ಚಿಂತಾಮಣಿ:ಅವಿಭಜಿತ ಕೋಲಾರ ಜಿಲ್ಲೆಯ ಪ್ರಖ್ಯಾತ ವಾಣಿಜ್ಯ ನಗರಿ ಚಿಂತಾಮಣಿಗೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಂತದಲ್ಲಿಯೇ ಚೌಕಾಸಿ ಇಲ್ಲದೆ ಮಂತ್ರಿ ಭಾಗ್ಯ ಸಿಕ್ಕಿದೆ ಸುಮಾರು ಮೂರು ದಶಕದ ನಂತರ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ.
ಮಾಳಪಲ್ಲಿ ಕುಟುಂಬದ ಕುಡಿಗೆ ಒಲಿದ ಮಂತ್ರಿ ಭಾಗ್ಯ
ಮಾಳಪಲ್ಲಿ ಕುಟುಂಬ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಕುಟುಂಬ ಎಂದೇ ಖ್ಯಾತಿ ಪಡೆದಿದೆ ಅಂತಹ ಮಾಳಪಲ್ಲಿ ಕುಟುಂಬದ ಮೂರನೆ ತಲೆಮಾರಿನ ರಾಜಕಾರಣಿ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್. ವೃತ್ತಿಯಲ್ಲಿ ದಂತ ವೈದ್ಯ ಇವರ ಸಹೋದರ ಡಾ.ಬಾಲಾಜಿ ಸಹ ವೃತ್ತಿಯಲ್ಲಿ ವೈದ್ಯರೆ ಅವರು ಹೈದರಾಬಾದ್ ನಲ್ಲಿ ವೈದ್ಯ ವೃತ್ತಿಯಲ್ಲಿ ನೆಲೆ ನಿಂತಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಡಾ.ಎಂ.ಸಿ.ಸುಧಾಕರ್ ಮಂತ್ರಿ ಪದವಿ ಒಲಿದಿದೆ,ಐದು ಚುನಾವಣೆಗಳನ್ನು ಎದುರಿಸಿರುವ ಡಾ.ಎಂ.ಸಿ.ಸುಧಾಕರ್ 2004 ಹಾಗು 2008 ಶಾಸಕರಾಗಿದ್ದರು ನಂತರದಲ್ಲಿ ಸತತವಾಗಿ ಎರಡು ಚುನಾವಣೆಗಳಲ್ಲಿ ಸೋಲುಕಂಡರು ನಿರಂತರವಾಗಿ ಕ್ಷೇತ್ರದ ಜನರ ಹಾಗು ಕಾರ್ಯಕರ್ತರ ಸಂಪರ್ಕದಲ್ಲಿದ್ದ ಪರಿಣಾಮ 2023 ಚುನಾವಣೆಯ ಭರ್ಜರಿ ಗೆಲವು ಸಾಧಿಸಿದ್ದಾರೆ
ಡಾ.ಎಂ.ಸಿ.ಸುಧಾಕರ್ ಅವರ ತಾತ ಅಂಜನೇಯರೆಡ್ಡಿ 1951 ಮತ್ತು 1962 ರಲ್ಲಿ ಎರಡು ಬಾರಿಗೆ ಶಾಸಕರಾಗಿದ್ದರು, ಅವರ ತಂದೆ ಚೌಡರೆಡ್ಡಿ 1972,1978,1983,1989 ಸತತವಾಗಿ ನಾಲ್ಕು ಬಾರಿ ಹಾಗು 1999 ರಲ್ಲಿ ಪಕ್ಷೇತರರಾಗಿ ಒಟ್ಟು ಐದು ಬಾರಿ ಶಾಸಕರಾಗಿದ್ದರು 1989 ರಲ್ಲಿ ಶಾಸಕರಾಗಿ ಗೆದ್ದಾಗ ಪ್ರಭಾವಿ ಗೃಹ ಸಚಿವರಾಗಿದ್ದರು.
ಸುಧಾಕರ್ ಅಭಿವೃದ್ಧಿಗೆ ಅಸೂಯೆ ಪಟ್ಟಿದ್ದ ಇತರೆ ಕ್ಷೇತ್ರಗಳ ಶಾಸಕರು
ಡಾ.ಎಂ.ಸಿ.ಸುಧಾಕರ್ 2004 ಹಾಗು 2008 ಎರಡು ಅವಧಿಗೆ ಶಾಸಕರಾಗಿದ್ದ ಸಂದರ್ಭದಲ್ಲಿ ಚಿಂತಾಮಣಿ ನಗರ ದೊಡ್ದಮಟ್ಟದಲ್ಲಿ ಅಭಿವೃದ್ಧಿ ಕಂಡಿತ್ತು ನಗರದಲ್ಲಿನ ಬಡಾವಣೆಗಳು ಬೆಂಗಳೂರು ಬಡಾವಣೆಗಳ ರಿತಿಯಲ್ಲಿ ಅಗಲವಾಗಿ ಕಂಗೊಳಿಸುತಿತ್ತು ಎಲ್ಲಡೆ ಸ್ವಚ್ಚತೆ ಮನೆ ಮಾಡಿತ್ತು,ನಗರದ ಪ್ರಮುಖ ವಾಣಿಜ್ಯ ರಸ್ತೆಗಳ ಫುಟ್ ಬಾತ್ ನಲ್ಲಿ ಗ್ರಾನೈಟ್ ಕಲ್ಲುಗಳನ್ನು ಹಾಸುವ ಮೂಲಕ ಯಾವುದೆ ಅಭಿವೃದ್ಧಿ ಹೊಂದಿರುವ ನಗರಕ್ಕೆ ಕಡಿಮೆ ಇಲ್ಲ ಎಂಬುದನ್ನು ದಶಗಳ ಹಿಂದೆಯೆ ಚಿಂತಾಮಣಿಯನ್ನು ಸುಂದರಿಕರಣ ಗೋಳಿಸಿದ್ದರು, ಆಯ್ದ ರಸ್ತೆಗಳಲ್ಲಿ ವಿದ್ಯತ್ ಸರಬರಾಜು ಆಗುವ ತಂತಿಗಳನ್ನು ಭೂಮಾರ್ಗದಲ್ಲಿ ಅಳವಡಿಸುವ ಮೂಲಕ ರಸ್ತೆಗಳಲ್ಲಿ ವಿದ್ಯತ್ ಕಂಬಗಳೆ ಇಲ್ಲದಂತ ಕಾರ್ಯಕ್ಕೆ ಚಾಲನೆ ನೀಡಿದ್ದರು ಇದು ಬಹುಷಃ ಅವಿಭಜಿತ ಕೋಲಾರದಲ್ಲಿ ಪ್ರಥಮ ಎನ್ನಬಹುದು ಎನ್ನುತ್ತಾರೆ.ಚಿಂತಾಮಣಿಯಿಂದ ಬೆಂಗಳೂರಿಗೆ ಹೋಗಲು ಹೆಣಗಾಡಬೇಕಿದ್ದ ಕಾಲದಲ್ಲಿ ಹೋಸಕೋಟೆಯವರಿಗೂ ವಿಶಾಲವಾದ ಕೆ ಶಿಪ್ ರಸ್ತೆ ಮಾಡಿ ಜನರ ಬೆಂಗಳೂರು ಪ್ರಯಾಣವದ ಪ್ರಯಾಸವನ್ನು ಬಗೆಹರಿಸಿದ್ದರು,ಬೆಂಗಳೂರು ಮಾರ್ಗದಲ್ಲಿ ಜನತೆ ಒಡಾಡಲು ನಿರುದ್ಯೋಗಿ ಯುವಕರು ಹೊಸಕೋಟೆ ಪಿಲ್ಲಗುಂಪೆ ಕೈಗಾರಿಗೆ ಪ್ರದೇಶಕ್ಕೆ ತೆರಳಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಮನ ಒಲಿಸಿ ಚಿಂತಾಮಣಿ-ಹೊಸಕೋಟೆ ನಡುವೆ ನಿಲಿ ಬಣ್ಣದ ಬಸ್ಸುಗಳನ್ನು ರಸ್ತೆಗೆ ಇಳಿಸಿ ಸಾರ್ವಜನಿಕ ಸಾರಿಗೆ ಸಂಪರ್ಕದ ಸಮಸ್ಯೆ ಪರಿಹರಿಸಿದ್ದರು ಚಿಂತಾಮಣಿ ತಾಲೂಕಿನ ಅಭಿವೃದ್ಧಿ ಕಂಡ ಇತರೆ ಕ್ಷೇತ್ರಗಳ ಶಾಸಕರು ಒಂದು ರಿತಿಯಲ್ಲಿ ಅಸೂಯೆ ಪಟ್ಟಿದ್ದರಂತೆ ಬಹುಷಃ ಈ ಹಳೆಯ ನೆನಪನ್ನು ಗುರುತಿಕೊಂಡ ಚಿಂತಾಮಣಿ ತಾಲೂಕಿನ ಜನತೆ ಈ ಬಾರಿ ಅಭಿವೃದ್ಧಿ ಬಯಸಿ ಡಾ.ಎಂ.ಸಿ.ಸುಧಾಕರ್ ಅವರನ್ನು ಭಾರಿ ಅಂತರದಲ್ಲಿ ಗೆಲ್ಲಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಚಿಂತಾಮಣಿ ಡಾ.ಎಂ.ಸಿ.ಸುಧಾಕರ್ ಗೆ ಇರುವ ಸವಾಲುಗಳು ಏನು?
ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಪ್ರಾರಂಭವಾಗಿರುವ ಮಸ್ತೇನಹಳ್ಳಿಯ ಕೈಗಾರಿಕ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಮಾಡುವಂತಾಗಬೇಕು ಬೆಂಗಳೂರಿಗೆ ಹತ್ತಿರ ಹಾಗು ಚನೈ ಕಾರಿಡಾರ್ ಗೆ ಸಂಪರ್ಕ ಇರುವ ಫೇರಿಪೇಲ್ ರಸ್ತೆಗೆ ಸಂಪರ್ಕ ಇರುವ ಹಿನ್ನಲೆಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರ ಕೈಗಾರಿಕೊದ್ಯಮಿಗಳನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಬೇಕಾಗುತ್ತದೆ ಮಸ್ತೇನಹಳ್ಳಿಯ ಕೈಗಾರಿಕ ಪ್ರದೇಶವನ್ನು ಇನ್ನಷ್ಟು ವಿಸ್ತೀರ್ಣ ಗೊಳಿಸಬೇಕಿದೆ.
ಚಿಂತಾಮಣಿ ನಗರದಲ್ಲಿ ಸಮಸ್ಯೆಗಳ ಸರಮಾಲೆಯೆ ಇದೆ ವಿಶೇಷವಾಗಿ ನಗರದ ಸ್ವಚ್ಚತೆ ವಿಚಾರವಾಗಿ ನಗರಸಭೆ ಅಧಿಕಾರಿಗಳಿಗೆ ಹಾರ್ಡ್ ಕೋರ್ ಆಗಿ ನಿರ್ದೇಶನ ನೀಡಬೇಕಿದೆ,ಈ ಮೂಲಕ ಪಟ್ಟಣವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡಯ್ಯಬೇಕಿದೆ.
ಉನ್ನತ ಶಿಕ್ಷಣ ಸಚಿವತನ ವಿಶ್ವವಿದ್ಯಾಲಯಕ್ಕೆ ಸಹಕಾರಿ
ಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವರಾಗಿರುವುದು ಅವಿಭಜಿತ ಕೋಲಾರ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ಅನಕೂಲ ಎನ್ನವ ಬಗ್ಗೆ ಎಲ್ಲಡೆ ಕೇಳಿಬರುತ್ತಿದೆ, ಬೆಂಗಳುರು ಉತ್ತರ ವಿಶ್ವವಿದ್ಯಾಲಯ ಚಿಂತಾಮಣಿ ತಾಲೂಕಿಗೆ ಹೊಂದಿಕೊಂಡಂತೆ ಶಿಡ್ಲಘಟ್ಟ ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ 172 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಇದು ಇನ್ನಷ್ಟು ಉನ್ನತ ಮಟ್ಟದಲ್ಲಿ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗಲು ಹಾಗು ಚಿಂತಾಮಣಿ ನಗರದ ಸರ್ಕಾರಿ ಕಾಲೇಜುಗಳಲ್ಲಿ ಬೆಂಗಳೂರು ಉತ್ತರ ವಿವಿ ವಿವಿಧ ಸಂಯೋಜಿತ ಸ್ನಾತಕೋತ್ತರ ಕೋರ್ಸುಗಳನ್ನು ಪ್ರಾರಂಭಿಸಲು ಸಹಕಾರಿಯಾಗಲಿದೆ ಯುವ ಸಚಿವರ ಹೊಸ ಆಲೋಚನೆಗಳಿಗೆ ಉತ್ತಮ ರೂಪ ಸಿಗಬಹುದು ಎಂಬ ಲೆಕ್ಕಚಾರದಲ್ಲಿ ಶಿಕ್ಷಣ ಪ್ರೇಮಿಗಳು ಇದ್ದಾರೆ
1989 ರಲ್ಲಿ ಚೌಡರೆಡ್ಡಿ ಗೆದ್ದು ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಗೃಹ ಸಚಿವರಾಗಿದ್ದರು ನಂತರದಲ್ಲಿ 1994 ರಲ್ಲಿ ಅಂದಿನ ಹಿರಿಯ ರಾಜಕಾರಣಿ ದಿವಂಗತ ಕೆ.ಎಂ.ಕೃಷ್ಣಾರೆಡ್ಡಿ ಗೆದ್ದು ಜನತಾದಳದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು ಅವರ ನಂತರ ಸುಮಾರು ಮೂರು ದಶಕಗಳ ಕಾಲ ಚಿಂತಾಮಣಿಗೆ ಮಂತ್ರಿ ಪದವಿ ಸಿಕ್ಕಿರಲಿಲ್ಲ.