ಶ್ರೀನಿವಾಸಪುರ:ರಾಷ್ಟ್ರೀಯ ಮಟ್ಟದ ಮಾಸ್ಟರ್ ಗೇಮ್ಸ್ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲು ಆಯ್ಕೆಯಾಗಿರುವ ತಂಡದಲ್ಲಿ ಶ್ರೀನಿವಾಸಪುರ ತಾಲೂಕಿನ ಯುವಕರು ಪ್ರತಿನಿಧಿಸಿದ್ದು ಆ ಯುವಕರಿಂದ ತಾಲೂಕಿಗೆ ಗೌರವ ಹೆಮ್ಮೆ ತರುವಂತ ವಿಚಾರವಾಗಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ತಾಲೂಕಿನ ಯುವಕರು ಪ್ರತಿನಿಧಿಸಿದ್ದ ವಾಲಿಬಾಲ್ ತಂಡ ಉತ್ತರ ಪ್ರದೇಶದ ವಾರಣಾಸಿಯಲ್ಲಿ 5 ನೇಯ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಯಲ್ಲಿ ವಿಜೇತರಾಗಿದ್ದು ಅದರಲ್ಲಿ ಅಟಗಾರರಾಗಿದ್ದ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಗುಮ್ಮರೆಡ್ಡಿಪುರದ ಶ್ರೀನಾಥ್ ಮತ್ತು ಲಕ್ಷ್ಮಣ್ ರೆಡ್ಡಿ ರವರನ್ನು ಅಭಿನಂದಿಸಿ ಮಾತನಾಡಿದರು.
ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಅದನ್ನೆ ಸಾಧನೆಯಂದು ಮಾಡಲು ಹೊರಟರೆ ವಿಶ್ವ ಚಾಂಪಿಯನ್ ಆಗಬಹುದಾಗಿದೆ ಎಂದು ಯುವಕರ ಸಾಧನೆಯನ್ನು ಕೊಂಡಾಡಿದರು.ವಾರಣಾಸಿಯಲ್ಲಿ ವಿಜೇತರಾದ ಕ್ರೀಡಾಪಟುಗಳು ಮುಂದಿನ ಏಪ್ರಿಲ್ ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ದೇಶದ ಪ್ರತಿನಿಧಿಗಳಾಗಿ ಆಡುತ್ತಿರುವ ತಂಡದಲ್ಲಿ ನಮ್ಮೂರಿನ ಕ್ರೀಡಾಪಟುಗಳು ಇರುವುದು ತಾಲೂಕಿಗೆ ಅತ್ಯಂತ ಗೌರವದ ವಿಚಾರ ಎಂದರು.ಈ ಸಂದರ್ಭದಲ್ಲಿ ಜೆ.ಡಿ.ಎಸ್.ಯುವ ಮುಖಂಡರಾದ ಗಾಯತ್ರಿ ಮುತ್ತಪ್ಪ.ಗಣೇಶ,ಗುಮ್ಮರೆಡ್ಡಿಪುರ ಮಂಜುನಾಥ್, ದಳಸನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶ್ರೀನಾಥ್,ಕಾರ್ತಿಕ್,ಮಹೇಶ್ ಮುಂತಾದವರು ಇದ್ದರು.
Breaking News
- ಯದರೂರು ಕೈಗಾರಿಕೆ ಶೇಷಾಪುರ & ಬೇಟಪ್ಪ ನಡುವೆ ಮಾತಿನ ಜಟಾಪಟಿ!
- ಶ್ರೀನಿವಾಸಪುರದಲ್ಲಿ ಫುಟ್ ಪಾತ್ ಅತಿಕ್ರಮಿಸಿದ್ದ ಅಂಗಡಿಗಳ ತೆರವು
- SHOCKING ತಿನ್ನುವ ಕೇಕ್ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!
- ಯದರೂರಿನಲ್ಲಿ ಸ್ಥಾಪಿಸುವ ಕೈಗಾರಿಕೆ ಬೇರೆಡೆಗೆ ವರ್ಗಾಯಿಸಿ ರೈತರ ಅಗ್ರಹ
- ಕರ್ನಾಟಕದಲ್ಲಿ ಹಿಂದೂ ಹೆಸರಲ್ಲಿ ನೆಲೆಸಿದ್ದ ಪಾಕಿಸ್ತಾನದವರ ಬಂಧನ
- ಹಣ ಆಭರಣ ದೋಚಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಳ್ಳರು
- ಶ್ರೀನಿವಾಸಪುರದ ವೇಣುಕುಮಾರಗೆ ತೋಟಗಾರಿಕೆ ಡಾಕ್ಟರೇಟ್ ಪುರಸ್ಕಾರ
- ಮಹಾರಾಷ್ಟ್ರ NDA ಸರ್ಕಾರ ಗೋವಿಗೆ ‘ರಾಜ್ಯ ಮಾತಾ’ ಘೋಷಣೆ
- HELATH ALERT ಹೆಚ್ಚು ಉಪ್ಪು ತಿನ್ನುತ್ತಿದ್ದರೆ ಹುಷಾರು!
- ತಿರುಮಲದಲ್ಲಿ ದೀಕ್ಷೆ ತೆರೆಯಲಿರುವ ಆಂಧ್ರ DCM ಪವನ್ ಕಲ್ಯಾಣ್
Saturday, October 5