ನ್ಯೂಜ್ ಡೆಸ್ಕ್: ಶ್ರೀನಿವಾಸಪುರದಂತ ಸಾರಿಗೆ ವ್ಯವಸ್ಥೆಯಲ್ಲಿ ನಿರ್ಲ್ಯಕ್ಷಿತ ಹಿಂದುಳಿದ ತಾಲೂಕಿಗೆ ಬೆಂಗಳೂರಿನಿಂದ ಬರಲು ಹೋಗಲು ಇದ್ದ ಎರಡು-ಮೂರು ಖಾಸಗಿ ಸಾರಿಗೆ ಬಸ್ಸುಗಳು ಬರುತ್ತಿದ್ದದೆ ಅದು ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಇಂತಹ ಕಲಾಸಿಪಾಳ್ಯ ಬಸ್ ನಿಲ್ದಾಣ ಅಭಿವೃದ್ಧಿ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿತ್ತು,ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಹೋಗಲು ಜನಸಾಮನ್ಯರು ಹೆದರುತ್ತಿದ್ದರು ಬಸ್ ಮಾಲಿಕರನ್ನು ಬೆದರಿಸಿ ಅಲ್ಲಿನ ಬಸ್ ಏಜೆಂಟರು ತಾವೆ ಮಾಲಿಕರಂತೆ ಬಸ್ ಟಿಕೆಟ್ ಬುಕಿಂಗ್ ಮಾಡುತ್ತ ಸಾರ್ವಜನಿಕರೊಂದಿಗೆ ಒರಟಾಗಿ ವರ್ತನೆಮಾಡುತ್ತಿದ್ದರು ಜೊತೆಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲ ಸ್ವಚ್ಚತೆ ಅನ್ನುವುದು ಕಾಣಸಿಗುತ್ತಿರಲಿಲ್ಲ ಮಳೆ ಬಂದರೆ ಕೆರೆಯಂತಾಗುವ ಸ್ಥಳದಲ್ಲಿ ಮನುಷ್ಯನ ಎಲ್ಲವೂ ಅಲ್ಲೆ ನಡೆಯುತಿತ್ತು ಅಲ್ಲಿನ ಕೊಳಕು ಪ್ರದೇಶದಲ್ಲಿಯೇ ಮುಗು ಮುಚ್ಚಿ ಒಡಾಟವನ್ನು ಅಷ್ಟ ಕಷ್ಟಗಳ ಅಸಹ್ಯ ದೌರ್ಜನ್ಯಗಳ ನಡು ನಡುವೆಯೇ ಜನತೆ ಸಾರ್ವಜನಿಕ ಸಾರಿಗೆಗೆ ಆಶ್ರಯಿಸಿದ್ದ ಖಾಸಗಿ ಬಸ್ಸಿಗಾಗಿ ಅನಿಭವಿಸುತ್ತಿದ್ದರು.ಶ್ರೀನಿವಾಸಪುರದಂತ ಊರುಗಳಿಗೆ ಈಗಲೆ ಬಾರದಂತ ರಾಜ್ಯ ಸರ್ಕಾರಿ ಸಾರಿಗೆ ಅಗ ಇಲ್ಲವೆ ಇರಲಿಲ್ಲ ಕಾರಣದಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ಕಲಾಸಿಪಾಳ್ಯದ ಬಸ್ ಏಜೆಂಟರ್ ಕಿರುಕುಳ ಸ್ವಚ್ಚತೆ ಇಲ್ಲದ ವ್ಯವಸ್ಥೆಯನ್ನು ಸಹಿಸಿಕೊಂಡೆ ಜನ ಖಾಸಗಿ ಬಸ್ ನಲ್ಲಿ ಒಡಾಡುತ್ತಿದ್ದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪಾರಸ್ಥರು ಬೆಂಗಳೂರು ನಗರದಿಂದ ಸರಕು ಸಾಗಾಣಿಕೆ ಮಾಡಿಕೊಳ್ಳಲು ಖಾಸಗಿ ಬಸ್ಸುಗಳನ್ನೆ ಆಶ್ರಯಿಸುತ್ತಿದ್ದರು, ಅವರು ತಾವು ಕೊಂಡ ಸರಕುಗಳನ್ನು ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ತಂದು ಬಸ್ ಏಜೆಂಟರ ಕಿರುಕುಳ ದೌರ್ಜನ್ಯಗಳನ್ನು ಸಹಿಸಿಕೊಂಡು ಬಸ್ ಸಾರಿಗೆ ಬಳಸಿಕೊಳ್ಳುತ್ತಿದ್ದರು.
ಇಂತಹ ಕೊಳಚೆ ಕೂಪದ ಬೆಂಗಳೂರು ಹೃದಯ ಭಾಗದ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಸುಮಾರು 63.17 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ,2016ರಲ್ಲಿ ಅಡೆ-ತಡೆಗಳ ನಡುವೆ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು,ನಂತರ ಈಗ ಸುಸಜ್ಜಿತ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಕೊನೆಗೂ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ.
ಕೋಲಾರ,ಚಿಂತಾಮಣಿ ಶ್ರೀನಿವಾಸಪುರ ಸೇರಿದಂತೆ ರಾಜಧಾನಿಯ ಅಷ್ಟ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಉದ್ಘಾಟನೆಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯುBMTC ಬಸ್ಸುಗಳ ನಿಲ್ಲಿಸುವುದರಿಂದ ಸಾರ್ವಜನಿಕರ ಅನುಕೂಲವಾಗುತ್ತದೆ ಮಾರುಕಟ್ಟೆ ಭಾಗದಲ್ಲಿ ಮುಖ್ಯವಾಗಿ ಟ್ರಾಫಿಕ್ ದಟ್ಟಣೆ ಕಡಿಮೆಯಾಗಲಿದೆ.
ರಾಜ್ಯ ಸಾರಿಗೆ ಹೋಗುವ ಬಸ್ಸುಗಳು
ಕಲಾಸಿಪಾಳ್ಯದ ಕೋಟೆ ಪ್ರದೇಶದಿಂದ ಕನಕಪುರ ರಸ್ತೆ,ಮಾಗಡಿ ರಸ್ತೆ ಮಾರ್ಗವಾಗಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳು ಕಾರ್ಯಾಚರಣೆಗೊಳ್ಳುತ್ತವೆ. ಬನ್ನೇರುಘಟ್ಟ, ಜಿಗಣಿ, ಹೊಸೂರು, ಆನೇಕಲ್ಗೆ ತೆರಳುವ ಬಸ್ಗಳು ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಹೊರಡುತ್ತವೆ. ಕೆ.ಆರ್. ಮಾರ್ಕೆಟ್ನ ಜಾಮೀಯಾ ಮಸೀದಿ ಬಳಿಯ ನಿಲ್ದಾಣದಿಂದ ಕೆ.ಆರ್.ಪುರ, ಹೊಸಕೋಟೆ, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ನೆಲಮಂಗಲ ಕಡೆ ಬಸ್ಗಳು ಸಂಚರಿಸುತ್ತವೆ.
ಶ್ರೀನಿವಾಸಪುರದ ಜನಕ್ಕೆ ಕಲಾಸಿಪಾಳ್ಯ ಬಸ್ ನಿಲ್ದಾಣವೇ ಗತಿ!
ಏನೆಲ್ಲಾ ಸಮಸ್ಯಗಳು ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಇದ್ದರು ಶ್ರೀನಿವಾಸಪುರದ ಜನ ಊರಿಗೆ ವಾಪಸ್ಸು ಬರಲು ಅನಿವಾರ್ಯವಾಗಿ ಒಬಿರಾಯನಕಾಲದಿಂದ ಇರುವಂತ ಖಾಸಗಿ ಬಸ್ಸುಗಳನ್ನೆ ನಂಬಿ ಜನತೆ ನೇರವಾಗಿ ಶ್ರೀನಿವಾಸಪುರಕ್ಕೆ ಬರುತ್ತಾರೆ,ಇಷ್ಟೆಲ್ಲಾ ವ್ಯವಸ್ಥೆ ಬೆಳೆದಿದ್ದರು ಇವತ್ತಿಗೂ ಸಂಜೆ ಸಮಯದಲ್ಲಿ ನೇರವಾಗಿ ಶ್ರೀನಿವಾಸಪುರಕ್ಕೆ ಆಗಮಿಸಲು ಸಾರಿಗೆ ಸಂಸ್ಥೆ ಬಸ್ಸುಗಳು ಇಲ್ಲದಿರುವುದು ಬಹು ದೊಡ್ದ ದುರಂತ.
ಕಲಾಸಿಪಾಳ್ಯ ಬಸ್ ನಿಲ್ದಾಣದ ಅಭಿವೃದ್ಧಿ ವಿಳಂಬ ಸಮಸ್ಯೆಗಳ ಕುರಿತಂತೆ vcsnewz ಡಿಸೆಂಬರ್22 ತಿಂಗಳಲ್ಲಿ ಸುದ್ಧಿ ಮಾಡಿ ಬೆಳಕು ಚಲ್ಲಿತ್ತು