ಶ್ರೀನಿವಾಸಪುರ:ದೇವೇಗೌಡ ಸೇರಿದಂತೆ ಮುಖ್ಯಮಂತ್ರಿಗಳಾಗಿದ್ದ ಘಟಾನು ಘಟಿ ರಾಜಕಾರಣಿಗಳನ್ನು ಸೋಲಿಸಿ ಮನೆಗೆ ಕಳಿಸಿರುವಂತ ಕರ್ನಾಟಕದಲ್ಲಿ ಶ್ರೀನಿವಾಸಪುರದ ಘಟಾನುಘಟಿ ರಾಜಕಾರಣಿಗಳನ್ನು ಸೋಲಿಸುವು ದೊಡ್ದಮಾತಲ್ಲ ಇಲ್ಲಿನ ಜನತೆ ಮನಸ್ಸು ಮಾಡಬೇಕು ಅಷ್ಟೆ ಎಂದು ಕಂದಾಯ ಸಂಚಿವ ಆರ್.ಅಶೋಕ್ ಹೇಳಿದರು ಅವರು ಇಂದು ಶ್ರೀನಿವಾಸಪುರದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ ನಾಲ್ಕು ತಲಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡ ಬಗ್ಗೆ ರಮೇಶ್ ಕುಮಾರ್ ಅವರೆ ಒಪ್ಪಿಕೊಂಡಾಗಿದೆ, ಕ್ಷೇತ್ರದಲ್ಲಿ ಯಾವುದೆ ಅಭಿವೃದ್ಧಿ ಅಗಿಲ್ಲ ರಸ್ತೆ ಸೇರಿದಂತೆ ಇತರೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದ ಅವರು ಕಳೆದ ಐವತ್ತು ವರ್ಷಗಳಿಂದ ಅವರನ್ನು ಬಿಟ್ಟು ಇವರು ಇವರನ್ನು ಬಿಟ್ಟು ಅವರು ಎಂಬಂತೆ ಎಂಕ-ಸೀನಾ ಆಟನಡೆಯುತ್ತಿದೆ ಎಂದು ಸ್ಥಳೀಯ ರಾಜಕಾರಣಕ್ಕೆ ನೇರವಾಗಿ ಲಗ್ಗೆ ಇಟ್ಟು ಮಾತನಾಡಿದರು.
ರಾಜ್ಯ ರಾಜಕಾರಣದಲ್ಲಿ ಅಧಿಕಾರದ್ದ ಕಾಂಗ್ರೆಸ್ ಅಭಿವೃದ್ಧಿಗೆ ಒತ್ತುಕೊಡದೆ ಈಗ ಗ್ಯಾರಂಟಿ ಕಾರ್ಡ್ ಕೊಟ್ಟು ಮತಯಾಚಿಸಲು ಹೋರಟಿದೆ ಎಂದು ವ್ಯಂಗ್ಯವಾಡಿದರು.ಜನತೆಗೆ ಟೋಪಿ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ ಅವರು ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದರು ಅವರ ಅವಧಿಯಲ್ಲಿ ಕರ್ನಾಟಕದಲ್ಲಿ ಯಾವುದೆ ಬರಗಾಲ ಇರಲಿಲ್ಲ,ಪ್ರವಾಹ ಇರಲಿಲ್ಲ ಹಾಗೆ ಕರೋನಾ ಸಹ ಇರಲಿಲ್ಲ ಆಗ ಇವರಿಗೆ ಜನರ ಬಗ್ಗೆ ಆಲೋಚನೆ ಬರಲಿಲ್ಲ ಬಂದಿದ್ದ ಹಣವನೆಲ್ಲ ಲೂಠಿ ಮಾಡಿದ ಕಾಂಗ್ರೆಸ್ಸಿಗರು ಈಗ ಜನರ ಬಳಿ ಬರ್ತಾ ಇದ್ದಾರೆ.ಮೋದಿ ಪ್ರಧಾನಿ ಆಗಿರುವವರಿಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಇನ್ನೂ ಜೆಡಿಎಸ್ 20-30 ಸೀಟಿಗಷ್ಟೆ ಸೀಮಿತ ಅದು ಲಾಟಾರಿ ಅಧಿಕಾರ ಎಂದರು.
ಸಂಸದ ಮುನಿಸ್ವಾಮಿ ಮಾತನಾಡಿ ಶ್ರೀನಿವಾಸಪುರ ತಾಲೂಕಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು,ಇಲ್ಲಿ ಕಳೆದ ಐವತ್ತು ವರ್ಷಗಳಿಂದ ಜನರನ್ನು ಪ್ರತಿನಿಧಿಸುತ್ತಿರುವರು ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ ಯಾವುದೆ ಕೈಗಾರಿಕೆಗಳನ್ನು ತಂದಿಲ್ಲ ಇಂಜನಿಯರಿಂಗ್ ಕಾಲೇಜು ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತಂದಿಲ್ಲ ಇಂತವರನ್ನು ಮನೆಗೆ ಕಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತ ಯುವಕರನ್ನು ಅಧಿಕಾರಕ್ಕೆ ತನ್ನಿ ಎಂದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚಲವಾದಿನಾರಯಣಸ್ವಾಮಿ,ಡಾ.ವೇಣುಗೋಪಾಲ್,ಆಶೋಕ್ ರೆಡ್ದಿ,ಚಂದ್ರಾರೆಡ್ಡಿ,ವೆಂಕಟೇಗೌಡ,ನಲ್ಲಪಲ್ಲಿರೆಡ್ದೆಪ್ಪ ಮುಂತಾದವರು ಇದ್ದರು.
ಸುಳಿವೇ ಇಲ್ಲದ ವೈ.ಎ.ಎನ್
ವಿಧಾನಪರಿಷತ್ ಸದಸ್ಯ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ಶ್ರೀನಿವಾಸಪುರದವರೆ ಆಗಿದ್ದರು ಇಂದಿನ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರ ಸುಳಿವೆ ಇರಲಿಲ್ಲ ಇದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಬಿಜೆಪಿ ಸಂಘಟನೆಯಲ್ಲಿ ತೀರಾ ಹಿಂದುಳಿದಿದ್ದ ಶ್ರೀನಿವಾಸಪುರದಲ್ಲಿ ನಾನಿದ್ದೀನಿ ಎಂದು ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಸ್ಥಳೀಯವಾಗಿ ತಮ್ಮದೆ ಆದ ಕಾರ್ಯಕರ್ತರ ಪಡೆಯನ್ನು ಹೊಂದಿರುವ ವೈ.ಎ.ನಾರಯಣಸ್ವಾಮಿ ತೀರಾ ಇತ್ತಿಚಿಗಷ್ಟೆ ನಾನು ಶ್ರೀನಿವಾಸಪುರ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಎಂದು ಮಾಧ್ಯದವರ ಬಳಿ ಹೇಳಿದ್ದರು ಈ ಎಲ್ಲಾ ಎಪಿಸೊಡು ಗಮನಿಸಿದರೆ ಬೇರೆಯದೆ ಆದಂತ ಮೆಸೆಜ್ ಕಾರ್ಯಕರ್ತರಿಗೆ ಹೊಗುತ್ತಿದೀಯಾ ಎಂಬ ಅಮಾನವನ್ನು ರಾಜಕೀಯ ಪಡಸಾಲೆಯಲ್ಲಿ ಕೂತವರು ವ್ಯಕ್ತಪಡಿಸುತ್ತಿದ್ದಾರೆ!
WHERE IS THE SLN
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಏಳೆಂಟು ತಿಂಗಳಿಂದ ಯುವ ಕಾರ್ಯಕರ್ತರ ತಂಡ ಕಟ್ಟಿಕೊಂಡು ಕ್ಷೇತ್ರಾದ್ಯಂತ ಬಿಜೆಪಿ ಸಿಂಬಲ್ ನಲ್ಲಿ ಚುರುಕಾಗಿ ಒಡಾಡುತ್ತಿದ್ದ ಬಿಜೆಪಿ ಯುವ ರಾಜಕಾರಣಿ ಹಿಂದುಳಿದ ವರ್ಗಗಳ ಪ್ರಭಾವಿ ಮುಖಂಡ SLN ಮಂಜು ಇಂದಿನ ವಿಜಯ ಸಂಕಲ್ಪ ಯಾತ್ರೆಯಲ್ಲಿ ಎಲ್ಲೂ ಕಾಣಲಿಲ್ಲ ಅವರ ಹೆಸರಿನಲ್ಲಿ ಒಂದೇ ಒಂದು ಫ್ಲೇಕ್ಸಿ ಸಹ ಕಾಣಿಸಲಿಲ್ಲ.ಕಳೆದ ಏಳೇಂಟು ತಿಂಗಳಿಂದ ಬಿಜೆಪಿ ಯುವ ಕಾರ್ಯಕರ್ತರೊಂದಿಗೆ ಒಡಾಡುತ್ತ ಶ್ರೀನಿವಾಸಪುರ ಪಟ್ಟಣದಲ್ಲಿ ಮನೆ ಮತ್ತು ಕಚೇರಿ ಮಾಡಿದಲ್ಲದೆ ತಾಲೂಕು ಕಚೇರಿ ಬಳಿ ಪ್ರತಿ ದಿನ ಸಾರ್ವಜನಿಕರಿಗೆ ಮಧ್ಯಾನಃದ ಊಟದ ವ್ಯವಸ್ಥೆ ಸಹ ಮಾಡಿದ್ದರು.ಆದರೆ ಇಂದು ಆಗಮಿಸಿದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಎಲ್ಲೂ ಸಹ ಕಾಣಿಸಲಿಲ್ಲ ಇದು SLN ಮಂಜು ಅವರೊಂದಿಗೆ ಗುರುತಿಸಿಕೊಂಡಿದ್ದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ ಮತ್ತು ತಾಲೂಕಿನ ಬಿಜೆಪಿ ಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ.
ಸಾಲುಗಟ್ಟಿ ನಿಂತ ವಾಹನಗಳು
ಪಟ್ಟಣದ ಎಂ.ಜಿ.ರಸ್ತೆಯಲ್ಲೆ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಆಯೋಜಿಸಿದ್ದ ಹಿನ್ನಲೆಯಲ್ಲಿ ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಯಿತು, ಸಭೆ ನಡೆಯುವಷ್ಟು ಎಂ.ಜಿ.ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.