ಶ್ರೀನಿವಾಸಪುರ:ಕೆಸಿ ವ್ಯಾಲಿ ಯೋಜನೆಯನ್ನು ಮೂರನೆ ಹಂತದಲ್ಲಿ ಶುದ್ಧಿಕರಿಸಿ ಹರಿಸಲಾಗುವುದು ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು ಅವರು ತಾಲೂಕಿನ ಯಲ್ದೂರಿನಲ್ಲಿ ನಡೆದ ಶ್ರೀನಿವಾಸಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದರ ಜೊತೆಗೆ ಎತ್ತಿನ ಹೊಳೆ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ನೀಡಲಾಗುವುದು ಎಂದ ಅವರು ಕೆ.ಸಿ ವ್ಯಾಲಿ ನೀರು ಮೂರನೇ ಹಂತದಲ್ಲಿ ಶುದ್ದೀಕರಿಸಲು ಈಗಾಗಲೇ ಪೂರ್ವ ತಯಾರಿಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಮಾಡೇ ಮಾಡುತ್ತೇವೆ 400 ಎಂ.ಎಲ್.ಡಿ ಯಿಂದ 600 ಎಂ.ಎಲ್.ಡಿ ಗೆ ಹೆಚ್ಚಿಸುತ್ತೇವೆ ಎಂದರು.
ಬದಲಾದ ಕಾಲಘಟ್ಟದಲ್ಲಿ ಮೌಲ್ಯಗಳು ಇಲ್ಲದ ಜೀವನ ಸಾಗುತ್ತಿದೆ ಅಧುನಿಕತೆ ಹೆಚ್ಚಾದಷ್ಟು ಮಾನವೀಯತೆ ಸತ್ತುಹೊಗುತ್ತಿದೆ ಮಾನವೀಯ ಸಂಬಂಧಗಳನ್ನು ಹಾಳುಮಾಡುತ್ತಿದೆ ಅವಮಾನವೀಯತೆ ಅವಸ್ತಾವಿಕತೆ ಮೆರೆಯುತ್ತಿದೆ ಮಕ್ಕಳಿಗೆ ಗೋವಿನ ಮಾತು,ನೀತಿ, ಅರಣ್ಯದಲ್ಲಿನ ಹುಲಿಯ ಗೋವಿನ ಔದಾರ್ಯತೆ ಇಂತಹ ನೀತಿಕಥೆಗಳನ್ನು ತಿಳಿಸುವರು ಯಾರು ಮೊಬೈಲ್ ಟಿವಿಗಳು ವಿದ್ಯಾರ್ಥಿಗಳಿಗೆ ಸ್ವಲ್ಪ ಉಪಕಾರಿಯಾದರೆ ದೊಡ್ಡಮಟ್ಟದಲ್ಲಿ ಅಪಾಯಕಾರಿಯಾಗಿ ಕಾಡುತ್ತಿದೆ ಪ್ರಸ್ತುತ ದಿನಗಳಲ್ಲಿ ನೀತಿ ನ್ಯಾಯ ಧರ್ಮ ಅಳಿಸಿಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶಕ್ಕೆ ಜೀವನವನ್ನೆ ತ್ಯಾಗಮಾಡಿದ ಮಹಾತ್ಮನನ್ನು ನಂಬಿಸಿ ನಯವಂಚಕನಾಗಿ ಕೊಂದವರು ಇಂದು ಮಹಾತ್ಮನಿಗಿಂತಲೂ ಹೆಚ್ಚು ಪ್ರಚಾರ ಪಡೆದು ಮೆರೆಯುತ್ತಿದ್ದಾರೆ ಎಲ್ಲಾ ಕ್ಷೇತ್ರಗಳು ಕಲುಶಿತವಾಗಿವೆ ನಾವಾಡುವ ಮಾತು ತಲೆಗೆ ಬರುವ ಆಲೋಚನೆ ಹೃದಯಕ್ಕೂ ಸಂಬಂದವಿಲ್ಲದಂತೆ ಮಾತನಾಡುತ್ತೇವೆ ಸುತ್ತಲಿನ ಪರಿಸ್ಥಿತಿ ಪರಿಸರ ಒತ್ತಡಗಳು ನಮ್ಮನ್ನು ಆವರಿಸಿಕೊಂಡಿವೆ ಮಾತುಗಳು ವಾಸ್ತವವಾಗಿದ್ದು ಮೌಲ್ಯಗಳು ಕುಸಿಯುತ್ತಿದೆ ಈ ಬಗ್ಗೆ ಏನು ಮಾಡಬಹುದು ಎಂಬುದರ ಚಿಂತನೆಯಲ್ಲಿ ನಾನೂ ಒಬ್ಬ ಚಿಂತನಾಪರ ವಿದ್ಯಾರ್ಥಿಯಾಗಿದ್ದೇನೆ ಎಂದರು.
ಎಲ್ಲರೂ ಕಲಾವಿದರೆ
ನಾಲ್ವಡಿ ಕೃಷ್ೞರಾಜ್ ಆಡಳಿತದಲ್ಲಿ ಸಾಹಿತ್ಯ ಪರಿಷತ್ ಉಗಮವಾಯಿತು ಗತವೈಭವ ಪರಂಪರೆ ಮುಂದುವರೆದಿದ್ದು ಇತಿಹಾಸವಾಗಿದೆ ಪ್ರಸ್ತುತ ದಿನಗಳಲ್ಲಿ ಭರತನಾಟ್ಯ ಕೊಚುಪುಡಿ ನೃತ್ಯಮಾಡುವರು ಕಲಾವಿದರೆ ಇಲ್ಲಿ ಗಂಗೇತ್ತು ಹಾಡಿಸುವನು, ಹಾವಾಡಿಗನು ಕಲಾವಿದನೆ ಕಲೆ ಬಲ್ಲವರು ಎಲ್ಲರು ಕಲಾವಿದರೆ ಯಾರು ಮತ್ತು ಯಾವುದೆ ವ್ಯತ್ಯಾಸವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಸಾಹಿತ್ಯ ಪರಿಷತ್ ಉತ್ತಮ ಕೆಲಸಮಾಡುತ್ತಿದೆ ಜಿಲ್ಲಾದ್ಯಕ್ಷ ಗೋಪಾಲಗೌಡ ಅವರ ತಂಡಕ್ಕೆ ತಾಯಿ ಭುವನೇಶ್ವರಿ ಒಳ್ಳೇದು ಮಾಡಲಿ ಎಂದರು.
ಉದ್ಘಾಟನಾ ಭಾಷಣ ಮಾತನಾಡಿದ ಹಿರಿಯ ಉಪನ್ಯಾಸಕ ಕೆ.ವೈ ನಾರಾಯಣಸ್ವಾಮಿ ಮಾತನಾಡಿ ಈ ಬಾಗಕ್ಕೆ ಕೆ.ಸಿ ವ್ಯಾಲಿ ನೀರುಬಂದ ಪರಿಣಾಮ ಅಂತರ್ಜಲ ವೃದ್ದಿಯಾಗಿದೆ ಆದರೆ ಮೌಲ್ಯಗಳು ಬತ್ತಿ ಹೋಗಿದೆ ಎಂದು ವಿಷಾಧಿಸಿದರು ಶತ್ರುಗಳನ್ನು ಗೆಲ್ಲಬೇಕಾದರೆ ಶಶ್ತ್ರಾಗಳು ಬೇಕಿಲ್ಲ ಪ್ರೀತಿಯಿಂದ ಗೆಲ್ಲಲು ಮುಂದಾಗಬೇಕು ಕೋಲಾರ ಜಿಲ್ಲೆ ಜಾನಪದ ಸಾಹಿತ್ಯ ದೇಶಕ್ಕೆ ಮಾದರಿಯಾಗಿದೆ 200 ವರ್ಷಗಳಿಂದ ಬಂದಿರುವ ಸಾಹಿತ್ಯ ಪರಿಷತ್ ಆಳುತ್ತಿರುವ ಸರ್ಕಾರಗಳಿಗೆ ಕಲೆ ಮತ್ತು ಸಾಂಸ್ಕೃತಿಕ ಹೋರಾಟವೇ ವಿರೋದ ಪಕ್ಷವಾಗಿದೆ, ರಾಜಕೀಯ ಮೌಲ್ಯಗಳು ಕುಸಿದಿದೆ, ರಾಜಕೀಯ ಸಾಹಿತ್ಯ ದುಷ್ಟರ ರಕ್ಷಣೆಗೆ ಸಿಗಬಾರದು ಈ ಜಿಲ್ಲೆಯಲ್ಲಿ ಶಾಶ್ವತವಾಗಿ ಸಾಹಿತ್ಯ ಪರಿಷತ್ತಿನ ಉಳಿವಿಗಾಗಿ ಮುಂದಿನ ಪೀಳಿಗೆಯು ಸಾಹಿತ್ಯದ ಗಂದವನ್ನು ಸ್ವಾದಿಸುವ ಶಾಶ್ವತ ಕೆಲಸವನ್ನು ಜನ ಪ್ರತಿನಿಧಿಗಳು ಮಾಡಲು ಮುಂದಾಗುವಂತೆ ಹೇಳಿದರು.
ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಾತಮುತಕಪಲ್ಲಿ ವೆಂಕಟಾಚಲಪತಿ ಮಾತನಾಡಿ ನನ್ನ ಕುಟುಂಬದ ಜಾನಪದ ಕೌಶಲ್ಯ, ನಾಟಕಗಳು, ಹುಟ್ಟು ಬೆಳೆದ ಗ್ರಾಮ ವಿದ್ಯಾರ್ಥಿದಸೆ,ಉನ್ನತ ವಿದ್ಯಾಬ್ಯಾಸ ಪಡೆದು ಶಿಕ್ಷಕನಾಗಿ, ಕವಿಯಾಗಿ, ಚುಟುಕು ಸಾಹಿತ್ಯ ಪರಿಷತ್ ನಲ್ಲಿ ಜಿಲ್ಲಾಧ್ಯಕ್ಷನಾಗಿ,ರಚಿಸಿದ 5 ಕೃತಿಗಳು ಈ ತಾಲ್ಲೂಕಿನ ನಾನಾ ಮೂಲೆಗಳಲ್ಲಿ ಉದಯಿಸಿದ ಸಾಹಿತ್ಯ ಕಾರರು, ದೇವಾಲಯಗಳು ಬೆಟ್ಟ ಗುಡ್ಡಗಳು, ಪ್ರಕೃತಿಯ ಮಹಿಮೆ, ಜಾಣಪದ ಕಲಾವಿದರು, ಇತರೆ ಅನೇಕ ವಿಷಯಗಳ ಕುರಿತಾಗಿ ವೇದಿಕೆಯಲ್ಲಿ ಬೆಳಕು ಚಲ್ಲಿದರು ಕಸಾಪ ತಂಡಕ್ಕೆ ಕೃತಜ್ನತೆಗಳನ್ನು ತಿಳಿಸಿದರು.
ನಿಕಟ ಪೂರ್ವ ಸರ್ವಾದ್ಯಕ್ಷ ಕೆ.ವಿ ನಾಗರಾಜ್ ಕನ್ನಡ ಬಾವುಟವನ್ನು ಸರ್ವಾಧ್ಯಕ್ಷರಿಗೆ ಹಸ್ತಾಂತರಿಸಿದರು
ಕಸಾಪ ಜಿಲ್ಲಾದ್ಯಕ್ಷ ಎನ್.ಬಿ ವೇಣುಗೋಪಾಲಗೌಡ ಈ ಜಿಲ್ಲೆಯ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಜಿ ಗುಂಡಪ್ಪ, ಇವರ ಆದರ್ಶಗಳು ಮಾರ್ಗದರ್ಶನ, ಚಿಂತನೆಗಳು, ನಮಗೆಲ್ಲಾ ಆದರ್ಶ, ನಮ್ಮ ತಾಲ್ಲೂಕಿನಲ್ಲಿ ಕಲೆಮತ್ತು ವಾಸ್ತು ಶಿಲ್ಪಕ್ಕೆ ನೆಲೆಯಾಗಿದ್ದು ಹಲವು ಶಿಲಾ ಶಾಸನಗಳು ದೇವಸ್ಥಾನಗಳು ಈ ಬಾಗದಲ್ಲಿ ಅದ್ಬುತವಾಗಿದ್ದು ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಕೀರ್ತಿಯನ್ನು ಪಡೆದಿದೆ ಎಂದು ಆಶಯ ನುಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ವಜಾರೋಹಣವನ್ನು ತಹಶಿಲ್ದಾರ್ ಶೀರಿನ್ ತಾಜ್ ನೇರವೇರಿಸಿದರು,ಹಾಗು ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀರಾಮ್ ಬಾಬು ನಾಡ ದ್ವಜವನ್ನು ಮತ್ತು ಸಾಹಿತ್ಯ ಪರಿಷತ್ತಿನ ದ್ವಜವನು ಕಸಾಪ ಅದ್ಯಕ್ಷೆ ಮಂಜುಳಾ ದ್ವಜಾರೋಹಣ ಮಾಡಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಕವಿ ಚಿಂತಕ ಬೈರಪ್ಪ, ಸಾ ರಘುನಾಥ್, ಅಖಿಲ ಭಾರತಿಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಾಯಾ ಬಾಲಚಂದರ್, ಪಿ.ಐ ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಸಾಪ ಅದ್ಯಕ್ಷರಾದ ಮುಳಬಾಗಲಿನ ಚಲವಾದಿ ವಿರುಪಾಕ್ಷಪ್ಪ, ಬಿಇಓ ಉಮಾದೇವಿ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎಂ. ನಾಗರಾಜ್, ಕಸಾಪ ನಿಕಟ ಪೂರ್ವ ಅದ್ಯಕ್ಷ ಜಿ.ಎನ್ ಕುಬೇರಗೌಡ, ಗೌರವಾದ್ಯಕ್ಷ ಲಕ್ಷ್ಮಣ ಗೌಡ, ಕಾರ್ಯದರ್ಶಿ ಎಂ.ಬೈರೇಗೌಡ, ಶ್ರೀರಾಮೇಗೌಡ, ಖಜಾಂಚಿ ಮುರಳಿಬಾಬು, ಜಿಲ್ಲಾ ಸಂಚಾಲಕ ಡಾ|| ರವಿಕುಮಾರ್, ತಾಲ್ಲೂಕಿನ ಕಸಾಪದ ಪದಾಧಿಕಾರಿಗಳು ಸಾಹಿತಿ ಶಿಕ್ಷಕ ಅರುಣ್ ಕುಮಾರ್, ಉಪನ್ಯಾಸಕ ಚಿಂತಾಮಣಿಯ ಡಾ.ಮುನಿರೆಡ್ದಿ,ಸ್ಥಳಿಯ ಮುಂಖಂಡರು ಶಿಕ್ಷಕರು ಹಾಜರಿದ್ದರು. ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಉಪನ್ಯಾಸಕ ಶಂಕರೇ ಗೌಡ ರಚಿಸಿದ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Saturday, November 23