- ಲಕ್ಷಾಂತರ ಖರ್ಚು ಮಾಡಿ ಕಲ್ಲಿನಮನೆ ಕಟ್ಟಿಸಿದ್ದ
- ಸುಬ್ರಮಣಿ ಸಾವಿನ ಹಿಂದೆ ಆನೈತಿಕ ಸಂಬಂದ
- ಸಂಬಂದಿಯೊಂದಿಗೆ ಕೂಡಿ ಮುಗಿಸಲಾಯಿತ.
ಶ್ರೀನಿವಾಸಪುರ:ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿ ಸಾವು ಸಹಜ ಸಾವಲ್ಲ ಅದು ಕೊಲೆ ಎಂದು ಅನಾಮದೇಯ ಪತ್ರ ಬಂದ ನಂತರ ಕೊಲೆ ರಹಸ್ಯ ಬಲಯಾಗಿದೆ.ಕೊಲೆಯಾದ ದುರ್ದದೈವಿ ವಲ್ಲಭಾಯಿ ರಸ್ತೆ ನಿವಾಸಿ ಕಲ್ಲಿನಕೋಟೆ ಸುಬ್ರಮಣಿ (41) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತ ವ್ಯಕ್ತಿಯ ಸಂಬಂದಿ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಶ್ರೀನಿವಾಸಪುರ ಪಟ್ಟಣದ ವಲ್ಲಭಾಯಿ ರಸ್ತೆಯ ನಿವಾಸಿ ಸುಬ್ರಮಣಿ ಅಲಿಯಾಸ್ ಗಾರೆ ಮೇಸ್ತ್ರೀ ಸುಬ್ಬಣ್ಣ ಜೊತೆಗೆ ಹಣಕಾಸಿನ ಬಡ್ಡಿ ವ್ಯವಹಾರ ನಡೆಸುತ್ತ,ಹೆಬ್ಬಟ ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಸುತ್ತಿದ್ದ ಈಗ್ಗೆ ಎರಡು ತಿಂಗಳ ಹಿಂದೆ ಹೆಬ್ಬಟದ ತೋಟದಲ್ಲಿ ಕೆಲಸ ಮಾಡುವಾಗ ಬಂಡೆಗೆ ತಲೆ ತಗುಲಿ ಮೃತಪಟ್ಟಿದ್ದಾನೆ ಎಂದು ಸುಬ್ರಮಣಿ ಪತ್ನಿ ಶೋಭಾ ಹೇಳಿದ್ದ ಹಿನ್ನಲೆಯಲ್ಲಿ ಊರಿನವರು ಮತ್ತು ನಂಟರಿಷ್ಟರು ಸಹಜ ಸಾವು ಇರಬಹುದೆಂದು ಅಂತ್ಯೆಕ್ರಿಯೆ ನಡೆಸಲು ಸಹಕಾರ ನೀಡಿದ್ದರು.
ಅದರೆ ಊರಿನಲ್ಲಿ ಸುಬ್ರಮಣಿ ಸಾವಿನ ಬಗ್ಗೆ ಹಲವಾರು ರೀತಿಯ ಅನುಮಾನ ಗಾಳಿ ಸುದ್ಧಿಯಾಗಿ ಓಡಾತ್ತಿದ್ದರ ಮದ್ಯೆಯೆ ಬೆಂಗಳೂರಿನ ಹೆಡ್ ಪೊಸ್ಟ್ ಆಫೀಸ್ ನಲ್ಲಿ ನೊಂದಣಿಯಾದ ರಿಜಿಸ್ಟರ್ ಪೋಸ್ಟ್ ನಿಂದ ಶ್ರೀನಿವಾಸಪುರ ಇನ್ಸಪೇಕ್ಟರ್ ಹಾಗು ಠಾಣಾಧಿಕಾರಿಗೆ ಸುಬ್ರಮಣಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅನಾಮಧೇಯ ಪತ್ರ ಬರುತ್ತದೆ ಈ ಬಗ್ಗೆ ಕಾರ್ಯಪವೃತ್ತರಾದ ಪೋಲಿಸರು ಸುಬ್ರಮಣಿ ಸಾವಿನ ಕುರಿತಾಗಿ ಮಾಹಿತಿ ಕಲೆ ಹಾಕಲು ಪ್ರಾರಂಭಿಸುತ್ತಾರೆ ಈ ಬೆಳವಣಿಗೆ ನಡುವೆ ಮೃತ ಸುಬ್ರಮಣಿಯ ಚಿಕ್ಕಪ್ಪನ ಸೊಸೆ ಅಂದರೆ ಮೃತನಿಗೆ ವರಸೆಯಲ್ಲಿ ನಾದಿನಿಯಾದ ವೆಂಕಟಲಕ್ಷ್ಮಿ ಎಂಬುವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಮ್ಮ ಭಾವನ ಸಾವಿನ ಬಗ್ಗೆ ಅನುಮಾನ ಇದೆ ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡುತ್ತಾರೆ ದೂರು ಸ್ವೀಕರಿಸಿದ ಶ್ರೀನಿವಾಸಪುರ ಪೊಲೀಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ತಮ್ಮ ತಂಡದ ಮೊದಲ ಹಂತವಾಗಿ ಮೃತ ದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿ ತಾಲ್ಲೂಕು ದಂಡಾಧಿಕಾರಿ ಶಿರಿನ್ ತಾಜ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮರಣೋತ್ತರ ಪರಿಕ್ಷೆಗೆ ಬಾರದ ಮೃತ ಪತ್ನಿ!
ಮರಣೋತ್ತರ ಪರಿಕ್ಷೆ ನಡೆಸುವಾಗ ಮೃತ ಪತ್ನಿ ಸ್ಥಳಕ್ಕೆ ಆಗಮಿಸದೆ ಇದದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಗಂಡನದ ಸಹಜ ಸಾವು ಎಂದು ಊರಿನವರನ್ನು ನಂಟರಿಷ್ಟರನ್ನು ನಂಬಿಸಿದ್ದ ಆಕೆ ಪೋಲಿಸ್ ಅಧಿಕಾರಿಗಳು ತಾಲೂಕು ದಂಡಾಧಿಕಾರಿ ಖುದ್ದು ಹಾಜರಿದ್ದು ಎರಡು ತಿಂಗಳ ಹಿಂದೆ ಅಂತ್ಯಕ್ರಿಯೆ ಮಾಡಿ ಹೂತಿಟ್ಟಿದ್ದ ಶವ ಹೊರಗೆ ತಗೆದು ಮರಣೋತ್ತರ ಪರಿಕ್ಷೆ ಮಾಡಿಸುವಾಗ ಪತ್ನಿ ಸ್ಥಳಕ್ಕೆ ಬಾರದೆ ಪರಾರಿಯಾಗಿದ್ದು ಸಾರ್ವಜನಿಕವಾಗಿ ನಾನಾ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಲವ್ವಿ ಡವ್ವಿಗೆ ಗಂಡನ ಪ್ರಾಣ ತಗೆದಳ!
ಮೃತ ಸುಬ್ರಮಣಿ ಹಾಗು ಆತನ ಪತ್ನಿ ಶೊಭಾ ನಡುವೆ ಕುಟುಂಬ ಕಲಹಗಳು ಇದ್ದು ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹಳೆಯದನ್ನು ಮರೆತು ಸುಬ್ರಮಣಿ ಹೆಂಡತಿಯೊಂದಿಗೆ ಹೊಂದಾವಣಿಕೆ ಮಾಡಿಕೊಂಡು ಹೋಗುತ್ತಿದ್ದ ಎನ್ನಲಾಗಿದ್ದು ಅದರೆ ಆತನ ಪತ್ನಿ ಶೊಭಾ ಗಂಡನಿಗೆ ಡೊಂಟ್ ಕೇರ್ ಎನ್ನುವಂತೆ ಸಂಬಂದಿಯೊಬ್ಬನ ಜೊತೆಗೆ ಅನೈತಿಕ ಸಂಪರ್ಕ ಹೊಂದಿದ್ದ ಆಕೆ ಗಂಡನನ್ನು ಮುಗಿಸಿರಬಹುದು ಎಂಬ ಶಂಖೆ ಪೋಲಿಸ್ ಇಲಾಖೆ ಮೂಲಗಳಿಂದ ಕೇಳಿಬರುತ್ತಿದೆ.