ಶ್ರೀನಿವಾಸಪುರ:ಕೋಲಾರ ಹಾಲು ಒಕ್ಕೂಟದ ಶ್ರೀನಿವಾಸಪುರ ತಾಲೂಕು ನಿರ್ದೇಶಕ ಹನುಮೇಶ್ ಒಕ್ಕೂಟದ ಹೆಸರಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಿವೇಶನ ಖರೀದಿಸಿ ಒಕ್ಕೂಟಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಕೋಲಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಪಾಳ್ಯಂಬೈರಾರೆಡ್ಡಿ ಆರೋಪಿಸಿದರು.
ಅವರು ಇಂದು ಪಟ್ಟಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ ಶ್ರೀನಿವಾಸಪುರ ಪಟ್ಟಣದಲ್ಲಿರುವ ಹಾಲು ಒಕ್ಕೂಟದ ಶೀಭಿರ ಕಚೇರಿಗೆ ಕಟ್ಟಡ ಕಟ್ಟಿಸಲು ಎಂದು ಖಾಸಗಿ ವ್ಯಕ್ತಿಗಳಿಂದ ನಿವೇಶನ ಖರೀದಿಸಲು ಮುಂದಾಗಿ ಅದಕ್ಕೆ ದುಬಾರಿ ಲೆಕ್ಕ ತೊರಿಸಿ ಹಾಲು ಒಕ್ಕೂಟಕ್ಕೆ ದಾಖಲೆ ಸಲ್ಲಿಸಿದ್ದು ಇದರಲ್ಲಿ 30-40 ಲಕ್ಷ ರೂಪಾಯಿಗಳ ಹಣ ಲಪಟಾಯಿಸುವಂತ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
ಪಟ್ಟಣದ ಹೊರವಲಯದಲ್ಲಿ ಪಣಸಮಾಕನಹಳ್ಳಿ ಬಳಿ ಸುಮಾರು 10 ಎಕರೆ ಪ್ರದೇಶ ಹಾಗೆ ಸರ್ಕಾರಿ ಕಚೇರಿ ಕಟ್ಟಲು ಅಂದಾಜಿಸಿರುವ ಅಮಾನಿ ಕೆರೆ ಬಳಿ ಅಂದಾಜು 2 ಎಕರೆ ಜಾಗವನ್ನು ಸ್ಥಳೀಯ ಶಾಸಕರ ಸಹಕಾರದಿಂದ ಹಾಲು ಒಕ್ಕೂಟದ ಹೆಸರಿನಲ್ಲಿ ಮಂಜೂರಾಗಿದೆ ಇದರಲ್ಲಿ 10 ಎಕರೆ ಪ್ರದೇಶದಲ್ಲಿ ಹಾಲು ಒಕ್ಕೂಟದಿಂದ ಹಾಲಿನ ಪುಡಿ ತಯಾರಿಕ ಘಟಕ ನಿರ್ಮಾಣ ಮಾಡುವುದು ಯೋಜಿಸಲಾಗಿತ್ತು ಇದಕ್ಕೆ ಭೂಮಿ ಪೂಜೆ ಮಾಡಲಾಗಿತ್ತು 2 ಎಕರೆ ಜಾಗದಲ್ಲಿ ಹಾಲು ಒಕ್ಕೂಟದ ಶೀಭಿರದ ಕಚೇರಿ ನಿರ್ಮಿಸಲು ಭೂಮಿ ಪೂಜೆ ಸಹ ನಡೆದಿರುತ್ತದೆ ಇದರ ಜೊತೆಗೆ ತಾಲೂಕು ಪಂಚಾಯಿತಿ ಆಸ್ತಿಯಾಗಿರುವ ಬಿ.ಎಸ್.ಎನ್.ಎಲ್ ಕಚೇರಿ ಹಿಂಬಾಗದಲ್ಲಿ 60×80 ಅಳತೆಯ ವಾಣಿಜ್ಯ ನಿವೇಶನ ಹಾಲು ಒಕ್ಕೂಟದ ಹೆಸರಿನಲ್ಲಿ ಮಂಜೂರು ಮಾಡಬೇಕು ಎಂದು ತಾಲೂಕು ಪಂಚಾಯಿತಿಯಲ್ಲಿ ನಿರ್ಣಯ ಮಾಡಲಾಗಿದೆ ಇಷ್ಟೆಲ್ಲ ಜಮೀನು ಒಕ್ಕೂಟದ ಹೆಸರಿನಲ್ಲಿ ಇದ್ದರೂ ನಿರ್ದೇಶಕ ಹನುಮೇಶ್ ಹಾಲು ಒಕ್ಕೂಟಕ್ಕೆ ಖಾಸಗಿ ನಿವೇಶನ ಖರಿದಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು ಅಕ್ರಮವಾಗಿ ಅವ್ಯವಹಾರ ನಡೆಸಿ ಹಾಲು ಒಕ್ಕೂಟದ ಹಣ ಲಪಾಟಾಯಿಸಲು ಮುಂದಾಗಿದ್ದಾರೆ.
ಈಗ ಖರೀದಿ ಮಾಡಲು ಹುನ್ನಾರ ಮಾಡಿತ್ತಿರುವ ಜಾಗ ಪಟ್ಟಣದ ಅಮಾನಿಕೆರೆ ಬಳಿಯಲ್ಲಿನ ಖಾಸಗಿ ವ್ಯಕ್ತಿಗೆ ಸೇರಿದ ವಸತಿ ನೀವೆಶನಗಳಾಗಿದ್ದು ಅಲ್ಲಿ ಎರಡು ಸೈಟ್ ಗಳಲ್ಲಿ ಒಂದು 12 ಲಕ್ಷಕ್ಕೆ ಮತ್ತೊಂದು ಸೈಟ್ ಇನ್ನೊಂದು 7 ಲಕ್ಷಕ್ಕೆ ಖರಿದಿಸಲು ಹಾಲು ಒಕ್ಕೂಟದಲ್ಲಿ ಎರಡು ಸೈಟುಗಳಿಗೆ ಎಂಬತ್ತು ಲಕ್ಷ ಬಿಡುಗಡೆ ಮಾಡುವಂತೆ ಒತ್ತಡ ಹಾಕಿ ಒಕ್ಕೂಟದಲ್ಲಿ ನಿರ್ಣಯ ಮಾಡಿಸಿ ಅದರ ಒಪ್ಪಿಗೆಗೆ ಹಾಲು ಮಹಾ ಮಂಡಳಕ್ಕೆ ಕಳಿಸಿರುತ್ತಾರೆ ಇದನ್ನು ಹಾಲು ಮಹಾಮಂಡಲ ಮತ್ತು ಕೋಲಾರ ಹಾಲು ಒಕ್ಕೂಟ ತಡೆಯಬೇಕು ಎಂದು ಉತ್ತಾಯಿಸಿದರು.
ಹಾಲು ಒಕ್ಕೂಟ ಜಿಲ್ಲೆಯ ರೈತರ ಜೀವನಾಡಿ ಇಲ್ಲಿ ಅವ್ಯವಹಾರ ಆದರೆ ನಮ್ಮ ರೈತರ ಅನ್ನ ಕಿತ್ತ್ತುಕೊಂಡಂತೆ ಆಗುತ್ತದೆ, ಜಿಲ್ಲೆಯ ರೈತರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಇದನ್ನು ತಡೆಯಬೇಕು ಎಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಹಾಗು ಹಾಗು ಒಕ್ಕೂಟಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ದಿ, ಮಾಜಿ ಸದಸ್ಯರಾದ ಹಳೇಪೇಟೆ ಮಂಜುನಾಥರೆಡ್ಡಿ,ಗೊಟ್ಟಿಕುಂಟೆ ಕೃಷ್ಣಾರೆಡ್ದಿ,ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ,ಮುಖಂಡರಾದ ನಾಗದೇನಹಳ್ಳಿ ಚೌಡರೆಡ್ದಿ,ಒಬೇಪಲ್ಲಿ ನಾರಯಣಸ್ವಾಮಿ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
Saturday, April 5