ಮಾಲೂರು: ದಿ ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಕೊರಿಯರ್ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ತನ್ನದೆ ಆದ ಸ್ವಂತ ನೆಟ್ ವರ್ಕ್ ಮೂಲಕ ವೈಶಿಷ್ಠ ಪೂರ್ಣವಾಗಿ ಸೇವೆ ಸಲ್ಲಿಸುತ್ತ ಇಡಿ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ ಎಂದು ಪ್ರೊಫೇಷನಲ್ ಕೊರಿಯರ್ ಸಂಸ್ಥೆಯ ಮಾಹಿತಿ ತಂತ್ರಙ್ಞಾನದ ನಿರ್ದೇಶಕ ವಿ.ಶ್ರೀನಾಥ್ ಹೇಳಿದರು ಅವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ದಿ ಪ್ರೊಫೇಷನಲ್ ಕೊರಿಯರ್ ನೂತನ ಕಚೇರಿ ಪ್ರಾರಂಭಿಸಿ ಮಾತನಾಡಿದರು.
ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಕಾಲದ ಅಣತಿಯಂತೆ ಇನ್ನು ಹೆಚ್ಚು ಸೇವೆಗಳನ್ನು ಸರಳ ರಿತಿಯಲ್ಲಿ ಗ್ರಾಹಕರಿಗೆ ನೀಡಲು ಅಗತ್ಯ ತಂತ್ರಙ್ಞಾನ ಬಳಸಿಕೊಂಡು ಮನುಷ್ಯ ತಗೆದುಕೊಂಡು ಹೋಗಿ ವಿತರಣೆ ಮಾಡುವಂತ ಸಾಂಪ್ರದಾಯಿಕ ಕೊರಿಯರ್ ವ್ಯವಸ್ಥೆಗೆ ಅಂತರ್ಜಾಲದ ತಾಂತ್ರಿಕತೆ ಜೊಡಿಸಲಾಗಿದ್ದು ಇದು ವಿದ್ಯುನ್ಮಾನ ಸಂಪರ್ಕ ವ್ಯವಸ್ಥೆಯಾಗಿ ಗ್ರಾಹಕ ಮತ್ತು ಪ್ರೊಫೇಷನಲ್ ಕೊರಿಯರ್ ಸಂಸ್ಥೆ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ.
ಗ್ರಾಹಕ ಪ್ರೊಫೇಷನಲ್ ಕೊರಿಯರ್ ಸಂಸ್ಥೆಯಲ್ಲಿ ಕೊರಿಯರ್ ಬುಕ್ ಮಾಡಿದರೆ ಅದು ಎಲ್ಲಿ ಹೊಗುತ್ತದೆ ಸೇರಬೇಕಾದಂತ ಸ್ಥಳಕ್ಕೆ ಯಾವತ್ತು ತಲಪುತ್ತದೆ ಎಂಬುದನ್ನು ಪ್ರೊಫೇಷನಲ್ ಕೊರಿಯರ್ ಅಂತರ್ಜಾಲದ ಪುಟದ ಟ್ರ್ಯಾಕಿಂಗ್ ವಿಭಾಗದಲ್ಲಿ ಸ್ವತಃ ಗ್ರಾಹಕನೆ ತನ್ನ ಅಂಗ್ಯಯಲ್ಲಿನ ಮೊಬೈಲ್ ನಲ್ಲಿ ನೋಡಬಹುದಾಗಿರುತ್ತದೆ.
ಇನ್ನಷ್ಟು ಸೇವೆಗಳನ್ನು ಒದಗಿಸುವ ಸಲುವಾಗಿ ಲಕೋಟೆಗಳನ್ನು ಸಾಗಿಸುವ ಕೊರಿಯರ್ ಸೇವೆಯೊಂದಿಗೆ ಪ್ರತಿದಿನ ಪಾರ್ಸಲ್ ಲಾಜಸ್ಟಿಕ್ ಸೇವೆಗಳನ್ನು ಒದಗಿಸುವ ಸಲುವಾಗಿ ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಎಲ್ಲಾ ಹಂತದಲ್ಲೂ ಟೀಂ ವರ್ಕ್ ಮಾಡುತ್ತದೆ, ಇದೊಂದು ರೀತಿಯ ತಂಡಾಚರಣೆಯ ಕಾರ್ಯನಿರ್ವಹಣೆ ಅದ್ಭುತವಾಗಿ ಗ್ರಾಹಕರ ನೀರಿಕ್ಷೆಗಳ ಅನುಗುಣವಾಗಿ ಸೇವೆ ಒದಗಿಸಲು ಸಾದ್ಯವಾಗುತ್ತದೆ ಎಂದ ಅವರು ಭಾರತದಾದ್ಯಂತ ಗುಣಾತ್ಮಕ ಸೇವೆ ನೀಡುವ ಸಲುವಾಗಿ 200ಕ್ಕೂ ಹೆಚ್ಚು ಪ್ರಮುಖ ಹಬ್ ಕೇಂದ್ರಗಳು,850 ಕ್ಕೂ ಹೆಚ್ಚು ಉಪಹಬ್ ಕೇಂದ್ರಗಳು,3300 ಕ್ಕೂ ಹೆಚ್ಚು ಶಾಖೆಗಳು ಭಾರತದಾದ್ಯಂತ 70,000 ವಿತರಣಾ ಕೇಂದ್ರಗಳು ಮೂಲಕ ಪ್ರೊಫೇಷನಲ್ ಕೊರಿಯರ್ ದೇಶದ ಪ್ರತಿಯೊಂದು ಮೂಲೆ ಮೂಲೆಗೂ ಪ್ರತಿದಿನ ತಲುಪುತ್ತಿದೆ.ಅಂತರಾಷ್ಟ್ರೀಯ ಮಟ್ಟದಲ್ಲೂ ಗುಣಾತ್ಮಕ ಸೇವೆ ಒದಗಿಸುವ ಸಲುವಾಗಿ 200 ಕ್ಕೂ ಹೆಚ್ಚು ದೇಶಗಳಿಗೆ ತ್ವರಿತ ಮತ್ತು ಸುರಕ್ಷಿತ ವಿತರಣೆಯನ್ನು ನೀಡಲಾಗುತ್ತಿದೆ ಇದರ ವಿತರಣಾ ಸ್ಥಿತಿಯ ಕುರಿತು ಗ್ರಾಹಕನಿಗೆ ಅಪ್ಡೇಟ್ ನೀಡಲು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಮತ್ತಷ್ಟು ಸೇವೆಗಳು ಚಾಲನಗೆ
ಗ್ರಾಹಕರ ಅಗತ್ಯತೆಗೆ ತಕ್ಕಂತೆ ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಪ್ರೊ ಪ್ರೀಮಿಯಂ ಸೇವೆ ಪ್ರಾರಂಭಿಸಿದ್ದು ಇದು ಯಶಸ್ವಿಯಾಗಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ ಭಾನುವಾರದ ರಜೆ ಇತರೆ ಹಬ್ಬ ಹರಿದಿನಗಳ ರಜಾ ದಿನಗಳಲ್ಲಿ ಸಂದರ್ಭದಲ್ಲಿ ಅಗತ್ಯ ಸೇವೆಗಳ ಅಡಿಯಲ್ಲಿ ವಿಶೇಷವಾಗಿ ಗ್ರಾಹಕರಿಗೆ ಗುಣಾತ್ಮಕ ಸೇವೆ ಒದಗಿಸಲು ಪ್ರೊ ಪ್ರೀಮಿಯಂ ಸೇವೆ ಪಡೆಯಬಹುದಾಗಿದೆ.
ಪ್ರೊ ಇಸರ್ವ್ ಇದೊಂದು ವೈಶಿಷ್ಟಮಯವಾದ ಸೇವೆಯಾಗಿದ್ದು ಇ-ಕಾಮರ್ಸ್ ವಿತರಣೆಗಳ ಪರಿಹಾರವಾಗಿ ಕೆಲಸ ಮಾಡುತ್ತದೆ
ಇ-ಕಾಮರ್ಸ್ನಂತೆ ಕಾರ್ಯನಿರ್ವಹಿಸುವ ಇಸರ್ವ್ ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವೇಗವರ್ಧಕವಾಗಿ ಉತ್ಪಾದಕ ವಲಯ ಮತ್ತು ಗ್ರಾಹಕರ ನಡಿವೆ ಕೊಂಡಿಯಾಗಿ ಕಾರ್ಯನಿರ್ವಸುವಂತ ವ್ಯವಸ್ಥೆಯಾಗಿದೆ.
ಕೊರಿಯರ್ ಸೇವೆಯಲ್ಲಿ ನವೀನ ಪರಿಹಾರಗಳ ಪ್ರವರ್ತಕರಾಗಿರುವ ಪ್ರೊಫೇಷನಲ್ ಕೊರಿಯರ್ ಸಂಸ್ಥೆಯಲ್ಲಿ ಮತ್ತೊಂದು ನವೀನ ಸೇವೆಯಾಗಿರುವ ಕಾರ್ಪೊರೆಟ್ ಸಂಸ್ಥೆಗಳಿಗೂ ಸೇವೆ ಒದಗಿಸುವ ಸಲುವಾಗಿ ಪ್ರಿಯಾರ್ಟಿ ಕ್ಲಾಸ್ ಸೇವೆಯನ್ನು ಆದ್ಯತಾ ವರ್ಗವು ಸಾಟಿಯಿಲ್ಲದ ಸೇವೆಯ ಮೂಲಕ ಕಾರ್ಪೊರೇಟ್ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ. ಬಲವಾದ ನೆಟ್ವರ್ಕ್ ಮತ್ತು ಸಮರ್ಥ ಸಾರಿಗೆ ವ್ಯವಸ್ಥೆಯೊಂದಿಗೆ, ಸ್ಪರ್ಧಾತ್ಮಕ ಬೆಲೆಯಲ್ಲಿ ಒದಗಿಸುತ್ತಿರುವುದಾಗಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಸುರೇಶ್,ಸಂಸ್ಥೆಯ ಕರ್ನಾಟಕ ಹಣಕಾಸು ವಿಭಾಗದ ಮುಖ್ಯಸ್ಥೆ ಪೂಜಾಶ್ರೀನಾಥ್,ವಿಶಾಲ್,ಬೆಂಗಳೂರು ದಕ್ಷಿಣಾ ಭಾಗದ ವಿತರಣಾ ವಿಭಾಗದ ಮುಖ್ಯಸ್ಥ ಆಶೋಕ್,ಕೋಲಾರ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜನ್ ಗೌಡ,ಮಂಡ್ಯ-ಚಾಮರಾಜನಗರ ಜಿಲ್ಲೆಗಳ ಸಂಯೋಜಕ ಬಾಲಕೃಷ್ಣ,ಲೆಕ್ಕಪತ್ರ ವಿಭಾಗದ ಗೋಪಿನಾಥನ್,ಮಾರು ಕಟ್ಟೆ ವಿಭಾಗದ ಜೋಷಿ,ಜ್ಯೋತಿಪ್ರಕಾಶ್,ಉನ್ನಿಕೃಷ್ಣ, ಆನಂದ್,ಬೊಮ್ಮರಾಜು,ನವೀನ್, ಪವಿತ್ರ,ಕವಿತಾ,ವೀಣಾ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22