ನ್ಯೂಜ್ ಡೆಸ್ಕ್:ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟವಾಗಿರುತ್ತದೆ, ಅಂತಹ ಅದ್ಭುತಕ್ಕೆ ಸಾಕ್ಷಿಕರಿಸಲು ಮದುವೆ ಸಮಾರಂಭಕ್ಕೆ ಬಂಧುಗಳನ್ನು,ಆತ್ಮೀಯರನ್ನು,ಸ್ನೇಹಿತರು ಹೀಗೆ ಯಾರೆನೆಲ್ಲ ಕರೆಯಲು ಅವಕಾಶ ಇರುತ್ತದೋ ಅವರನ್ನು ಕರೆಯುವುದು ಸಾಮನ್ಯ
ಇನ್ನು ಮದುವೆಯ ಆಮಂತ್ರಣ ನೀಡಲು ಬೈಕ್ ಕಾರ್ ಬಸ್ಸು ಊರಲ್ಲಾದರೆ ನಡೆದಾಡಿಕೊಂಡು ಹೋಗುವುದು ಸಾಮನ್ಯ ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಹೋದರನ ಮದುವೆ ಆಮಂತ್ರಣ ನೀಡಲು ಹೆಲಿಕಾಪ್ಟರ್ ಬಳಸಿಕೊಂಡ ಕಥೆಯಿದು.
ಮೊದಲೆಲ್ಲ ಕಾಲ್ನಡಿಗೆ ಬಂಡಿ, ಅಥಾವ ಸೈಕಲ್ ನಲ್ಲಿ ಹೋಗುತ್ತಿದ್ದರು ಬದಲಾದ ಕಾಲಘಟ್ಟದಲ್ಲಿ,ಸಂಬಂಧಿಕರಿಗೆ ಪತ್ರಿಕೆಗಳನ್ನು ತಲುಪಿಸಲು ಬಸ್ಸು, ಸ್ವಂತ ದ್ವಿಚಕ್ರ ವಾಹನ ಕಾರು,ಬಾಡಿಗೆ ಕಾರು, ವಿವಿಧ ಸಾರಿಗೆ ಬಳಸಿಕೊಂಡು ಇನ್ನೂ ದೂರ ಇರುವಂತವರಿಗೆ ವಾಟ್ಸಾಪ್ ಮೂಲಕ ಕೊರಿಯರ್,ಅಂಚೆ ಮೂಲಕ ಮದುವೆ ಕಾರ್ಡ್ ಗಳನ್ನು ಕಳುಹಿಸುವುದು ಸಾಮನ್ಯ ಸಂಗತಿಯಾಗಿದೆ. ಆದರೆ ಹೈದರಾಬಾದ್ ಉದ್ಯಮಿಯೊಬ್ಬ ವಿನೂತನವಾಗಿ ಆಲೋಚಿಸುವ ಮೂಲಕ ಹೀಗೂ ಮದುವೆ ಆಮಂತ್ರಣದ ಪತ್ರಿಕೆ ನೀಡಬಹುದು ಎಂದು ಹೊಸ ಟ್ರೆಂಡ್ ಹುಟ್ಟುಹಾಕಿದ್ದಾನೆ. ತನ್ನ ಸಹೋದರನ ಮದುವೆ ಪತ್ರಿಕೆಗಳನ್ನು ಹಂಚಲು ಹೆಲಿಕಾಪ್ಟರ್ ಬುಕ್ ಮಾಡಿ ಅದರಲ್ಲಿ ತೆರಳಿ ಬಂಧು ಮಿತ್ರರಿಗೆ ಮದುವೆ ಪತ್ರಿಕೆ ಹಂಚಿರುತ್ತಾನೆ.ಹೈದರಾಬಾದ್ ನಗರದ ಖೈರತಾಬಾದ್ನಲ್ಲಿರುವ ಉದ್ಯಮಿ ಮಧು ಯಾದವ್, ದುದ್ ವಾಲ ಎಂಬ ಹೆಸರಿನ ಡೈರಿ ಫಾರಂ ನಡೆಸುತ್ತಿದ್ದಾರೆ. ಇದೇ ತಿಂಗಳ 9ರಂದು ಸಹೋದರ ಚಂದು ಯಾದವ್ ಮದುವೆ ಸಮಾರಂಭಕ್ಕೆ ಸಂಬಂಧಿಕರಿಗೆ ಮದುವೆ ಪತ್ರ ಹಂಚಲು ಮುಂದಾಗಿದ್ದಾನೆ ಸ್ಥಳೀಯವಾಗಿ ಇರುವಂತವರಿಗೆ ಈಗಾಗಲೆ ಆಮಂತ್ರಣ ನೀಡಿಯಾಗಿದೆ, ಆದರೆ ಮುಂಬೈನಲ್ಲಿರುವ ಮಧು ಯಾದವ್ ಸಂಬಂಧಿಕರಿಗೆ ಖುದ್ದಾಗಿ ಮದುವೆಯ ಪತ್ರಿಕೆ ನೀಡಲು ಹೆಲಿಕಾಪ್ಟರ್ ಬಳಸಿಕೊಂಡಿದ್ದಾನೆ.
ಹೈದರಾಬಾದ್ ನಿಂದ ವಿಮಾನ ಅಥವಾ ರೈಲಿನಲ್ಲಿ ಹೋಗುವ ಬದಲು ಮದುವೆ ಪತ್ರಿಕೆಗಳನ್ನು ಹಂಚಲು ಹೆಲಿಕಾಪ್ಟರ್ ಬುಕ್ ಮಾಡಿರುತ್ತಾನೆ ಕಳೆದ ಮಂಗಳವಾರ ಹೆಲಿಕಾಪ್ಟರ್ನಲ್ಲಿ ಮುಂಬೈಗೆ ತೆರಳಿದ ಅವರು ತಮ್ಮ ಸಹೋದರನ ಲಗ್ನಪತ್ರಿಕೆಗಳನ್ನು ಸಂಬಂಧಿಕರಿಗೆ ಹಂಚಿರುತ್ತಾರೆ. ಮದುವೆ ಆಮಂತ್ರಣಕ್ಕೆ ಮಧು ಯಾದವ್ ಹೆಲಿಕಾಪ್ಟರ್ ಅನ್ನು ಬುಕ್ ಮಾಡಿದರೆ ಇನ್ನೂ ಮದಿವೆ ಯಾವ ರೆಂಜಿನಲ್ಲಿ ಇರಬಹುದಾಗಿರುತ್ತದೆ ಎಂದು ವಿವಿದ ರೀತಿಯ ಆಲೋಚನೆಯಲ್ಲಿ ಆಮಂತ್ರಣ ಪಡೆದವರು ಕಾತುರದಿಂದ ಕಾಯುತ್ತಿದ್ದಾರಂತೆ.