ಶ್ರೀನಿವಾಸಪುರ:ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯದ ಮೂಲಕ ಜೀವನ ಕ್ರಮವನ್ನು ತಿಳಿಸಿಕೊಟ್ಟಂತ ಆದರ್ಶವಂತ ಶ್ರೀರಾಮಚಂದ್ರ, ಆತನ ನಾಮಬಲದಿಂದ ವಿಶ್ವದಲ್ಲಿ ಶಾಂತಿ ಸೌಹಾರ್ದತೆ ಏರ್ಪಡುತ್ತದೆ ಭಾರತೀಯ ಕೌಟುಂಬಿಕ ವ್ಯವಸ್ಥೆ ಕುಟುಂಬದಲ್ಲಿ ಪತಿ-ಪತ್ನಿ ಸಾಮರಸ್ಯ ಜೀವನಕ್ಕೆ ರಾಮನಾಮನ ಜಪವೆ ಸಾಕ್ಷಿ ಶ್ರೀ ಸೀತಾರಾಮರ ಆದರ್ಶ ದಾಂಪತ್ಯವೆ ಎಲ್ಲರಿಗೂ ಮಾರ್ಗದರ್ಶನ ಶ್ರೀ ಸೀತಾರಾಮರ ವಿವಾಹದಿಂದ ವಿಶ್ವಶಾಂತಿ ದೊರೆಯುತ್ತದೆ ಎಂಬುದು ಭಾರತದ ಹಿರಿಯರ ನಂಬಿಕೆ ಎಂದು ಯಲ್ದೂರು ಶ್ರೀ ಕೋದಂಡರಾಮ ದೇವಾಸ್ಥಾನದ ಪ್ರಧಾನ ಅರ್ಚಕ ಶೇಷಾದ್ರಿ ತಿಳಿಸಿದರು.
ಅವರು ತಾಲೂಕಿನ ಅರಿಕೆರಿ ಗ್ರಾಮದಲ್ಲಿ ನೆಲೆ ನಿಂತಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಶ್ರೀಸೀತಾರಾಮಕಲ್ಯಾಣ ನೇರವೇರಿಸಿ ಮಾತನಾಡಿದರು.
ಶ್ರೀರಾಮನ ಪರಮಾರ್ಥ ತತ್ವಗಳಾದ ಪಿತೃವಾಖ್ಯ ಪರಿಪಾಲನೆ,ಧರ್ಮಾಚರಣೆ,ಏಕಪತ್ನಿ ವ್ರತಸ್ಥ ಎಂಬ ವಿಶೇಷ ಗುಣಗಳಿಂದ ಜಗವೆ ಇಷ್ಟ ಪಡುವ ಸರ್ವರಿಗೂ ಮಾದರಿಯಾಗಿದ್ದಾನೆ ಶ್ರೀರಾಮ, ಈಶ್ವರನಿಗೂ ಶ್ರೀರಾಮನ ತಾರಕಮಂತ್ರ ಇಷ್ಟವಾಗಿದೆ ಎಂದರೆ ಈ ನಾಮದ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ ಎಂದರು.
ಶ್ರೀಸೀತಾರಾಮಕಲ್ಯಾಣೊತ್ಸವದ ಅಂಗವಾಗಿ ಖ್ಯಾತ ಭರತನಾಟ್ಯಕಲಾವಿದೆ ನಯನಾರಾಜಣ್ಣ ಅವರಿಂದ ನೃತ್ಯಪ್ರದರ್ಶನ ಏರ್ಪಡಿಸಿದ್ದರು.
ಶ್ರೀಸೀತಾರಾಮಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಅರಿಕೆರಿ ಶ್ರೀಕೋದಂಡರಾಮ ದೇವಾಸ್ಥಾನದ ಅಧ್ಯಕ್ಷ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಯಣಸ್ವಾಮಿ.ಅನ್ನಪೂರ್ಣೇಶ್ವರಿ ಭಜನಾಮಂಡಳಿ ಮುಖ್ಯಸ್ಥೆ ಗಿತಮ್ಮರಾಜಣ್ಣ,ಉದ್ಯಮಿ ರಾಮಾಂಜನೇಯ,ಶೇಷಾಪುರ ಡಾ.ಗೋಪಾಲ್,ಪಂಚಾಯಿತಿ ಮುಖಂಡ ಪರಮೇಶ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟಿಕುಂಟೆಕೃಷ್ಣಾರೆಡ್ಡಿ,ಹಾಲು ಡೈರಿ ಸೆಕ್ರೆಟರಿ ಶ್ರೀನಿವಾಸಶೆಟ್ಟಿ,ಇನ್ನೂ ಮುಂತಾದವರು ಇದ್ದರು.