಂದರು.ತೆಲಂಗಾಣದಲ್ಲಿ ಜಾರಿಗೆ ತಂದಿರುವ ಜನ ಕಲ್ಯಾಣ ಯೋಜನೆಗಳು ಕರ್ನಾಟಕಕ್ಕೂ ಬರಬೇಕೆಂದು ಅಲ್ಲಿನ ಜನ ಬಯಸುತ್ತಿದ್ದಾರೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರು ತೆಲಂಗಾಣ ಮಾದರಿಯ ಯೋಜನೆಗಳನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಅನೇಕ ಮುಖಂಡರು ಹೇಳಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ರಾಜಕೀಯ ಅಸ್ಥಿರತೆ ಇದೆ ಎಂದು ಮುಖಂಡರು ಹೇಳಿದರು. ಇದರೊಂದಿಗೆ ಬಿಆರ್ಎಸ್ನ ಮುಂದಿನ ಕಾರ್ಯಚಟುವಟಿಕೆಗಳನ್ನು ಸಿಎಂ ಕೆಸಿಆರ್ ಶೀಘ್ರದಲ್ಲೇ ಪ್ರಕಟಿಸಲಿರುವುದಾಗಿ ಹೇಳಿದರು.
ಎರಡು ದಿನಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವು ನಾಯಕರಾದ ಹುಬ್ಬಳ್ಳಿ ಮತ್ತು ಧಾರವಾಡದ ಕಾಂಗ್ರೆಸ್ ಮುಖಂಡರೊಂದಿಗೆ ಬೆಂಗಳೂರಿನ ಸಹಕಾರ ಕ್ಷೇತ್ರದ ಮುಖಂಡ ನವೀನ್, ಬೆಂಗಳೂರಿನ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಉಷಾರಾಣಿ, ಮಹಾರಾಷ್ಟ್ರದ ಯವತ್ ಮಲ್ ಬುಡಕಟ್ಟು ಸಮುದಾಯದ ಮುಖಂಡ ಸಿಂಪಲ್ ರಾಥೋಡ್ ಸೇರಿದಂತೆ ಇತರರು ವಿನೋದ್ ಕುಮಾರ್ ಅವರನ್ನು ಭೇಟಿ ಮಾಡಿದ ತಂಡದಲ್ಲಿದ್ದರು ಎಂದರು.
ಪ್ರಧಾನ ಮಂತ್ರಿ ರೇಸ್ ನಲ್ಲಿ KCR!
ಎರಡನೆ ಬಾರಿಗೆ ತೆಲಂಗಾಣ ಮುಖ್ಯಮಂತ್ರಿಯಾದ KCR 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಸ್ಥಾನದ ಆಕಾಂಕ್ಷಿಯಾದಂತಿರುವ ಅವರು ತಾವೆ ಸ್ಥಾಪಿಸಿದ್ದ ತೆಂಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ತಮ್ಮ ಹಳೇಯ ಕಾರು ಚಿನ್ಹೆಯನ್ನು ಹಾಗೆ ಉಳಿಸಿಕೊಂಡು ಭಾರತ ರಾಷ್ಟ್ರ ಸಮಿತಿ ಎಂದು ರಾಷ್ಟ್ರೀಯ ಪಕ್ಷವನ್ನಾಗಿಸಿರುವ ಅವರು ನೂತನವಾಗಿ ಮರು ನಾಮಕರಣ ಮಾಡಿದ್ದಾರೆ,ಭಾರತ ರಾಷ್ಟ್ರ ಸಮಿತಿ ರಾಷ್ಟ್ರೀಯ ಪಕ್ಷದ ನೂತನ ಕಾರ್ಯಲಯವನ್ನು ಇತ್ತಿಚಿಗೆ ದೆಹಲಿಯ ಸರ್ದಾರ್ ಪಟೇಲ್ ಮಾರ್ಗದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಧ್ವಜಾರೋಹಣ ಮಾಡಿ ಉದ್ಘಾಟಿಸಿದ್ದಾರೆ.ಕಚೇರಿ ಉದ್ಘಾಟನೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ರೈತ ಮುಖಂಡರು ಸಾಥ್ ನೀಡಿದ್ದರು.ಇದಕ್ಕೂ ಮುಂಚೆ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ ರಾಷ್ಟ್ರ ಸಮಿತಿಯನ್ನಾಗಿಸಲು ಹೈದರಾಬಾದ್ ನಲ್ಲಿ ನಡೆದಂತ ಎರಡು ಮೂರು ಸಭೆಗಳಲ್ಲಿ ದಳಪತಿ ಕುಮಾರಸ್ವಾಮಿ ಪಾಲ್ಗೋಂಡಿದ್ದರು.