ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ಹಿಂದುಳಿದ ಸಮಾಜಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು ಅವರು ಇಂದು ತಾಲೂಕಿನ ಯಲ್ದೂರು ಹೋಬಳಿ ಕೊಳತೂರು ಹಾಗು ಲಕ್ಷ್ಮಿಸಾಗರ ಪಂಚಾಯಿತಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ದಿ ಪರ ಪ್ರಚಾರ ನಡೆಸಿ ಮಾತನಾಡಿದರು, ವೆಂಕಟಶಿವಾರೆಡ್ಡಿಯವರು ಶಾಸಕರಾಗಿದ್ದ ಅವಧಿಯಲ್ಲಿ ಎಲ್ಲಾ ಸಮಾಜಗಳಿಗೆ ನ್ಯಾಯೋಚಿತವಾದ ಸಾಮಜಿಕ ನ್ಯಾಯ ಒದಗಿಸಿದ್ದರು ಸರ್ಕಾರದ ಸೌಲಭ್ಯಗಳ ಹಂಚಿಕೆ ಸಂದರ್ಭದಲ್ಲೂ ಅರ್ಹ ಬಡ ಫಲಾನುಭವಿಗಳನ್ನು ಪಕ್ಷಾತೀತವಾಗಿ ಧರ್ಮಾತೀತವಾಗಿ ಗುರುತಿಸಿ ನ್ಯಾಯ ಒದಗಿಸಿದ್ದಾರೆ ಆದರೆ ಈಗ ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಸಾಮಜಿಕವಾಗಿ ಹಿಂದುಳಿದ ಸಮಾಜಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು ವೆಂಕಟಶಿವಾರೆಡ್ಡಿ ಪರಿಶಿಷ್ಟ ಜಾತಿ ಜನಾಂಗ ಮತ್ತು ಹಿಂದುಳಿದ ವರ್ಗಗಳ ಹಿತಚಿಂತಕರಾಗಿದ್ದು ಅವರು ಮತ್ತೆ ಶಾಸಕರಾದರೆ ಹಿಂದುಳಿದ ಸಮಾಜಗಳಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದ್ದು ಶೋಷಿತ ಸಮಾಜಗಳಿಗೆ ನ್ಯಾಯ ಒದಗಿಸಲು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿಯನ್ನು ಬೆಂಬಲಿಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಶೇಷಾಪುರ ಡಾ.ಗೋಪಾಲ್,ಸಹಕಾರಿ ಧುರಿಣ ಗೋವಿಂದಗೌಡ,ಮಂಜಲನಗರ ಮಂಜಲನಗರ ರಘುನಾಥ್,ಶೆಟ್ಟಿಹಳ್ಳಿ ಮಂಜು ಮುಂತಾದವರು ಇದ್ದರು
Breaking News
- ತಾಯಿ-ಮಗಳಿಗೆ ಒಟ್ಟಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ!
- ಶ್ರೀನಿವಾಸಪುರದಲ್ಲಿ ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆ
- ಶ್ರೀನಿವಾಸಪು ಧರೆಗುಳಿದ 11ಕೆ.ವಿ ವಿದ್ಯುತ್ ಕಂಬ ತಪ್ಪಿದ ಅನಾಹುತ
- ಚುನಾವಣೆ ಉಚಿತ ಯೋಜನೆಗಳನ್ನು ಲಂಚ ಎಂದು ಪರಿಗಣಿಸಲು ಸುಪ್ರೀಂಗೆ ಮೋರೆ
- ಮುಂಬೈನಲ್ಲಿ ನಟೋರೀಯಸ್ ಬಿಷ್ಣೋಯ್ ಗ್ಯಾಂಗ್ ಅಟ್ಟಹಾಸ!
- Diabetic ಮಧುಮೇಹಿಗಳೆ “ಸೀತಾಫಲ” ತಿನ್ನುವ ಮೊದಲು ಓದಿ
- BIG BOSS ಶೋನಲ್ಲಿ ನಾಗರಿಕ ಹಕ್ಕು ಉಲ್ಲಂಘನೆ ಮಹಿಳಾ ಆಯೋಗದಿಂದ ಪೊಲೀಸರಿಗೆ ಪತ್ರ
- ಚಿಂತಾಮಣಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆಗೆ ವಿಶೇಷ ಪೂಜೆ
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
Friday, October 18