- ಗೌವನಪಲ್ಲಿಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
- ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಭಕ್ಷುಸಾಬ್ ಕಾಂಗ್ರೆಸ್ ಸೇರ್ಪಡೆ
- ರಮೇಶ್ ಕುಮಾರ್ ಹ್ಯಾಟ್ರಿಕ್ ಗೆಲವಿಗೆ ಸಹಕರಿಸಿ ಜಮೀರ್ ಮನವಿ
ಶ್ರೀನಿವಾಸಪುರ:ಕುಮಾರಸ್ವಾಮಿ,ಬೊಮ್ಮಾಯಿ ಬಿಜೆಪಿ ಕುರಿತಾಗಿ ನಾನು ಮಾತನಾಡಲ್ಲ ಅವರ ಬಗ್ಗೆ ಮಾತನಾಡಿದಷ್ಟು ವೇಸ್ಟ್ ಅವರನ್ನು ಬಿಟ್ಟು ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ತರುವ ಬಗ್ಗೆ ಮಾತನಾಡೋಣ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಕ್ಷದ ಶಾಸಕಾಂಗ ಪಕ್ಷದ ನಿಯಾಮವಳಿಗಳಂತೆ ಶಿವಕುಮಾರ್ ಅಥಾವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಆದರೆ ದೇಶಾದ್ಯಂತ ಹಾಗು ರಾಜ್ಯದಲ್ಲಿ ಜನತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ ಅದನ್ನು ನಾವ್ಯಾರು ತಡೆಯಲು ಸಾಧ್ಯವಾಗಿವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು ಅವರು ಬುಧವಾರ ಶ್ರೀನಿವಾಸಪುರ ತಾಲೂಕಿನ ಗೌವನಿಪಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಜೋಡೊ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆಲಗು ಭಾಷೆಯಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಭಾವನಾತ್ಮಕವಾದ ಭಾಷಣ ಮಾಡಿದ ರಮೇಶ್ ಕುಮಾರ್ ಭಾಷಣದ ಉದ್ದಕ್ಕೂ ಸಿದ್ದರಾಮಯ್ಯನವರ ಕಾರ್ಯಕ್ರಮಗಳು, ಇಂದಿರಾಗಾಂಧಿಯವರ ಹತ್ಯೆ ರಾಜೀವ್ ಗಾಂಧಿ ಹತ್ಯೆ ನೆಹರು ಕುಟುಂಬದ ತ್ಯಾಗದ ಚರಿತ್ರೆ ಕುರಿತಾಗಿ ರಾಹುಲ್ ಗಾಂಧಿ ಬಾಲ್ಯದಲ್ಲಿ ಅನುಭವಿಸಿದ ನೋವು ಜೊಡೊ ಯಾತ್ರೆ ಕುರಿತಾಗಿ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಎಲ್ಲರೂ ಒಳ್ಳೆಯವರಲ್ಲ ಎಂದು ಹೇಳಿದರು.
ನಾನು ಹೇಳ್ತಾ ಇಲ್ಲ ಜನ ಬಯುಸುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಬೇಕೆಂದು ನಾನು ಹೇಳುತ್ತಿಲ್ಲ ಅಕ್ಕಿ ಪಡೆದವರು,ಹಾಲಿಗೆ ಪ್ರೋತ್ಸಾಹ ಧನ ಪಡೆದ ರೈತರು,ಶಾಲೆಗಳಲ್ಲಿ ಉಚಿತವಾಗಿ ಹಾಲು ಪಡೆದ ಮಕ್ಕಳು,ಬಡ್ಡಿರಹಿತ ಸಾಲ ಪಡೆದ ಮಹಿಳೆಯರು,ಮನೆ ಪಡೆದ ಬಡ ಜನರು ಬಯಸುತ್ತಿದ್ದಾರೆ ನಾನು ಕಾಂಗ್ರೆಸನವನು ನಾನು ಕಾಂಗ್ರೆಸ್ ಪಕ್ಷ ಹೇಳಿದಂತೆ ಕೇಳುವನು ಆದರೆ ನೀವು ಜನತೆ ಹೇಳ್ತಾ ಇದ್ದೀರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಪದೇ ಪದೇ ಒತ್ತಿ ಹೇಳಿದ ಅವರು ನಮ್ಮ ಪಕ್ಕಕ್ಕೆ ಬರ್ತಾ ಇದ್ದಾರೆ ಎಂದು ಸಿದ್ದರಾಮಯ್ಯ ಕೋಲಾರಕ್ಕೆ ಬರುವ ಕುರಿತಾಗಿ ಮತ್ತೋಮ್ಮೆ ಸ್ಪಷ್ಟ ಪಡಿಸಿದ ಅವರು ಜನರ ಆಶಯದಂತೆ ಅವರನ್ನು ಸಿಎಂ ಮಾಡಬೇಕು ಎಂದು ಜನರ ಜೈ ಕಾರಗಳ ನಡುವೆ ಘೋಷಣೆ ಮಾಡಿದರು.
ಗೌವನಪಲ್ಲಿಯಿಂದ ನಮ್ಮ ಭಾರತ್ ಜೋಡೊ ಯಾತ್ರೆ ಶುರುವಾಗಿದೆ ಮನಸ್ಸುಗಳನ್ನು ಕಟ್ಟಲು ನಾವು ಹೋರಟಿದ್ದೇವೆ ಹಿಂಸೆಯ ಸಂತೆಯನ್ನು ಮುಚ್ಚಬೇಕು ಪ್ರೀತಿಯ ಅಂಗಡಿ ತೆರೆಯಬೇಕಿದೆ ಎಂದು ಉರ್ದು ಭಾಷೆಯಲ್ಲಿ ಹೇಳಿದ ಅವರು ದೇಶದಲ್ಲಿ ಇವತ್ತು ಪ್ರೇಮ ಪ್ರೀತಿ ಸೌಹಾರ್ದತೆಯ ಅಂಗಡಿ ಒಪನ್ ಆಗಬೇಕು ಎಂದರು.
ರಾಮನ ಮಂದಿರ ಕಟ್ಟಲು ಚಂದಾ ಕೋಡಿ,ಒಟು ಕೊಡ ಬೇಡಿ!
ಇಷ್ಟು ವರ್ಷಗಳ ನಂತರ ಗಾಂಧಿ ಕೊಂದವರ ಕೈಗೆ ದೇಶದ ಅಧಿಕಾರ ಸಿಕ್ಕಿದೆ ಕೆಲವೊಂದು ವ್ಯತ್ಯಾಸಗಳನ್ನು ಅಧಾರವಾಗಿಟ್ಟುಕೊಂಡು ರಾಮನ ಮಂದಿರ ಕಟ್ಟುತ್ತಾರಂತೆ ಅದಕ್ಕೆ ನಾವು ಅಧಿಕಾರ ಕೊಡಬೇಕಂತೆ ನಾವು ಬುದ್ದಿ ಇಲ್ಲದವರು,ಗುಡಿ ಕಟ್ಟಲು ಚಂದಾ ಕೋಡೊಣ ಆದರೆ ಇವರು ಓಟು ಕೇಳುತ್ತಿದ್ದಾರೆ ಅಂತವರಿಗೆ ನೀವು ಒಟು ಕೊಡಬೇಡಿ ಓಟು ಕೊಟ್ಟರೆ ನಿಮ್ಮ ತಲೆ ಕೋಟ್ಟಂತೆ ಎಂದು ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ದ ಹರಿಹಾಯ್ದ ಆವರು ಅಮರ ವೀರರ ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅದನ್ನು ಬ್ರಿಟಿಷರ ಕಾಲಡಿಯಲ್ಲಿ ಬಿದಿದ್ದ RSS ನವರ ಕೈಗೆ ನಾವೆ ಕೊಟ್ಟಿದ್ದೇವೆ ನಮ್ಮಲ್ಲಿನ ಪರಸ್ಪರ ವ್ಯತ್ಯಾಸಗಳಿಂದ ವ್ಯಾಜ್ಯಮಾಡಿಕೊಂಡು ತಪ್ಪು ಮಾಡಿದ್ದೇವೆ ಇದಕ್ಕಿಂತ ನಾಚಿಕೆ ಇನ್ನೇನಿದೆ ಎಂದ ಅವರು 1984 ಇಂದಿರಾಗಾಂಧಿಯನ್ನು ಹತ್ಯೆ ಮಾಡ್ತಾರೆ ಆಕೆ ಮಾಡಿದ ಅಪರಾಧ ಏನು ಎಂದು ಆಕ್ರೋಶ ಭರಿತರಾಗಿ ನುಡಿದರು.
ಕಾರ್ಯಕ್ರಮದ ಮುಖ್ಯ ಆಕರ್ಷೆಣೆಯಾಗಿದ್ದ ಬೆಂಗಳೂರು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಆಹ್ಮದ್ ಮಾತನಾಡಿ 2008 ರಲ್ಲಿ ಜೆಡಿಎಸ್ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ ತಪ್ಪಿನಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯ್ತು ಇದಕ್ಕೆ ಕುಮಾರಸ್ವಾಮಿ ವಚನ ಭ್ರಷ್ಟರಾಗಿ ಬಿಜೆಪಿಗೆ ಅಧಿಕಾರ ನೀಡದೆ ಹೊದದರಿಂದ ಅನುಕಂಪದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿತು ಎಂದು ದೂರಿದರು ಕುಮಾರಸ್ವಾಮಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಮತ್ತೆ ಜನತಾ ದಳಕ್ಕೆ ಮತ ಕೊಟ್ರೆ ಅದು ಬಿಜೆಪಿಗೆ ಮತ ಕೊಟ್ಟಂತೆ ಎಂದರು ಎರಡನೆ ಬಾರಿಗೆ ಕಾಂಗ್ರೆಸ್ ಸಹಕಾರದಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಶಾಸಕರ ಕೈಗೆ ಸಿಗದೆ ಹೊಟೆಲ್ ನಲ್ಲಿ ಕೂತು ಕಾಲ ಕಳೆಯುತ್ತಿದ್ದರು ಇದರಿಂದ ಬೆಸೆತ್ತ ಶಾಸಕರು ಬೆಂಬಲ ವಾಪಸ್ಸು ಪಡೆದು ಅಧಿಕಾರ ಕಳೆದುಕೊಂಡರು ಸಿದ್ದರಾಮಯ್ಯ ಆಗಲಿ ರಮೇಶ್ ಕುಮಾರ್ ಆಗಲಿ ಅವರ ಸರ್ಕಾರ ತಗೆಯಲಿಲ್ಲ ಎಂದ ಅವರು ನಿಮ್ಮ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿರುವ ರಮೇಶ್ ಕುಮಾರ್ ಅವರಿಗೆ ಹೆಚ್ಚಿನ ಮತಗಳನ್ನ ನೀಡುವ ಮೂಲಕ ಅವರಿಗೆ ಹ್ಯಾಟ್ರಿಕ್ ಗೆಲವು ತಂದುಕೊಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಗೌವನಪಲ್ಲಿ ಭಾಗದ ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಗ್ರಾಮಪಂಚಾಯಿತಿ ಸದಸ್ಯ ಭಕ್ಷುಸಾಬ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾಗಿ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ವೇದಿಕೆ ಮೆಲೆ ಕಾಂಗ್ರೆಸ್ ಸೇರ್ಪಡೇಯಾದವರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ನಸೀರ್ ಆಹ್ಮದ್,ಅನಿಲಕುಮಾರ್,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಆಶೋಕ್, ಪುರಸಭೆ ಮಾಜಿ ಅಧ್ಯಕ್ಷ ಕೆ.ನಾರಯಣಸ್ವಾಮಿ, ಸಂಜಯ್ ರೆಡ್ಡಿ,ಬೇಟಪ್ಪ,ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಮೇಕಲನಾರಯಣಸ್ವಾಮಿ,ಕೆ.ಕೆ.ಮಂಜುನಾಥ್, ಇನ್ನು ಹಲವಾರು ಮುಖಂಡರು ಇದ್ದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಕಾಂಗ್ರೆಸ್ ಕಾರ್ಯಕರ್ತರು ಗೌವನಪಲ್ಲಿಯ ಪೋಲಿಸ್ ಠಾಣೆ ಮುಂಬಾಗದಿಂದ ಸಭೆ ನಡೆಯುವ ಸ್ಥಳಕ್ಕೆ ಶಾಸಕರಾದ ರಮೇಶ್ ಕುಮಾರ್ ಹಾಗು ಜಮೀರ್ ಅಹಮದ್ ಅವರನ್ನು ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಹೆಗಲ ಮೇಲೆ ಹೊತ್ತು ಸಾಗಿ ಭರ್ಜರಿ ಸ್ವಾಗತ ಕೋರಿದರು.