ಶ್ರೀನಿವಾಸಪುರ:ಶ್ರೀನಿವಾಸಪುರದ ಎನ್. ಪಿ. ಅಂಬುಜಾಕ್ಷಿ ಅವರು ಬೆಂಗಳೂರು ವಿವಿಯ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಹೆಚ್.ಆರ್. ರವೀಶ ಅವರ ಮಾರ್ಗದರ್ಶನದಲ್ಲಿ ಮೈಕ್ರೊಪ್ರೊಪಗೇಷನ್ ಅಂಡ್ ಆಪ್ಟಿಮೈಸೇಷನ್ ಆಫ್ ಎಲಿಸಿಟಾರಾಸ್ ಟು ಎನೆನಾನ್ಸ್ ದ ಸೆಕೆಂಡರಿ ಮೆಟಬೊಲೈಟ್ಸ ಇನ್ ಕೊನೇಮಾರ್ಫ ಫ್ರಾಗ್ರೆನ್ಸ್ – ಎನ್ ಇಂಪಾರ್ಟೆಂಟ್ ಮೆಡಿಸಿನಲ್ ಪ್ಲಾಂಟ್ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.
ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 57 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದ ಪ್ರೊ.ಎಂ.ಜಗದೇಶ್ ಕುಮಾರ್,ಸಚಿವ ಅಶ್ವತ್ಥನಾರಾಯಣ ಮತ್ತು ಉಪಕುಲಪತಿ ಪ್ರೊ.ಎಸ್.ಎಂ.ಜಯಕರ್ ಅವರು ಅಂಬುಜಾಕ್ಷಿ ಅವರಿಗೆ ಪಿ.ಎಚ್.ಡಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು.
ವೆಂಕಟೇಶ್ವರ ಬಡಾವಣೆ ನಿವಾಸಿ ಪುರುಷೋತ್ತಮಚಾರ್ ಪತ್ನಿ ನಿವೃತ್ತ ಶಿಕ್ಷಕಿ ಎಸ್. ಸಂಪೂರ್ಣಮ್ಮ ಅವರ ಪುತ್ರಿಯಾಗಿರುವ ಅಂಬುಜಾಕ್ಷಿ ಮಾನವ ಜನಾಂಗಕ್ಕೆ ಮಾರಕವಾಗಿರುವ ಕ್ಯಾನ್ಸರ್ ನಿವಾರಕ ಔಷಧಿ ಚಂದ್ರ ಹೂವಿನ ಬಳ್ಳಿಯಲ್ಲಿ ಇದೆ ಎಂದು ಅಧ್ಯಯನ ಮಾಡಿ ಮಹಾಪ್ರಭಂದ ಮಂಡಿಸಿರುವ ಅವರ ಸಾಧನೆ ಮಾನವ ಜನಾಂಗದ ಉಳಿವಿಗೆ ಶ್ರಮಿಸಿದಂತಾಗಿದೆ ಎಂದು ಶ್ರೀ ವೆಂಕಟೇಶ್ವರ ಸೇವಾ ಸಂಸ್ಥೆ ಮುಖ್ಯಸ್ಥ ಡಾ.ವೆಂಕಟಾಚಲ ಅಭಿನಂದಿಸಿರುತ್ತಾರೆ .ವೆಂಕಟೇಶ್ವರ ಬಡಾವಣೆಯ ನಡಿಗೆ ದಾರರ ಬಳಗದ ಸ್ನೇಹಿತರು ಅಂಬುಜಾಕ್ಷಿಯನ್ನು ಗೌರವಿಸಿದ್ದು ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಶ್ರೀನಿವಾಸರೆಡ್ಡಿ.ಪಂಚಾಯಿತಿ ಅಧಿಕಾರಿ ಶ್ರೀನಿವಾಸರೆಡ್ಡಿ,ಶಿಕ್ಷಕರಾದ ನಾರಯಣಸ್ವಾಮಿ,ಸೀತರೆಡ್ಡಿ,ಪದ್ಮನಾಭಚಾರ್,ಗೋಪಾಲರೆಡ್ಡಿ,ಮಂಜು ಮುಂತಾದವರು ಇದ್ದರು.