ಶಿಡ್ಲಘಟ್ಟ:ನೂರು ದೇವಾಲಯಗಳನ್ನು ಕಟ್ಟುವ ಬದಲು ಹಳೆಯ ದೇವಾಲಯ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ ದೇವಾಲಯಗಳು ಗ್ರಾಮದ ಇತಿಹಾಸದ ಪ್ರತೀಕ. ಗ್ರಾಮಗಳ ದೇವಾಲಯಗಳನ್ನು ಪೂರ್ವಜರು ನಿರ್ಮಿಸಿ ದೇವತೆಗಳನ್ನು ಆರಾಧಿಸಿದ್ದ ಪರಂಪರೆ ನಮ್ಮದು ಅದನ್ನು ಮುಂದುವರಿಸಿಕೊಂಡು ಹೋಗಲು ಇಂದಿನ ಪೀಳಿಗೆ ಮುಂದಾಗಬೇಕು ಎಂದು ಶಿಡ್ಲಘಟ್ಟ ಪುರಸಭೆ ಮಾಜಿ ಸದಸ್ಯ ಹಾಗು ಅಯೋದ್ಯನಗರದ ನಾಮಧಾರಿ ನಗರ್ತ ಸಮಾಜದ ಮುಖಂಡ ಕೆ.ಎಂ.ವಿನಾಯಕ್ ಹೇಳಿದರು.
ಕೆ.ಎಂ.ವಿನಾಯಕ ಅವರ ಪಟ್ಟಣದ ಪ್ರತಿಷ್ಠಿತ ಕೊಪರಪ್ಪನವರ ಕುಟುಂಬದ ವತಿಯಿಂದ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹಂಡಿಗನಾಳ ಬಳಿಯ ಶಿಲೇಮಾಕನಹಳ್ಳಿಯಲ್ಲಿ ನೂರಾರು ವರ್ಷಗಳ ಪುರಾತನವಾದ ಶ್ರೀಈರಣ್ಣಸ್ವಾಮಿ ಮತ್ತು ಅಕ್ಕಯ್ಯಮ್ಮ ಹಾಗೂ ತಿಮ್ಮಕ್ಕದೇವಿ ದೇವತೆಗಳ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಕೊಪ್ಪರನವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಚಿಕ್ಕರಾಜಪ್ಪನವರಕ್ಯಾಶಪ್ಪ ಅವರ ಕೆ.ರತ್ನಪ್ಪ ಮತ್ತು ಕೃಷ್ಣಪ್ಪ ನವರ ತೋಟದಲ್ಲಿನ ಪುರಾತನವಾಗಿದ್ದ ಶ್ರೀಈರಣ್ಣಸ್ವಾಮಿ ಮತ್ತು ಅಕ್ಕಯ್ಯಮ್ಮ ಹಾಗೂ ತಿಮ್ಮಕ್ಕದೇವಿ ದೇವತೆಗಳ ದೇವಾಲಯ ಜೀರ್ಣೋದ್ಧಾರ ಮಾಡಿ ಲೋಕಾರ್ಪಾಣೆ ಮಾಡಲಾಯಿತು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ದೇವಾಲಯ ಜೀರ್ಣೋದ್ಧಾರ,ವಿಮಾನ ಗೋಪುರ,ಕಳಶ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವವನ್ನು ಕನ್ನಮಂಗಲದ ವೇದಬ್ರಮ್ಹ ವಿ.ಎನ್.ಶಾಸ್ತ್ರಿಗಳು ಮತ್ತು ವಸಂತವಲ್ಲಭಕುಮಾರ್ ತಂಡ ಶಾಸ್ತ್ರೋಕ್ತವಾಗಿ ನೇರವೇರಿಸಿದರು.
ಮೊದಲ ದಿನ ಗಂಗೆಪೂಜೆ, ಗಣಪತಿ ಪೂಜೆ, ಅಂಕುರಾರ್ಪಣೆ, ವಾಸ್ತು ಹೋಮ, ಕಳಶಸ್ಥಾಪನೆ, ನವಗ್ರಹ ಶಾಂತಿ, ಹೋಮ ಹಾಗೆ ಮಾರನೆ ದಿನ ಮುಂಜಾನೆ ಪೂಜೆ, ಹೋಮಗಳು, ಶ್ರೀ ಈರಣ್ಣಸ್ವಾಮಿ ಹಾಗೂ ದುರ್ಗಾ ಸಪ್ತಮಾತೃಕಾ ಹೋಮ, ಪ್ರಾಣ ಪ್ರತಿಷ್ಠಾಪನಾ ಹೋಮ, ಪೂರ್ಣಾಹುತಿ, ಗೋಪುರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ ನಡೆಯಿತು.
ಕೊಪ್ಪರಪ್ಪನವರ ಕುಟುಂಬದ ಹಿರಿಯರಾದ ದಿವಂಗತ ಕೆ.ಮುನಿಯಪ್ಪಶೆಟ್ಟಿ ಮತ್ತು ಅವರ ತಮ್ಮ ದಿವಂಗತ ಕೆ.ಚಿಕ್ಕಣ್ಣಶೆಟ್ಟಿ ರವರ ಮಕ್ಕಳಾದ ಕೆಎಂ ಅಮರನಾಥ್, ಕೆಎಂ ವಿನಾಯಕ, ಕೆ ಎಂ ಧರ್ಮಪ್ರಕಾಶ್, ಕೆಎಂಈಶ್ವರ್ ಪ್ರಸಾದ್,ಕೆಎಂ ಚಂದ್ರಶೇಖರ್, ಕೆ ಸಿ ಇಂದ್ರ ಕುಮಾರ್,ಕೆ ಸಿ ಕುಮಾರ್ ಸ್ವಾಮಿ,ಕೆ ಸಿ ಗಿರಿರಾಜ್, ಪಾಲ್ಗೋಂಡಿದ್ದರು.
ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ,ಮಾಜಿ ಶಾಸಕ ರಾಜಣ್ಣ,ಸೇರಿದಂತೆ ತಾಲೂಕಿನ ಹಲವಾರು ಮುಖಂಡರು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.