ಶ್ರೀನಿವಾಸಪುರ:ಕಳೆದ ಹತ್ತು ವರ್ಷಗಳಿಂದ ತಾಲೂಕಿನಲ್ಲಿ ಯಾವುದೆ ಅಭಿವೃದ್ಧಿಯಾಗಿಲ್ಲ ಜನ ಬೆಸೆತ್ತು ಹೋಗಿದ್ದಾರೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು,ಅವರು ತಾಲೂಕಿನ ಕಸಬಾ ಹೋಬಳಿಯ ಆಲವಟ್ಟ,ಕಿರುವಾರ,ಆಲಂಬಗಿರಿ,ಪಾತಪಲ್ಲಿ,
ಕಠಾರ ಮುದ್ದಲಹಳ್ಳಿ, ಕಲ್ಲೂರು, ಹಾಗೂ ಜೆ.ವಿ.ಕಾಲೋನಿ ಸೇರಿದಂತೆ ವಿವಿದ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪಕ್ಷದ ಮೇಲೆ ಅಭಿಮಾನ ಇಟ್ಟು ಬರುವಂತ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ ಯಾರು ಯಾವುದೇ ಕಾರಣಕ್ಕೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಪರವಾಗಿ ರಕ್ಷಣೆ ನೀಡಲು ನಾನು ಇದ್ದೇನೆ ಎಂದು ಭರವಸೆ ನೀಡಿದರು, ನೀವು ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತಂದು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಶ್ರಮಿಸೋಣ ಎಂದರು. ರಾಜ್ಯದ ಹಿಂದುಳಿದ ದಲಿತರ ಮತ್ತು ಅಲ್ಪ ಸಂಖ್ಯಾತರ ರಕ್ಷಣೆಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ರೈತರ ಹಿತಕಾಪಾಡಲು ಕುಮಾರಸ್ವಾಮಿಯನ್ನು ಗೆಲ್ಲಿಸಬೇಕು ಎಂದರು.
ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಮಾತನಾಡಿ ರಾಜ್ಯದ ಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಶ್ರೀನಿವಾಸಪುರದ ಅಭಿವೃದ್ಧಿಗೆ ಇಲ್ಲಿ ವೆಂಕಟಶಿವಾರೆಡ್ಡಿಯವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.
ಜೆಡಿಎಸ್ ರಾಜ್ಯ ಮುಖಂಡ ಭೀಮಗುಂಟಪಲ್ಲಿಶಿವಾರೆಡ್ಡಿ ಮಾತನಾಡಿ ರಾಜ್ಯದಲ್ಲಿ ಅಕ್ರಮ ಸರ್ಕಾರಗಳು ಹೋಗಬೇಕು ಜನಸಾಮಾನ್ಯರ ರಕ್ಷಣೆಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಾಲೂಕಿನ ಅಭಿವೃದ್ಧಿಗಾಗಿ ಈ ಬಾರಿ ವೆಂಕಟಶಿವಾರೆಡ್ದಿ ಗೆಲವು ಸಾಧಿಸಬೇಕು ಇದಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಜಿ.ಎಫ್ ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬು,ಪುರಸಭೆ ಸದಸ್ಯ ವೆಂಕಟರೆಡ್ದಿ,ಕೋಮೂಲ್ ಮಾಜಿ ನಿರ್ದೇಶದ ಪಾಳ್ಯಾಂಬೈರಾರೆಡ್ದಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೀಸಗಾನಹಳ್ಳಿಶ್ರೀನಿವಾಸ್,ವಕೀಲ ಕುಂದಿಟವಾರಿಪಲ್ಲಿಶಿವಾರೆಡ್ಡಿ, ನಿಲ್ಟೂರುಚಿನ್ನಪ್ಪರೆಡ್ಡಿ,ಸಹಕಾರಿ ಧುರಿಣ ರಾಮಚಂದ್ರೇಗೌಡ,ಆದಿತ್ಯಶೊರೂಂ ನಾರಯಣಸ್ವಾಮಿ,ಬಂಡಪಲ್ಲಿ ಚಂದ್ರಾರೆಡ್ಡಿ,ಕೊರ್ನಹಳ್ಳಿ ಅಂಜಪ್ಪ,ಕಾರ್ ಬಾಬು,ಗೊಲ್ಲಪಲ್ಲಿಪ್ರಸನ್ನ,ಅಲಂಬಗಿರಿ ಮುಖಂಡ ರಮೇಶ್ ಕುಮಾರ್, ಪಾತಪಲ್ಲಿಚೌಡರೆಡ್ಡಿ,ವೆಂಕಟ್ರಾಮರೆಡ್ಡಿ,ನಾಗೇಶ್,ಶಿವಪುರಗಣೇಶ್, ಚಲ್ದಿಗಾನಹಳ್ಳಿಬೈರೆಡ್ದಿ ಮುಂತಾದವರು ಇದ್ದರು.