- ಪ್ರಪಂಚ ಪ್ರಸಿದ್ಧ ಶ್ರೀನಿವಾಸಪುರ ಮಾವಿಗೆ
- ಕಳೆದ ನಾಲ್ಕೈದು ವರ್ಷಗಳಿಂದ ಸಂಕಷ್ಟ
- ಹೈರಾಣವಾಗಿರುವ ಮಾವು ಬೆಳೆಗಾರರು
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಂಪು ಸೂಸಬೇಕಾದ ಮಾವಿನಕಾಯಿಗೆ ತಟ್ಟಿರುವ ಶಾಪವಾದರು ಏನು ಎಂದು ಮಾವು ಬೆಳೆಗಾರರು ಅಸಯಕರಾಗಿ ಕೇಳುತ್ತಿದ್ದಾರೆ. ತತ್ವಙ್ಞಾನಿ ವಿರಭ್ರಮ್ಮೇಂದ್ರಯ್ಯನವರ ನಾನ್ನೂಡಿಯಂತೆ “ಎಂಡಿನ ಕರವು ಪಂಡಿನ ಕರವು” (ಒಣಗಿದರು ಬರ-ಬೆಳೆದರು ಬರ) ಎಂಬಂತಾಗಿದೆ ಮಾವಿನ ಬೆಳೆಗಾರರ ಪರಿಸ್ಥಿತಿ ಕಳೆದ 5-6 ವರ್ಷದಿಂದ.
ಪ್ರಪಂಚ ಪ್ರಸಿದ್ದ ಮಾವಿನ ನಗರಿ ಶ್ರೀನಿವಾಸಪುರ ತಾಲೂಕಿನಲ್ಲಿ ಕಣ್ಣು ಹಾಯಿಸಿದಷ್ಟು ಮಾವಿನ ಮರಗಳು ಕಾಣ ಸಿಗುತ್ತದೆ ಅದರಲ್ಲೂ ಮಾವು ಹೂ ಬಿಟ್ಟಾಗ ಮಾವಿನ ಮರಗಳ ಮದ್ಯೆ ಎಳೆ ಬಿಸಿಲ ನಡುವೆ ಮಾವಿನ ಹೂವಿನ ಪ್ರಕೃತಿಯ ಸೌಂದರ್ಯ ನೋಡಲು ಚಂದ. ಇಂತ ಸೌಂದರ್ಯದ ನಡುವೆ ಬರುವಂತ ಮಾವು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿನ ಮಾವು ತಳಿಗಳಾದ ಬಾದಾಮಿ,ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಇನ್ನು ಹಲವಾರು ತಳಿಯ ಮಾವಿನ ಹಣ್ಣುಗಳಿಗೆ ವಿದೇಶಗಳಿಗೆ ರಫ್ತಾಗುತ್ತದೆ ಇದರಿಂದಾಗಿಯೇ ಮಾವಿನ ಬೆಳೆ ಇಲ್ಲಿನ ಜನರ ಜೀವನಾಡಿ ಬೆಳೆಯಾಗಿ ಮಾವು ಬೆಳೆಗಾರನಿಗೆ ಆರ್ಥಿಕ ಹಾಗು ಸಾಮಾಜಿಕ ಭದ್ರತೆ ಒದಗಿಸಿದೆ. ಮಾವು ಬಹುತೇಕ ರೈತಾಪಿ ಜನರ ಬದುಕು ಹಸನಾಗಿಸಿತ್ತು.
ಇಂತಹ ಮಾವಿಗೆ ಈ ವರ್ಷ ಮಹಾಭಾತರದ ಕರ್ಣನ ಪರಿಸ್ಥಿತಿ ಒದಗಿ ಬಂದಿದೆ ಕೊಯ್ಲು ಹಂತದ ಮಾವಿಗೆ ಪ್ರಕೃತಿಯೇ ವಿಲನ್ ಆಗಿ ಕಾಡಿದೆ ಅದಕ್ಕೆ ಕಾರಣ ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಭೂಮಿ ಫಲವತ್ತತೆ ಕಾಣಿದ್ದು ಮಾವಿನ ಮರಗಳು ಉತ್ತಮವಾಗಿ ಇಳುವರಿ ಕಂಡಿದಲ್ಲದೆ ಮಾವುಬೆಳೆ ಎಂದಿಗಿಂತಲೂ ಒಂದು ತಿಂಗಳು ಮುಂಚಿತವಾಗಿ ಕೊಯ್ಲಿಗೆ ಬಂದ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಬಂದಿದೆ ಇಲ್ಲಿಗಿಂತಲೂ ಮುಂಚೆ ಬರಕೇಕಿದ್ದ ರಾಮನಗರ ಸೇರಿದಂತೆ ಆಂಧ್ರದ ಕೆಲವು ಭಾಗಗಳ ಮಾರುಕಟ್ಟೆ ಜೋತೆಗೆ ಧರ ಸಮರಕ್ಕೆ ಬಿಳುವಂತಾಯಿತು.
ಮೇ ತಿಂಗಳ ಮೊದಲವಾರದಲ್ಲಿ ಬಿದ್ದ ಬಿರುಗಾಳಿ ಸಮೇತದ ಮಳೆಗೆ ಮಾವು ಬೆಳೆ ನೆಲಕಚ್ಚಿತು ಅದಕ್ಕೂ ಮುಂಚಿತವಾಗಿ ಬಿದ್ದ ಆಲಿಕಲ್ಲು ಮಳೆಯಿಂದ ಶೇ%60 ರಷ್ಟು ಮಾವು ಬೆಳೆ ಹೂ ಹಾಗು ಪಿಂದೆ ಹಂತದಲ್ಲಿಯೇ ಹಾಳಾಗಿತ್ತು,ನಂತರದಲ್ಲಿ ಮಾರ್ಚ್ ತಿಂಗಳಾದರೂ ಮಂಜು ಸುರಿಯುತ್ತಿದ್ದ ಪರಿಣಾಮ ಇದ್ದಬದ್ದ ಮಾವು ಬೆಳೆ ಕಪ್ಪುಶಿಲೀಂಧ್ರ ಅಥಾವ ಕಪ್ಪುಬಣ್ಣದ ಮಚ್ಚೆ ರೋಗಕ್ಕೆ ತುತ್ತಾಗಿ ಮಾವಿನಕಾಯಿ ಮೇಲೆ ಪ್ರಾಕೃತಿಕ ದಾಳಿಯಾಯಿತು.
ಎಲ್ಲರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ಮಾವುಬೆಳೆಗಾರ
ವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಮಾವುಬೆಳೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.ಇದರ ಜೋತೆಗೆ ರೈತಾಪಿ ಕುಟುಂಬದ ಜೀವನಾಡಿ ಬೆಳೆಯಾಗಿ ಪರಿಗಣಿಸಲಾಗಿದೆ ಈ ಎಲ್ಲಾ ಮಾಹಿತಿ ಸರ್ಕಾರದಲ್ಲಿದೆ ಇದಕ್ಕಾಗಿಯೇ ಶ್ರೀನಿವಾಸಪುರದಲ್ಲಿ ಮಾವು ಮಂಡಳಿ ರಚಿಸಲಾಗಿದೆ ಆದರೂ ಇಲ್ಲಿನ ಮಾವಿನ ಬೆಳೆಯ ಪರಿಸ್ಥಿತಿ ಕುರಿತಾಗಿ ಯಾರು ಆಸಕ್ತಿ ವಹಿಸಿಲ್ಲ,ಚುನಾಯಿತ ಶಾಸನ ಸಭೆಗಳಲ್ಲೂ,ಜನಪ್ರತಿನಿಧಿಗಳು ಚಕಾರ ಎತ್ತಲಿಲ್ಲ, ಹಾಸನ-ತುಮಕೂರು ಸೇರಿದಂತ ಆ ಭಾಗದ ತೆಂಗು ಸೇರಿದಂತೆ ಇತರೆ ಬೆಳೆ ಸಮಸ್ಯೆಗಳ ಬಗ್ಗೆ ಮಾತನಾಡಿ ಸರ್ಕಾರದ ಗಮನ ಸೆಳೆಯುತ್ತಾರೆ ವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಾವುಬೆಳೆಗಾರರ ಸಮಸ್ಯೆ ಕುರಿತಾಗಿ ಚಕಾರ ಎತ್ತದೆ ಇರುವುದು ವಿಪರ್ಯಾಸವೆ ಸರಿ.ಕಳೆದ ವರ್ಷದ ಮಾವು ನಷ್ಟದ ಪರಿಹಾರ ಹಣ ಪಡೆಯಲು ಮಾವುಬೆಳೆಗಾರರಿಗೆ ಸಾದ್ಯವಾಗಿಲ್ಲ.
ರಾಜ್ಯದಲ್ಲಿ ತೋಟಗಾರಿಗೆ ಕಾಲೇಜುಗಳು ಇವೆ ಕೇಂದ್ರ ರಾಜ್ಯ ಸರ್ಕಾರಗಳ ತೋಟಗಾರಿಗೆ ಅಧ್ಯಯನ ಕೇಂದ್ರಗಳು ಇವೆ ನೂರಾರು ಸಂಖ್ಯೆಯಲ್ಲಿ ತೋಟಗಾರಿಕೆ ವಿಙ್ಞಾನಿಗಳು ತಂತ್ರಙ್ಞರು ಇದ್ದಾರೆ ಆದರೆ ಯಾರು ಆಸಕ್ತಿ ವಹಿಸಿ ಕಪ್ಪುಶಿಲೀಂಧ್ರ ಅಥಾವ ಕಪ್ಪುಬಣ್ಣದ ಮಚ್ಚೆ ರೋಗದ ನಿವಾರಣೆ ಅಥಾವ ಹವಾಮಾನ ಪರಿಸ್ಥಿತಿ ಕುರಿತಾಗಿ ಸಲಹೆ ಸೂಚನೆ ನೀಡದೆ ಮಾವು ಬೆಳೆಗಾರರನ್ನು ನಿರ್ಲಕ್ಷ್ಯ ವಹಿಸಿರುವುದು ಇರುವುದು ಮಹಾದುರಂತವೆ ಸರಿ.
ಧರ ನಿಯಂತ್ರಣದಲ್ಲಿ ಆಂಧ್ರದ ಪ್ರಭಾವಿಗಳು
ನಮ್ಮ ಭಾಗದ ಮಾವು ಹೆಚ್ಚಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲ್ಪ್ ತಯಾರಕ ಫ್ಯಾಕ್ಟರಿಗಳಿಗೆ ರವಾನೆಯಾಗುತ್ತದೆ, ಶ್ರೀನಿವಾಸಪುರದ ಮಾವಿಗೆ ಅಲ್ಲಿನ ಪಟ್ಟಭದ್ರರ ಸಿಂಡಿಕೆಟ್ ಅಡ್ಡಗಾಲು ಹಾಕುತ್ತಿದೆ ಆಂಧ್ರದಲ್ಲಿ ಫ್ಯಾಕ್ಟರಿ ಮಾಲಿಕರಾಗಿರುವಂತ ಅಲ್ಲಿನ ಆಡಳಿತ ರೂಡ ಪ್ರಭಾವಿ ರಾಜಕಾರಣಿಗಳು ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡು ಪಲ್ಪ್ ಫ್ಯಾಕ್ಟರಿಗಳಿಗೆ ಮಾವು ಸರಬರಾಜು ಮಾಡುವಂತ ಮಾವು ವ್ಯಾಪರಸ್ಥರ ಮೇಲೆ ಒತ್ತಡ ಹೇರಿ ಧರ ನಿಯಂತ್ರಣ ಸಾಧಿಸಿದ್ದು ಪ್ರಭಾವಿಗಳು ನಿರ್ಧರಿಸಿದ ಧರಕ್ಕೆ ಮಾವು ಮಾರುಕಟ್ಟೆ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿ ಇದರ ಪರಿಣಾಮ ಬಹುತೇಕ ದಕ್ಷ್ಣಿಣ ಭಾರತದ ಮಾವು ಮಾರುಕಟ್ಟೆ ಮೇಲೆ ಬೀರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ,ಇದರ ಎಫೆಕ್ಟ್ ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಮಾವು ಧರ ಕುಸಿಯಲು ಕಾರಣ ಎನ್ನುತ್ತಾರೆ.
ಧರ ಸಮರದಿಂದ ನಿಧಾನವಾಗಿ ಮಾವು ಕೊಯ್ಲು ಮಾಡೋಣ ಎಂದು ಕಾಡಿದ್ದ ಮಾವುಬೆಳೆಗಾರರ ತೋಟದಲ್ಲಿ ತೋತಾಪುರಿ ಮಾವಿನಕಾಯಿ ಕಪ್ಪುಶೀಲಿಂದ್ರ ರೋಗಕ್ಕೆ ತುತ್ತಾಗಿ ಮಾವಿನ ಬೆಳೆಯನ್ನು ರಸ್ತೆಯಲ್ಲೆ ಬಿಸಾಡಿದ್ದಾರೆ ಅಂದಾಜು ಒಂದು ಟನ್ ಮಾವಿನ ಕಾಯಿ ತಂದರೆ ಸುಮಾರು ನಾಲ್ಕೈದು ನೂರು ಕೆಜಿಯಷ್ಟು ಕಾಯಿಯನ್ನು ವೇಸ್ಟ್ ಹೆಸರಿನಲ್ಲಿ ತಗೆದು ಹಾಕುತ್ತಾರೆ ಇನ್ನೂ ಬೈಗನ್ ಪಲ್ಲಿ(ಭೇನೂಷ) ತಳಿ ಮಾವಿನ ಕಾಯಿಯನ್ನು ಕೆಜಿಗೆ 4-5 ರೂಪಾಯಿಗೂ ಕೊಳ್ಳುವರಿಲ್ಲದೆ ಹೋಯಿತು.