ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ನೆಲೆ ನಿಂತಿರುವ ಪುರಾತ ವೈಷ್ಣವ ಪುಣ್ಯಕ್ಷೇತ್ರ ಎಂದು ಖ್ಯಾತಿ ಪಡೆದಿರುವ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ ಬೃಗ ಮಹಿರ್ಷಿ ಪ್ರತಿಷ್ಠಾಪಿತ ಎನ್ನಲಾಗಿದ್ದು ನಂತರ ಚೋಳರ ಅವಧಿ ಹಾಗೆ ವಿಜಯ ನಗರ ಅರಸರ ಕಾಲದಲ್ಲಿ ದೇವಾಲಯ ಪೂರ್ಣವಾಗಿದೆ ಎನ್ನುತ್ತಾರೆ ದೇವಾಲಯದಲ್ಲಿ ಅತ್ಯಾಕರ್ಷಕ ಮುಖ ಮಂಟಪ ಎತ್ತರದ ಗಾಳಿ ಗೋಪುರ ನೋಡಲು ವೈಶಿಷ್ಟಪೂರ್ಣವಾಗಿದೆ. ವಿಶೇಷ ಏನು ಅಂದರೆ ಬಹುಶಃ ಶ್ರೀನಿವಾಸಪುರ ತಾಲೂಕಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ಹಾಗೆ ಭವ್ಯ ದೇವಾಲಯವಾಗಿದೆ
ದೇವಾಲಯದಲ್ಲಿ ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀ ರಾಮನವಮಿಯಂದು ಆರಂಭಗೊಂಡು ಸುಮಾರು ಒಂಬತ್ತು ದಿನಗಳ ಕಾಲ ವೈಭವೋಪೆತವಾಗಿ ವಾರ್ಷಿಕ ಭ್ರಹ್ಮೋತ್ಸವಗಳು ವೈಖಾಸ ಆಗಮನ ಶಾಸ್ತ್ರದಂತೆ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ.
ಚೈತ್ರ ಶುದ್ದ ಚತುರ್ದಶಿಯಂದು ಸಂಜೆ ನಡೆಯುವ ಶ್ರೀ ಸೀತಾರಾಮರ ಕಲ್ಯಾಣ ಅದ್ಭುತವಾಗಿರುತ್ತದೆ ನಾಗಪೆಡೆಯ ವಿಶೇಷವಾದ ಹೂವಿನ ಮಂಟಪದಲ್ಲಿ ಲಕ್ಷ್ಮಣ ಸಮೇತ ಜ್ಞಾನದ ಸಂಕೇತವಾಗಿ ಶ್ರೀಕೋದಂಡರಾಮ ಹಾಗು ಭಕ್ತಿಯ ಸಂಕೇತವಾಗಿ ಸೀತಾ ಮಾತೆಯನ್ನು ಕೂರಿಸಿ ದೇವಾಲಯದ ವಂಶ ಪಾರಂಪರ್ಯ ಅರ್ಚಕರು ಕಲ್ಯಾಣೋತ್ಸವ ನಡೆಸುತ್ತಾರೆ ಇಂದಿನ ಪೀಳಿಗೆಗೆ ಮದುವೆ ಎಂಬ ಪವಿತ್ರ ಬಂಧನವನ್ನು ಬೊಧಿಸುವ ಪರಮ ಪವಿತ್ರವಾದ ಕಲ್ಯಾಣವೈಭೊಗವನ್ನು ವರ್ಣಿಸಲು ಅಸಾದ್ಯ ಕಲ್ಯಾಣೋತ್ಸವಕ್ಕೆ ಆಗಮಿಸಿ ನೋಡಿ ಕಣ್ ತುಂಬಿಕೊಂಡಾಗಲೆ ತಿಳಿಯುತ್ತದೆ.
ಮದ್ಯರಾತ್ರಿ ಕಲ್ಯಾಣೋತ್ಸವದ ನಂತರ ಮುಂಜಾನೆ ನಡೆಯುವಂತ ಗರುಡೋತ್ಸವ ಎಷ್ಟೊಂದು ಅದ್ಭುತವಾಗಿರುತ್ತದೆ ಎಣ್ದರೆ ನೊಡಲೇರಡು ಕಣ್ಣು ಸಾಲದು.
ವೈಭವದ ಗರುಡೋತ್ಸವ
ಆಗಲವಾದ ಎದೆ ತಿದ್ದಿ ತೀಡಿರುವಂತ ಕಣ್ಣುಗಳು ಶ್ವೇತ ವಸ್ರಧಾರಿಯಾಗಿ ಮೊಣಕಾಲಿನ ಮೇಲೆ ಕೂಳಿತ ಬಂಗಿಯಲ್ಲಿ ಭವ್ಯವಾದ ಗರುಡಮೂರ್ತಿಯನ್ನು ನೋಡುವುದೆ ವೈಭೋಗ, ಗರಡಮೂರ್ತಿಯ ಚಾಚಿದ ಎರಡು ಕೈಗಳ ಮೇಲೆ ಕಲ್ಯಾಣ ಶ್ರೀ ರಾಮ-ಸೀತೆಯರನ್ನು ಪ್ರತಿಷ್ಠಾಪಿಸಿ ಹೂವಿನ ಅಲಂಕಾರದ ಪಲ್ಲಕ್ಕಿಯನ್ನು ಗ್ರಾಮದ ಜನತೆ ಕೈಗಳಲ್ಲಿ ಹೊತ್ತು ದೇವಾಲಯದ ಗಾಳಿ ಗೋಪುರದ ಮೂಲಕ ಹೊರಗೆ ತರುವಂತ ಗರುಡ-ಪಲ್ಲಕ್ಕಿ ಉತ್ಸವವನ್ನು ಯಲ್ದೂರಿನ ನೂರಾರು ಯುವಕರು ಬುಜಗಳ ಮೇಲೆ ಭಕ್ತಿ ಪರವಶರಾಗಿ ಹೊತ್ತು ಊರಿನಲ್ಲಿ ಮೆರವಣಿಗೆ ಮಾಡುವಂತ ಗರುಡ-ಉತ್ಸವ ಅಮೋಘವಾಗಿರುತ್ತದೆ.
ಚೈತ್ರ ಹುಣ್ಣೆಯಂದು ಹಗಲು ನಡೆಯುವ ಅದ್ದೂರಿ ಬ್ರಹ್ಮರಥೋತ್ಸಕ್ಕೆ ಜನ ಸಾಗರವೆ ಸೇರುತ್ತದೆ.ಬಿರ ಬಿಸಲ ನಡುವೆ ಸೇರಿದ್ದ ಜನಜಾತ್ರೆಯ ಪರಿಣಾಮ ಯಲ್ದೂರು ಕಿಕ್ಕಿರಿದು ತುಂಬಿ ಹೋಗಿರುತ್ತದೆ.
ಯಲ್ದೂರು ರಥೋತ್ಸವ ಬಂಧು-ಸ್ನೇಹಿತರ ಸಮ್ಮಿಲನ
ಯಲ್ದೂರು ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳವರು ಸ್ಥಳೀಯವಾಗಿ ಹುಟ್ಟಿ ಬೆಳೆದು ಬದುಕು ಕಟ್ಟಿಕೊಳ್ಳಲು ಬೆಂಗಳೂರು ಸೇರಿದಂತೆ ಹೋರಗಡೆ ಹೊಗಿ ಜೀವನ ಮಾಡುತ್ತಿರುವರು, ಮದುವೆಯಾಗಿ ಅತ್ತೆ ಮನೆಗೆ ಹೋದ ಹೆಣ್ಣುಮಕ್ಕಳು ಆದರಲ್ಲೂ ಹೊಸ ಪೀಳಿಗೆಯವರು ಸಹ ಕಲ್ಯಾಣೊತ್ಸವ ಹಾಗು ರಥೋತ್ಸವಕ್ಕೆ ಸಂಭ್ರಮದಿಂದ ಯಲ್ದೂರಿಗೆ ಆಗಮಿಸುತ್ತಾರೆ ಶ್ರೀ ಕೋದಂಡರಾಮನ ಮೇಲಿನ ವಿಶೇಷ ಭಕ್ತಿ ಆಪ್ಯಾಯತೆ ಹಾಗೆ ಅಕ್ಕರೆಯಿಂದ ಹೊಸ ಹುರುಪು ಇಟ್ಟುಕೊಂಡು ಬಂದು ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಂಭ್ರಮಿಸುತ್ತಾರೆ.ಇಲ್ಲಿನ ಕಲ್ಯಾಣೊತ್ಸವ ಹಾಗು ರಥೋತ್ಸವ ಎಲ್ಲರನ್ನೂ ಒಗ್ಗೂಡಿಸುವ ಸೌಹಾರ್ದತೆಯ ಸಮ್ಮಿಲನ ಎನ್ನುತ್ತಾರೆ.ಯಲ್ದೂರಿನ ಕೋದಂಡರಾಮ ಎಲ್ಲರೊಳಗೊಂದಾಗಿ ಇರುತಿಹನು ಅವರವರ ಭಕುತಿಯಲ್ಲಿ ಎಂಬ ಭಾವನೆ ಮೂಡಿಸುವಂತೆ ಇರುತ್ತದೆ.
ಶ್ರೀ ಕೋದಂಡರಾಮ-ಸೀತಾ ಮಾತೆಯ ಕಲ್ಯಾಣೋತ್ಸವ ಪ್ರಾರಂಭ ಆಗುವುದಕ್ಕೂ ಮುಂಚಿತವಾಗಿ ವಧು ಸೀತಾಮಾತೆಯನ್ನು ಕಲ್ಯಾಣ ಮಂಟಪಕ್ಕೆ ಕರೆತರಲು ಗ್ರಾಮದ ಶಾನುಭೋಗ ಕುಟುಂಬದವರು,ಪಟೇಲರ ವಂಶಂಸ್ಥರು ಸೇರಿದಂತೆ ಯಾವುದೇ ಬೇದ ಭಾವ ಇಲ್ಲದಂತೆ ಇಡಿ ಗ್ರಾಮದ ಹಿರಿಯರು, ಪ್ರಮುಖರು,ಮುಖ್ಯಸ್ಥರು,ಜನಪ್ರತಿನಿಧಿಗಳು ಆಗಮಿಸುತ್ತಾರೆ ಅವರ ಸಮ್ಮುಖದಲ್ಲಿ ವಧು ಸೀತಮ್ಮನ ತವರು ಮನೆಯವರು ಊರಿನವರ ಸಮ್ಮುಖದಲ್ಲಿ ಕಲ್ಯಾಣೋತ್ಸವ ಹಾಗು ಗರುಡೋತ್ಸವದ ವಂಶಪಾರಂಪರ್ಯ ಸೇವಾಕರ್ತ ಶ್ರೀನಿವಾಸಪುರದ ಸ್ವಾತಂತ್ರ್ಯ ಹೋರಾಟಗಾರ ವೆಂಕಟಪ್ಪಶೆಟ್ಟಿ ಕುಟುಂಬದವರು ತಮ್ಮ ಮನೆಯ ಬಳಿ ಚಪ್ಪರದ ಪೂಜೆ ನಡೆಸಿ ಅಲ್ಲಿಂದ ಕಳಸ ಹೊತ್ತು ಸೇವಾಕರ್ತ ಕುಟುಂದ ಸುಹಾಸಿನಿಯರು ತಾಳ-ಮೇಳ ಮಂಗಳ ವಾದ್ಯಗಳ ಸಮೇತ ಪಲ್ಲಕ್ಕಿಯ ಜೊತೆಯಲ್ಲಿ ದಿಬ್ಬಣವಾಗಿ ಸೀತಾ-ರಾಮರ ಕಲ್ಯಾಣ ನಡೆಯುವ ಶ್ರೀ ಕೋದಂಡರಾಮ ದೇವಾಲಯಕ್ಕೆ ಹೋಗುವುದು ಇದಿಲ್ಲ ಅದು ಅಪ್ಪಟ ಜಾನಪದ ಶೈಲಿಯಂತೆ ವೈಶಿಷ್ಟ ಪೂರ್ಣವಾಗಿರುತ್ತದೆ.