- ಮಾವು ಮಹಾಮಂಡಳಿಗೆ 500 ಕೋಟಿ ಅನುದಾನ ಅಗ್ರಹ
- ಫಸಲು ಭೀಮಾ ಯೋಜನೆ ಖಾಸಗಿ ವಿಮಾ ಕಂಪನಿಗೆ ನೀಡಬಾರದು.
- ಶ್ರೀನಿವಾಸಪುರವನ್ನು ಮಾವು ಕೈಗಾರಿಕ ವಲಯವಾಗಿ ಘೋಷಿಸಬೇಕು
ಕೋಲಾರ: ಶ್ರೀನಿವಾಸಪುರ ಕೇಂದ್ರವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಮಾವಿನ ಬೆಳೆಗೆ ಶಾಶ್ವತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಶ್ರೀನಿವಾಸಪುರದಲ್ಲಿ ಮಾವು ಆಧಾರಿತ ಕೈಗಾರಿಗಳನ್ನು ಸ್ಥಾಪಿಸಲು ಸರ್ಕಾರಗಳು ಉತ್ತೇಜನ ನೀಡಬೇಕು
ಮಾವು ಕೈಗಾರಿಕಾ ಪ್ರದೇಶ (MANGO INDUSTRIAL HUB) ಎಂದು ಘೋಷಿಸಬೇಕು ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳಿದರು ಅವರು ಕೋಲಾರ ಪತ್ರಕರ್ತರ ಭವನದಲ್ಲಿ ಮಾವು ಬೆಳಗಾರರ ಹೋರಾಟ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾವು ಬೆಳಗಾರರ ಸಮಸ್ಯೆಗಳು ಮತ್ತು ಪರಿಹಾರಗಳು ಕುರಿತಾಗಿ ರಾಜ್ಯ ಮಟ್ಟದ ದುಂಡು ಮೇಜಿನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸರ್ಕಾರಗಳು ಮಾವುಬೆಳೆಯ ವಿಚಾರದಲ್ಲಿ ಅನುಸರಿಸಿಕೊಂಡ ಬಂದ ಉದಾಸಿನತೆ ಸಾಕು ಮಾವುಬೆಳೆಗಾರನ ಕೈಹಿಡಿಯುವಂತ ಕಾರ್ಯಕ್ರಮಗಳನ್ನು ರೂಪಿಸಬೇಕು ಇದುವರಿಗೂ ನಡೆಸಿದ ಮಾವು ಮಹಾಮಂಡಳಿಗೆ ಪ್ರತಿವರ್ಷ ಕನಿಷ್ಠ 500 ಕೋಟಿ ಅನುಧಾನ ಮೀಸಲಿಡಬೇಕೆಂದು ಮಾವು ಬೆಳೆಗಾರರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಒತ್ತಾಯಿಸಿದ್ದಾರೆ.
ಮಾವು ಬೆಳೆಗಾರರು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ, ಈ ಕುರಿತು ಈಗಾಗಲೇ ಮಾವು ಬೆಳಗಾರರು ತಮ್ಮ ಬೇಡಿಕೆಗಳು ಈಡೇರಿಸಲು ಎಷ್ಟೇ ಪ್ರತಿಭಟನೆ, ಧರಣಿ, ಒತ್ತಾಯಗಳು ಮಾಡಿದರೂ ಪ್ರತಿಫಲ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 1.6 ಲಕ್ಷ ಹೆಕ್ಟೇರ್ನಲ್ಲಿ ಸುಮಾರು 14 ರಿಂದ 16 ಲಕ್ಷ ಟನ್ ಮಾವು ಬೆಳೆಯುತ್ತಿದ್ದು, ಕೋಲಾರ ಜಿಲ್ಲೆಯಿಂದಲೇ ಸುಮಾರು 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 11 ಲಕ್ಷ ಟನ್ ಮಾವು ಬೆಳೆಯುತ್ತಿದ್ದೇವೆ. ಅದರಲ್ಲೂ ಶ್ರೀನಿವಾಸಪುರ ಒಂದರಿ0ದಲೇ 6 ಲಕ್ಷ ಟನ್ ಮಾವು ಬೆಳೆಯುತ್ತಿದ್ದು, ಒಟ್ಟಾರೆ ಫಸಲಿನ ಅರ್ದಕ್ಕಿಂತ ಹೆಚ್ಚು ಮಾವು ಕೋಲಾರ ಜಿಲ್ಲೆಯಲ್ಲೇ ಬೆಳೆಯುತ್ತಿದ್ದು, ಶ್ರೀನಿವಾಸಪುರದಲ್ಲಿ ಮಾವು ಕೈಗಾರಿಕಾ ಪ್ರದೇಶ (ಮ್ಯಂಗೋ ಇಂಡಸ್ಟ್ರಿಯಲ್ ಹಬ್) ಮಾಡಿದರೆ, ಇಲ್ಲಿನ ರೈತರು ತಾವು ಬೆಳೆದ ಮಾವು ಪಕ್ಕದ ರಾಜ್ಯ ಆಂಧ್ರದ ಚಿತ್ತೂರು ತಮಿಳುನಾಡಿನ ಕೃಷ್ಣಗಿರಿ ಮಾವು ತಿರಳು ಕೈಗಾರಿಕೆಗಳಿಗೆ ಕಳುಹಿಸುವುದು ತಪ್ಪುತ್ತದೆ ಸ್ಥಳಿಯವಾಗಿ ಮಾವು ಸಂಬಂದಿತ ಕೈಗಾರಿಕೆಗಳು ಪ್ರಾರಂಬವಾದರೆ ಲಕ್ಷಾಂತರ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾವುಗೆ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಮಾತ್ರ ಮಾವು ಉಳಿಯಲು ಸಾಧ್ಯ ರಾಜ್ಯ ಮಾವು ಮಹಾಮಂಡಳಿಗೆ ನೆರವಿನ ಅನುದಾನ ನೀಡಬೇಕು ಹಾಗೂ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಖಾಸಗಿ ವಿಮಾ ಕಂಪನಿಗೆ ನೀಡಬಾರದು ಎಂದು ಒತ್ತಾಯಿಸಿದ ಅವರು, ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಅನಿವಾರ್ಯವಾಗಿ ಸರ್ಕಾರದ ಮೇಲೆ ಒತ್ತಡ ತರುವ ಹಾಗೂ ಮಾವು ಬೆಳಗಾರರು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ಪ್ರಯತ್ನಿಸುತ್ತಿದೆ, ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರುಗಳು ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕಿದೆ. ಆ ಮೂಲಕ ರೈತರ ನೆರವಿಗೆ ಜನಪ್ರತಿನಿಧಿಗಳು ಬರಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮಾವು ಮಂಡಳಿಯ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ ಮಾತನಾಡಿ ಚುನಾಯಿತ ವ್ಯಕ್ತಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮಾವು ಬೆಳಗಾರರ ಸಮಸ್ಯೆಗಳು ಹಾಗೇ ನಿರಂತರವಾಗಿದೆ ಕೇವಲ ಮಾವು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೆ ಸಾಲದು ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕು ಪೋತ್ಸಾಹಿಸಬೇಕು ಸರಕಾರ ಗಮನಸೆಳೆಯುವ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕಾಗಿದೆ ಜಿಲ್ಲೆಯಲ್ಲಿ ಸಂಸ್ಕರಣ ಘಟಕದ ಜೊತೆಗೆ ಮಾವು ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ತೇಜನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮಾವು ಬೆಳೆಗಾರ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಮನುಷ್ಯ ಪ್ರತಿನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳಿಗೆ ನಿಗದಿತ ಬೆಲೆ ಮಾಡಿದ್ದಾರೆ ಆದರೆ ರೈತರು ಕಷ್ಟಪಟ್ಟು ದುಡಿದು ಬೆಳೆಯುವ ಬೆಳೆಗಳಿಗೆ ಮಾತ್ರ ಸರಕಾರಗಳು ಬೆಲೆ ನಿಗದಿ ಮಾಡಿಲ್ಲ ಜಿಲ್ಲೆಯಲ್ಲಿರುವ ನಂದಿನಿ ಹಾಲಿನ ಕೇಂದ್ರದಲ್ಲಿ ಮಾವಿನ ಹಣ್ಣು ಮಾರಾಟ ಮಾಡಲು ಅವಕಾಶ ನೀಡಬೇಕು ಜೊತೆಗೆ ರೈತರು ಬೆಳೆದ ಪ್ರತಿಯೊಂದು ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಮಾಡುವುದು ಸರಕಾರಗಳ ಆಧ್ಯತೆಯಾಗಬೇಕಿದೆ ರೈತ ಸಂಘಟನೆಗಳ ವಿಶ್ವಾಸದೊಂದಿಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಜೊತೆಗೆ ಮಾವು ಬೆಳಗಾರರ ಸಮಸ್ಯೆಗಳ ಕುರಿತಂತೆ ಮುಂದಿನ ಅಧಿವೇಶನದಲ್ಲಿ ಸದನದಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನ ಮಾಡುವ ಮೂಲಕ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಚಂದ್ರತೇಜಸ್ವಿ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ದಳಸನೂರುವೀರಭದ್ರಸ್ವಾಮಿ, ಬೈಚೇಗೌಡ, ಜಿಲ್ಲಾ ಮಾವು ಬೆಳೆಗಾರರ ಸಂಘದ ಉಪಾಧ್ಯಕ್ಷ ಶ್ರೀರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಟಿ.ಎಂ ವೆಂಕಟೇಶ್,ಕಾಶಿಂಗಡ್ದ ಸೈಯದ್ ಫಾರೂಕ್, ಗಂಧಮ್ ಶ್ರೀನಿವಾಸರೆಡ್ಡಿ ಮುಂತಾದವರು ಇದ್ದರು.