ಶ್ರೀನಿವಾಸಪುರ:ವಿದ್ಯುತ್ ಬಿಲ್ ವಸೂಲಾತಿಗೆ ಹೋಗಿದ್ದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದಾಗಿ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀನಿವಾಸಪುರ ಪಟ್ಟಣದ ಗಫಾರ್ ಖಾನ್ ಮೊಹಲ್ಲಾದ ಮ್ಯಾಂಗೊ ವ್ಯಾಪಾರಿ ಎಲ್.ಆರ್.ಸರ್ದಾರ್ ಎನ್ನುವರ ಮನೆಯ ಕರೆಂಟ್ ಬಿಲ್ ವಿಚಾರದಲ್ಲಿ ಬೆಸ್ಕಾಂ ಸಿಬ್ಬಂದಿ ಹಾಗು ಸರ್ದಾರ್ ನಡುವೆ ಮಾತಿನ ಚಕಮಕಿ ಆಗಿದೆ ಈ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿಯನ್ನು ಕಾಂಪೋಂಡ್ ನಿಂದ ಹೋರಗೆ ಹೋಗುವಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾಗಿ ಇದಕ್ಕೆ ಬೆಸ್ಕಾಂ ಸಿಬ್ಬಂದಿ ಪ್ರತಿಕ್ರಿಸಿದಾಗ ಸರ್ದಾರ್ ಮಗ ಏಕಾಏಕಿ ಬಂದು ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುತ್ತಾನೆ ಎಂದು ದೂರಲಾಗಿದೆ.
ಘಟನೆಯಲ್ಲಿ ವೇಣುಗೋಪಾಲ್ ಎಂಬ ಬೆಸ್ಕಾಂ ಸಿಬ್ಬಂದಿಗೆ ಕಿವಿಗೆ ತೀವ್ರವಾದ ಗಾಯವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತಾಗಿ ಶ್ರೀನಿವಾಸಪುರ ಠಾಣೆಯಲ್ಲಿ ದೂರು ಪ್ರತಿ ದೂರು ನೀಡಲಾಗಿದೆ ಪೊಲೀಸರು ಗಲಾಟೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ವರದಿ:ನಂಬಿಹಳ್ಳಿ ಸುರೇಶ