ಶ್ರೀನಿವಾಸಪುರ:ಯುವಕನೊಬ್ಬ ಅನುಮಾನಸ್ಪದ ರೀತಿಯಲ್ಲಿ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಚಲ್ದಿಗಾನಹಳ್ಳಿಯಲ್ಲಿ ನಡೆದಿರುತ್ತದೆ.
ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಯುವಕನನ್ನು ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ (17) ಎಂದು ಗುರುತಿಸಲಾಗಿದ್ದು
ಇತ ಚಿಂತಾಮಣಿ ಕಾಲೇಜಿನಲ್ಲಿ ಡಿಪ್ಲೋಮೋ ಓದುತ್ತಿದ್ದ ಜೊತೆಗೆ ತಮಟೆ ಕಲಾವಿದನಾಗಿ ಖ್ಯಾತನಾಗಿದ್ದ ಎನ್ನುತ್ತಾರೆ ಗ್ರಾಮಸ್ಥರು,
ಚಲ್ದಿಗಾನಹಳ್ಳಿಯ ಗ್ರಾಮಕ್ಕೆ ಹೊಂದಿಕೊಂಡಂತ ಟೈಲರ್ ಗೋಪಾಲಕೃಷ್ಣ ಅವರ ಕೃಷಿಹೊಂಡದಲ್ಲಿ ರಾಕೇಶ್ ಶವವಾಗಿ ಪತ್ತೆಯಾಗಿದ್ದು ಸೋಮವಾರ ಪಟ್ಟಣದಲ್ಲಿ ಚಾಟ್ಸ್ ಅಂಗಡಿ ಬಳಿ ಯುವಕರ ಗುಂಪು ರಾಕೇಶ್ ನನ್ನು ಬಲವಂತವಾಗಿ ಕರೆದೊಯಿದು ಹಲ್ಲೆ ನಡೆಸಿ ಅವನ ಬಳಿ ಇದ್ದ ಮೊಬೈಲ್ ಸಹ ಕಿತ್ತುಕೊಂಡು ಪೋಷಕರನ್ನು ಕರೆ ತರುವಂತೆ ಬೆದರಿಸಿ ಕಳಸಿದ್ದಾರೆ ಎನ್ನಲಾಗಿದ್ದು ನಂತರದ ಬೆಳವಣಿಗೆಯಲ್ಲಿ ಮಾರನೆ ದಿನ ಬೆಳಿಗ್ಗೆ ಪೋಲಿಸರಿಗೆ ಅನಾಮಧಯೆಯ ದೂರವಾಣಿ ಕರೆ ಬಂದ ಹಿನ್ನಲೆಯಲ್ಲಿ ಪೋಲಿಸರು ಗುಮಾನಿಯೊಂದಿಗೆ ಚಲ್ದಿಗಾನಹಳ್ಳಿ ಗ್ರಾಮಕ್ಕೆ ಆಗಮಿಸಿ ಕೃಷಿಹೊಂಡದಲ್ಲಿ ಹುಡುಕಾಡಿಸಿದಾಗ ರಾಕೇಶ್ ಶವ ಪತ್ತೆಯಾಗಿದೆ.
ಈ ಮೆರೆಗೆ ಶ್ರೀನಿವಾಸಪುರ ಪೋಲಿಸರು ಅನುಮಾನಸ್ಪದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ಮೃತ ರಾಕೇಶ್ ಪೋಷಕರು ಸಾವಿನ ಬಗ್ಗೆ ಅನುಮಾನ ಇದ್ದು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿರುತ್ತಾರೆ.ಅದರಂತೆ ಪೋಲಿಸರು ಪಟ್ಟಣದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ನ್ಯಾಯಲಯಕ್ಕೆ ಒಪ್ಪಿಸಿರುತ್ತಾರೆ.
ವರದಿ:ನಂಬಿಹಳ್ಳಿ ಸುರೇಶ್