ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಪ್ರಮುಖ ರಸ್ತೆಯಾಗಿರುವ ಎಂ.ಜಿ.ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅವರೇಕಾಯಿ ಮಂಡಿಗಳ ವಹಿವಾಟು ನಡೆಸುತ್ತಿದ್ದು ವಾಹನಗಳು,ಅಂಬುಲೆನ್ಸ್ ಹಾಗೂ ಶಾಲಾ ವಾಹನಗಳು ಓಡಾಡಲು ತೊಂದರೆಯಾಗುತ್ತಿದ್ದು ಅವರೆಮಂಡಿ ವಹಿವಾಟನ್ನು ಎ ಪಿ ಎಂ ಸಿ ಮಾರುಕಟ್ಟೆಗೆ ವರ್ಗಾಯಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುತ್ತಾರೆ.
ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಪುರಸಭೆ ಕಚೇರಿಯ ಮುಂದೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಕೋಲಾರ ಜಿಲ್ಲಾಧ್ಯಕ್ಷ ಸುಬ್ರಮಣಿ ಮಾತನಾಡಿ ಅವರೆ ಮಂಡಿ ವ್ಯಾಪರದಿಂದ ಮೂರನಾಲ್ಕು ಜನರಿಗೆ ಅನಕೂಲವಾಗಿದ್ದಾರೆ ನೂರಾರು ಜನರಿಗೆ ತೊಂದರೆ ಆಗಿದೆ ಎಂದು ದೂರಿದರು. ರಾಜಕೀಯ ಲಾಭಕ್ಕಾಗಿ ಅವರೆಮಂಡಿ ದಲ್ಲಾಲರಿಗೆ ರಸ್ತೆಯಲ್ಲಿ ವಹಿವಾಟು ನಡೆಡಸಲು ಅವಕಾಶ ನೀಡಿರುವಂತ ರಾಜಕೀಯ ವ್ಯವಸ್ಥೆ ವಿರುದ್ದ ತೀವ್ರಧಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು ಅಧಿಕಾರಿಗಳ ನಿರ್ಲಿಪ್ತತೆಯಿಂದ ವ್ಯವಸ್ಥೆ ಹಾಳಾಗುತ್ತಿರುವುದು ಪಟ್ಟಣದ ಅಭಿವೃದ್ಧಿಗೆ ಮಾರಕ ಎಂದರು.
ಚಿಂತಾಮಣಿ ರಸ್ತೆ ವಿಳಂಬಕ್ಕೂ ಆಕ್ರೋಶ
ಎಂ.ಜಿ.ರಸ್ತೆಯ ಇಂದಿರಾ ಭವನ್ ವೃತ್ತದಿಂದ ರಾಜಾಜಿ ರಸ್ತೆಯ ಚಿಂತಾಮಣಿ ವೃತ್ತದ ವರಿಗೂ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸದೆ ಇರುವುದರ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಮುಖ್ಯಾಧಿಕಾರಿ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನಗಳಲ್ಲಿ ಎಂ.ಜಿ.ರಸ್ತೆಯಲ್ಲಿ ಮಂಡಿಗಳನ್ನು ಖಾಲಿ ಮಾಡಿಸಬೇಕು ಇಲ್ಲದಿದ್ದರೆ ಎಂ.ಜಿ.ರಸ್ತೆಯನ್ನು ಬಂದ್ ಮಾಡಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಕನ್ನಡ ಶ್ರೀನಿವಾಸ್.ಸುನಿಲ್ ರೆಡ್ಡಿ ಮುಂತಾದವರು ಇದ್ದರು.