ನ್ಯೂಜ್ ಡೆಸ್ಕ್: ಬೆಂಗಳುರು ನಗರದ ಕೆಆರ್ಪುರಂ ನಿಂದ ವೈಟ್ಫೀಲ್ಡ್ ಮಧ್ಯೆ ಸಂಚರಿಸಲಿರುವ ನಮ್ಮ ಮೆಟ್ರೋ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಸಿಎಂಆರ್ಎಸ್ ಧೃಡಿಕರಿಸಿದೆ ಎಂದು ಬಿಎಂಆರ್ಸಿಎಲ್ ಹೇಳಿಕೆ ನೀಡಿದೆ.
ಕೆಆರ್ಪುರಂ ಮತ್ತು ವೈಟ್ಫೀಲ್ಡ್ ನಡುವಿನ ರಸ್ತೆ ಮಾರ್ಗದ ಓಡಾಟ ಸದಾ ಟ್ರಾಫಿಕ್ ಬಿಝಿಯಾಗಿರುತ್ತದೆ. ಒಮ್ಮೆ ಈ ಮಾರ್ಗದಲ್ಲಿ ಹೋದವರು ಮತ್ತೆ ಆ ಮಾರ್ಗದಲ್ಲಿ ವಾಪಸ್ಸು ಬರಲು ಸಾಕಪ್ಪ ಸಾಕು ಎನ್ನುತ್ತಾರೆ ವಿಶೇಷವಾಗಿ ಕೋಲಾರ-ಚಿಂತಾಮಣಿ ಭಾಗದ ಜನರು ಕೊಂಚ ಹೆಚ್ಚು ಒಡಾಡುವ ಈ ಮಾರ್ಗದಲ್ಲಿ ಮೆಟ್ರೋ ರೈಲು ಒಡಾಡಲು ಎಲ್ಲವೂ ಸಿದ್ದಮಾಡಿಕೊಳ್ಳಲಾಗಿದೆ ಜನರ ಒಡಾಟ ಪ್ರಾರಂಭವಾಗ ಬೇಕು ಅಷ್ಟೆ.
ಈ ಮೆಟ್ರೋ ಲೈನ್ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಮೆಟ್ರೋ ರೈಲ್ ಸೇಫ್ಟಿ ಸಂಸ್ಥೆ (CMRS) ಧೃಡಪಡಿಸಿದೆ ಎಂದು ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಶನ್ (BMRCL) ಹೇಳಿದೆ. ರೈಲು ಸಂಚಾರಕ್ಕೆ ಚಾಲನೆ ನೀಡಲು ದಿನಾಂಕ ನಿಗದಿಯಾಗಬೇಕು ಅಷ್ಟೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಈ ಬಗ್ಗೆ ಸಿಎಂಆರ್ಎಸ್ ಅಭಯ ಕುಮಾರ್ ರೈ ಅವರು ಮಾಹಿತಿ ನೀಡಿ ಕೆಆರ್ ಪುರಂ-ವೈಟ್ಫೀಲ್ಡ್ ಮೆಟ್ರೋ ಲೈನ್ ಮತ್ತು ಈ ಲೈನ್ ಎಲ್ಲ ರೈಲು ನಿಲ್ದಾಣಗಳ ಮೂಲಸೌಕರ್ಯಗಳನ್ನು ಪರಿಶೀಲಿಸಲಾಯಿತು. ವಿಶೇಷವಾಗಿ ಅಗ್ನಿ ಸುರಕ್ಷತೆ, ಪ್ರಯಾಣಿಕ ಸೂಚನಾ ಫಲಕಗಳನ್ನು ಪರಿಶೀಲನೆ ಮಾಡಲಾಯಿತು ಎಂದಿದ್ದಾರೆ.
ಬಿಎಂಆರ್ಸಿಎಲ್ ಮತ್ತು ಸಿಎಂಆರ್ಎಸ್ ಅಧಿಕಾರಿಗಳು ಜಂಟಿಯಾಗಿ ಕೆಆರ್ ಪುರಂ-ವೈಟ್ಫೀಲ್ಡ್ವರೆಗಿನ 12 ಮೆಟ್ರೋ ನಿಲ್ದಾಣಗಳನ್ನು ಪರಿಶೀಲಿಸಿದ್ದಾರೆ. ಕೆಆರ್ ಪುರಂ ನಿಲ್ದಾಣದಿಂದ 1.5 ಕಿಮೀ ದೂರದಲ್ಲಿರುವ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ ಎಂದರು.
ಮಾರ್ಗದ ರೈಲು ನಿಲ್ದಾಣಗಳು
13 ಕಿಲೋಮೀಟರ್ ಮೆಟ್ರೋ ಮಾರ್ಗದ 12 ನಿಲ್ದಾಣಗಳು ವೈಟ್ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ. ವೈಟ್ಫೀಲ್ಡ್ ಬಳಿ ಇರುವ ಟೆಕ್ ಪಾರ್ಕ್ನಿಂದ ಮೆಟ್ರೋ ಮಾರ್ಗಕ್ಕೆ ನೇರ ಪ್ರವೇಶಕ್ಕಾಗಿ ಬಿಎಂಆರ್ಸಿಎಲ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್ (ITPL) ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಹೊಸ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾದಾಗ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ ಮತ್ತು ಟೆಕ್ ಪಾರ್ಕ್ ಎರಡನ್ನೂ ಸಂಪರ್ಕಿಸುವ ವಾಕ್ವೇ ಅನ್ನು ನಿರ್ಮಿಸಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.