ಶ್ರೀನಿವಾಸಪುರ:ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೋರೆದು ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗಿದ್ದಾರೆ.ತಾಲೂಕಿನ ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ್,ನಾಗರಾಜು,ಚೌಡರೆಡ್ಡಿ,ನಾರಯಣಸ್ವಾಮಿ,ಶ್ರೀನಿವಾಸ್,ಇ.ಕೆ.ವೆಂಕಟರೆಡ್ಡಿ,ವೆಂಕಟೇಶ್ ಸೇರಿದಂತೆ ಹಲವರು ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗಿರುತ್ತಾರೆ.
ಈ ಸಂದರ್ಬದಲ್ಲಿ ಮಾತನಾಡಿದ ಗುಂಜೂರುಶ್ರೀನಿವಾಸರೆಡ್ಡಿ ತಾಲೂಕಿನ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವಂತ ಇಲ್ಲಿನ ಅಧಿಕಾರರೂಡ ರಾಜಕೀಯ ಮುಖಂಡರ ನಡವಳಿಕೆಗೆ ಬೆಸೆತ್ತ ಜನ ತಮ್ಮ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಯಾರೆ ತಮ್ಮ ಬಣಕ್ಕೆ ಸೇರ್ಪಡೆಯಾದರು ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದರು.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುಂಜೂರುಶ್ರೀನಿವಾಸರೆಡ್ಡಿ ಬಣದ ಮುಖಂಡರಾದ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಪಾಳ್ಯಂಲಕ್ಷ್ಮಣರೆಡ್ಡಿ,ರಾಜಶೇಖರೆಡ್ದಿ,ಅಹಿಂದ ಮುಖಂಡ ಶ್ರೀರಾಮ್, ಗೌವನಪಲ್ಲಿಶೇಖರ್ ಮುಂತಾದವರು ಇದ್ದರು.
