ಶ್ರೀನಿವಾಸಪುರ:ಲಾರಿ ರಿವರ್ಸ್ ಹಾಕುವಾಗ ಲಾರಿ ವ್ಯಕ್ತಿಯೊಬ್ಬನ ಮೇಲೆ ಹರಿದು ಆ ವ್ಯಕ್ತಿ ಮೃತಪಟ್ಟಿರುವ ಘಟನೆ ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯ ಮಾವಿನ ಮಂಡಿಗಳ ಬಳಿ ನಡೆದಿರುತ್ತದೆ ಮೃತ ವ್ಯಕ್ತಿಯನ್ನು ಬಿಹಾರ ಮೂಲದ ಕಾರ್ಮಿಕ ದಿಲೀಪ್ (21) ಎಂದು ಗುರುತಿಸಲಾಗಿದೆ.
ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವಿನಕಾಯಿ ಲೊಡ್ ಸಾಗಿಸಲು ಬಂದಿದ್ದ ಈಚರ್ ಲಾರಿ ರಿವರ್ಸ್ ಹಾಕುವಾಗ ಕಾರ್ಮಿಕನಿಗೆ ಲಾರಿ ಡಿಕ್ಕಿ ಹೊಡೆದಿದೆ ವ್ಯಕ್ತಿ ನೆಲಕ್ಕೆ ಬಿದಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನಪ್ಪಿರುತ್ತಾನೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀನಿವಾಸಪುರದಿಂದ ಮಾವಿನಕಾಯಿ ಲೊಡ್ ಸಾಗಿಸಲು ಬರುವಂತ ಬಾರಿ ಗಾತ್ರದ ಲಾರಿಗಳು ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಲೆ ನಿಂತಿರುತ್ತದೆ ಈ ಲಾರಿಗಳು ಹಿಂದೆ ಮುಂದೆ ಚಲಿಸುವಾಗ ಸೂಚನೆ ಕೊಡುವರು ಯಾರು ಇರುವುದಿಲ್ಲ ಹಿಂದೆ ಚಲಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ಹಿಂದೆ ಬರುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿರುವಂತ ಘಟನೆ ಸಾಕಷ್ಟು ನಡೆದಿವೆ.
ಪೋಲಿಸರ ನಿರ್ಲಕ್ಷ್ಯ ಸ್ಥಳೀಯ ಆಡಳಿತದ ಬೇಜಾವಾಬ್ದಾರಿ!
ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ವಾಹನ ದಟ್ಟಣೆ ಇದ್ದರು ಮಾವಿನಕಾಯಿ ಲೊಡ್ ಸಾಗಿಸಲು ಹೊರಗಡೆಯಿಂದ ಬರುವಂತ ಬಾರಿ ಗಾತ್ರದ ನೂರಾರು ಲಾರಿಗಳು ರಸ್ತೆಯಲ್ಲೆ ಪಾರ್ಕಿಂಗ್ ಮಾಡುತ್ತಿರುವುದು ಪೋಲಿಸರ ನಿರ್ಲಕ್ಷ್ಯಕ್ಕೆ ಒತ್ತುಕೊಡುವಂತಿದೆ ಇಲ್ಲಿನ ಎ.ಪಿ.ಎಂ.ಸಿ ತಾಲೂಕು ಆಡಳಿತ ಹಾಗು ಪುರಸಭೆ ಬೇಜಾವಾಬ್ದಾರಿತನದ ಬಗ್ಗೆ ಜನತೆ ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ. ತಾಲೂಕು ಆಡಳಿತ ಹೊರಗಿನಿಂದ ಬರುವಂತ ಲಾರಿಗಳನ್ನು ಪಟ್ಟಣದ ಹೊರಗೆ ಪಾರ್ಕಿಂಗ್ ಮಾಡಿಕೊಳ್ಳಲು ಅನವು ಮಾಡಿಕೊಡದೆ ಎಲ್ಲವನ್ನು ನೇರವಾಗಿ ಊರಿನೊಳಗೆ ಬರಲು ಬಿಡುತ್ತಿರುವುದರಿಂದ ಮಾವಿನ ಸಿಸನ್ ನಲ್ಲಿ ರಸ್ತೆ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎನ್ನುವುದು ಜನರ ವಾದ.