- ಬೆಳೆ ವಿಮೆ ಕಂಪನಿಗಳ ವಿರುದ್ಧ ರೈತರ ಪ್ರತಿಭಟನೆ
- ತಾಲೂಕು ಕಚೇರಿ ಮುಂದಿನ ಬ್ಯಾರಿಕೆಟ್ ತೆಗೆಯಲು ರೈತರ ಒತ್ತಾಯ
- ಪೊಲೀಸರ ಹಾಗೂ ಪ್ರತಿಭಟನಾ ಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ.
ಶ್ರೀನಿವಾಸಪುರ:ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯ ಆಗಲು ಸರ್ಕಾರ ಬೀಡುವುದಿಲ್ಲ ಅವರ ಹಿತ ಕಾಯುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ಭರವಸೆ ನೀಡಿದರು ಅವರು ಇಂದು ಸಂಜೆ ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ಅವರಣದಲ್ಲಿ ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ ಬೆಳೆ ವಿಮೆ ಸಂಸ್ಥೆ ಹಾಗು ಮಾವು ಬೆಳೆಗಾರರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಅನ್ನದಾತನ ಕಷಕ್ಕೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತದೆ ಕಾರಣಾಂತರಗಳಿಂದ ಬೆಳೆ ವಿಮಾ ಸಂಸ್ಥೆ ವತಿಯಿಂದ ನೀಡಬೇಕಿದ್ದ ಮಾವುಬೆಳೆಗಾರರ ಕ್ಲೈಮ್ ತಡವಾಗುತ್ತಿರುವ ಕುರಿತಂತೆ ವಿಮಾ ಸಂಸ್ಥೆ ಪ್ರತಿನಿಧಿ ಹೇಳುವಂತೆ ಸಂಸ್ಥೆಯ ನಿಯಮಗಳ ಅನ್ವಯ ತಾಂತ್ರಿಕ ಮಾನದಂಡಗಳನ್ನು ಇಟ್ಟುಕೊಂಡು ಫಸಲ್ ಭೀಮಾದಡಿ ಬೆಳೆ ವಿಮೆ ನೋಂದಣಿಮಾಡಿದ ಬೆಳೆಗಾರರಿಗೆ ಫಸಲು ನಷ್ಟದ ಕ್ಲೈಮ್ ಹಣ ಬಿಡುಗಡೆ ಮಾಡಿದೆ ಈ ಬಗ್ಗೆ ಸಂಸ್ಥೆಯ ಮಾನದಂಡಗಳ ಬದಲಾವಣೆ ಕುರಿತಂತೆ ಚರ್ಚಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಶೀರಿನ್ ತಾಜ್ ಮಾತನಾಡಿ ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಮಾವು ಫಸಲು ಉದುರಿ ಹೋಗಿದ್ದ ಬೆಳೆ ನಷ್ಟದ ಹಣ ಬಿಡುಗಡೆ ಸಂಬಂದ ಹಣ ಬಾರದಿರುವ ಬೆಳೆಗಾರರಿಗೆ ಶೀಘ್ರದಲ್ಲಿ ಹಣ ಬೀಡುಗಡೆ ಮಾಡಲಾಗುತ್ತದೆ ಎಂದರು.
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮಾತನಾಡಿ ತಾಂತ್ರಿಕ ಲೆಕ್ಕಾಚಾರದ ಮಾನದಂಡಗಳನ್ನು ಇಟ್ಟುಕೊಂಡು ರೈತರಿಗೆ ಬೆಳೆ ವಿಮೆ ಹಣ ನೀಡದೆ ಸತಾಯಿಸುವುದು ಸರಿಯಲ್ಲ ಈ ಬಗ್ಗೆ ಬೆಳೆ ವಿಮೆ ಸಂಸ್ಥೆ ನಿಮ್ಮ ನಿಯಮಾವಳಿಗಳನ್ನು ಬದಿಗಿಟ್ಟು ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀಡುವಂತ ಮಾನದಂಡಗಳ ಅಧಾರದಂತೆ ಬೆಳೆ ವಿಮಾ ಕ್ಲೈಮ್ ಬಿಡುಗಡೆ ಮಾಡುವಂತೆ ಹೇಳಿದರು.
ಪಾತಕೋಟೆ ನವೀನ್ ಮಾತನಾಡಿ ಸರ್ಕಾರ ಮಾವು ನಷ್ಟದ ಹಣವೂ ನೀಡಿಲ್ಲ ಮಾವು ಬೆಳೆಗೆ ಕಟ್ಟಿದ್ದ ಬೆಳೆ ವಿಮೆ ನೀಡದೆ ವಿಮಾ ಕಂಪನಿ ಮೋಸ ಮಾಡುತ್ತಿದೆ ಎಂದು ದೂರಿದರು.
ಸಭೆಯಲ್ಲಿ ರೈತ ಸಂಘದ ನಂಬಿಹಳ್ಳಿಶ್ರೀರಾಮರೆಡ್ಡಿ,ಬೈಚೇಗೌಡ,ರೈತ ಮುಖಂಡ ಪಿ.ಅರ್.ಸೂರಿ,ಕಾರ್ಮಿಕ ಮುಖಂಡ ಕಾಶಿಂಗಡ್ದ ಫಾರೂಖ್,ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್,ಮುಳಬಾಗಿಲು ಡಿವೈಎಸ್ಪಿ ಜೈಶಂಕರ್, ಇನ್ಸೇಪೇಕ್ಟರ್ ನಾರಯಣಸ್ವಾಮಿ,ಗಂಧಮ್ ಶ್ರೀನಿವಾಸರೆಡ್ಡಿ,ರೈತ ಮುಖಂಡ ಚಲ್ದಿಗಾನಹಳ್ಳಿ ಶ್ರೀಧರ್,ತೋಟಗಾರಿಕೆ ಇಲಾಖೆ ವಿವಿಧ ಹಂತದ ಅಧಿಕಾರಿಗಳು ಸೇರಿದಂತೆ ಮುಂತಾದವರು ಇದ್ದರು.
ಪ್ರತಿಭಟಿಸಿದ ರೈತರು ಬೆಚ್ಚಿಬಿದ್ದ ಜಿಲ್ಲಾಡಳಿತ
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಮಾವು ಬೆಳೆಗಾರರು ಮತ್ತು ರೈತರು ಕೋಲಾರ ಜಿಲ್ಲಾಡಳಿತದ ವಿರುದ್ದ ಮತ್ತೆ ಸಿಡಿದೆದ್ದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮುಳಬಾಗಿಲು ವೃತ್ತದಿಂದ ತಾಲ್ಲೂಕು ಕಚೇರಿ ವರಿಗೂ ಪಾದಯಾತ್ರೆ ಮೂಲಕ ರೈತರು ಕೇಂದ್ರ,ರಾಜ್ಯ ಸರ್ಕಾರಗಳು ಮತ್ತು ಕೋಲಾರ ಜಿಲ್ಲಾಧಿಕಾರಿ ವಿರುದ್ದ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಹಿಂಪಡಿಯುವದಿಲ್ಲವೆಂದು ಪಟ್ಟು ಹಿಡಿದು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಂಬರ್ 8 ರಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಮಸ್ಯೆಗಳಾದ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಆಗಿರುವ ಮೋಸ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಬೆಳೆ ನಷ್ಟ ಪರಿಹಾರ ಸಮರ್ಪಕವಾಗಿ ವಿತರಣೆ ಮಾಡದಿರುವ ಬಗ್ಗೆ, ಕೋಲಾರ ಜಿಲ್ಲೆಯಲ್ಲಿ ಮಾವು ಕೈಗಾರಿಕಾ ಕೇಂದ್ರವಾಗಿ ಗುರುತಿಸ ಬೇಕು ಮಾವು ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಒತ್ತಾಯಿಸಿ. ಶ್ರೀನಿವಾಸಪುರ ಬಂದ್ ಮತ್ತು ಜಿಲ್ಲೆಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು ಈ ಸಂದರ್ಭದಲ್ಲಿ ಶ್ರೀನಿವಾಸಪುರದ ತಾಲೂಕು ದಂಡಾಧಿಕಾರಿ ಮಾವುಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಮಾನ್ಯ ಜಿಲ್ಲಾಧಿಕಾರಿ ತೋಟಗಾರಿಕಾ ಸಚಿವರು ,ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಫಸಲ್ ಭೀಮಾ ಯೋಜನೆಯ ವಿಮಾ ಕಂಪನಿಯ ಅಧಿಕಾರಿಗಳ ಹೋರಾಟಗಾರರ ಜೊತೆ ಹತ್ತು ದಿನಗಳ ಒಳಗಾಗಿ ಜಂಟಿ ಸಭೆಯನ್ನು ಶ್ರೀನಿವಾಸಪುರದಲ್ಲಿ ನಡೆಸುತ್ತೆವೆ ಎಂದು ಹೋರಾಟಗಾರರ ಮನವೊಲಿಸಿ ಬಂದ್ ವಾಪಸ್ಸು ಹಿಂಪಡೆಯಲು ತಾಲೂಕು ಆಡಳಿತ ಪೋಲಿಸ್ ಇಲಾಖೆ ಯಶಸ್ವಿಯಾಗಿತ್ತು ಇದಾಗಿ 23 ದಿನಗಳಾದರೂ ಜಿಲ್ಲಾಡಿಳಿತ,ತಾಲೂಕು ಆಡಳಿತ ಯಾವುದೆ ಸಭೆ ಕ್ರಮ ಜರುಗಿಸದೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಸಭೆ ನಡೆಸಿ ಇಂದು ಪ್ರತಿಭಟನೆಗೆ ಮುಂದಾಗಿತ್ತು.