ಶ್ರೀನಿವಾಸಪುರ: ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ಸಮಾಜದಲ್ಲಿ ಗುರುತಿಸಕೊಳ್ಳಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಸಣ್ಣ ಸಮುದಾಯಗಳಲ್ಲಿನ ಆಂತರಿಕ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದಲ್ಲಿ ವಿಭಿನ್ನರಾಗಿ ಗೌರವಿತರಾಗಿ ಗುರುತಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗು ನಾಮಧಾರಿ ಶೆಟ್ರ ಸಮುದಾಯದ ಹಿರಿಯ ಮುಖಂಡ ಇಂದಿರಾಭವನ್ ರಾಜಣ್ಣ ಕರೆ ಇತ್ತರು ಅವರು ತಾಲೂಕಿನ ಅರಿಕೆರೆ ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಅವರಣದಲ್ಲಿ ಅಯೋದ್ಯ ನಗರ ನಾಮಧಾರಿ ಶೆಟ್ರು ಸಮಾಜ ಆಯೋಜಿಸಿದ್ದ 2021-22 ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವದ ಮುಂಚೂಣಿಯಲ್ಲಿದ್ದ ನಮ್ಮ ಸಮುದಾಯ ಜಾತಿ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಇದೊಂದು ದುರಂತ ಎಂದ ಅವರು ತೀರಾ ಹಿಂದುಳಿದ ಅತ್ಯಂತ ಚಿಕ್ಕ ಸಮುದಾಯವಾಗಿರುವ ನಮ್ಮ ಸಮಾಜದ ಬಂಧುಗಳು ಇವತ್ತಿನ ವ್ಯವಸ್ಥೆಯಲ್ಲಿ ಕೂಲಿ ಹಾಗು ಕೃಷಿ ಕಾರ್ಮಿಕರಾಗಿ ಸಣ್ಣ ಪುಟ್ಟ ಗೂಡಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ ನಮ್ಮ ಸಮುದಾಯದಲ್ಲಿ ಯಾರು ಸರ್ಕಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿಲ್ಲ ಅದು ಇದುವರಿಗೂ ಸಾಧ್ಯವಾಗಿಲ್ಲ ಇಂತಹ ಸಂದರ್ಬದಲ್ಲಿ ಇಂದಿನ ಪೀಳಿಗೆಯ ಯುವ ಸಮುದಾಯ ಉನ್ನತ ವ್ಯಾಸಂಗ ಮಾಡಿದರೆ ಮಾತ್ರ ಬೆಳವಣಿಗೆಗೆ ಸಹಕಾರಿಯಾಗುವುದು ಈ ಹಿನ್ನಲೆಯಲ್ಲ್ಲಿ ನಾಮಧಾರಿ ಶೆಟ್ರು ಸಮಾಜದ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿ ಅತ್ಯನತ ಸಾಧನೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಇರುವಿಕೆಯನ್ನು ತೋರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಂ.ವಿ.ಜೆ ಮೆಡಿಕಲ್ ಕಾಲೇಜು ರಿಜಿಸ್ಟಾರ್ ಕೆ.ಪಿ.ನಾಗರಾಜಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಾಮಧಾರಿ ಶೆಟ್ರ ಸಮಾಜಕ್ಕೊಂದು ದೊಡ್ದಸಾಧನೆ ಅತ್ಯಂತ ಹಿಂದುಳಿದ ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯವಾಗಿರುವ ನಮ್ಮ ಉದ್ಧಾರ ನಮ್ಮ ಸಾಧನೆಯಿಂದ ಮಾತ್ರ ಸಾಧ್ಯ ಎಂಬುದನ್ನು ನಮ್ಮ ಜನತೆ ಅರಿಯಬೇಕು ಇಂತಹ ಸನ್ನಿವೇಶದಲ್ಲಿ ಮಕ್ಕಳು ವಿದ್ಯೆಕಲಿಯದೆ ಹೋದರೆ ಸಮಾಜದಲ್ಲಿ ಅಭಿವೃದ್ದಿಯಾಗುವುದು ತುಂಬಾಕಷ್ಟ ಎಂದರು.
ಎಸ್.ವಿ.ಎಸ್. ಟ್ರಸ್ಟ್ ಕಾರ್ಯದರ್ಶಿ ಚ.ಶ್ರೀನಿವಾಸಮೂರ್ತಿ ಮಾತನಾಡಿ ಜನಸಂಖ್ಯೆ ಬಹುಮತಕ್ಕೆ ಮಾತ್ರ ಪ್ರಜಾಪ್ರಭುತ್ವದಲ್ಲಿ ಬೆಲೆ ಇದೆ ಆದುದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಣ್ಣ ಸಣ್ಣ ಸಮುದಾಯಗಳನ್ನು ಪ್ರತ್ಯೇಕ ಪ್ರವರ್ಗಕ್ಕೆ ಸೇರಿಸಿ ಅವರಿಗೆ ಆವಶ್ಯಕವಾಗಿ ಸಿಗಬೇಕಾದ ಸೌಲಭ್ಯ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಗಳು ಮುಂದಾಗಬೇಕು,ಸಣ್ಣ ಸಮುದಾಯಗಳ ಪೋಷಕರು ತಮ್ಮ ಮಕ್ಕಳಿಗೆ ಮಒಲ್ಯಾಧಾರಿತ ಶಿಕ್ಷಣ ಸಂಸ್ಕಾರವಂತ ಬದುಕು ಕಟ್ಟಿಕೊಡಿ ಅವರು ಭವಿಷ್ಯತ್ತಿನಲ್ಲಿ ಗೌರವಿತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ನಿವೃತ್ತರಾಗಿರುವ ಸರ್ಕಾರಿ ಆಸ್ಪತ್ರೆ ಫಾರ್ಮಸಿಸ್ಟ್ ನಾಗರಾಜಶೆಟ್ಟಿ ಅವರನ್ನು ಈ ಸಂದರ್ಬದಲ್ಲಿ ಸನ್ಮಾನಿಸಲಾಯಿತು,ಕಾರ್ಯಕ್ರಮದಲ್ಲಿ ಮುಳಬಾಗಿಲು ನಗರಸಭೆ ಸದಸ್ಯ ಪ್ರಸಾದ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ.ಗೋವಿಂದಶೆಟ್ಟಿ,ಎಸ್, ಹಾಲು ಡೈರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಶೆಟ್ಟಿ,ವಕೀಲ ನಟರಾಜಬಾಬು,ಶಿಕ್ಷಕರಾದ ನಂಬಿಹಳ್ಳಿ ರಮೇಶ್,ಗುರುಮೂರ್ತಿ,ಸರ್ಕಾರಿ ವೈದ್ಯೆ ಸಿಂದು ಮುಂತಾದವರು ಇದ್ದರು.