ಶ್ರೀನಿವಾಸಪುರ:ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದ ವಲ್ಲಭಾಯಿ ರಸ್ತೆ ನಿವಾಸಿ ಕಲ್ಲಿನಕೋಟೆ ಸುಬ್ರಮಣಿ (41) ಸಾವು ಕೊಲೆ ಎಂದು ದಾಖಲಾಗಿದೆ.
ಈ ಬಗ್ಗೆ ಶ್ರೀನಿವಾಸಪುರ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಶ್ರೀನಿವಾಸಪುರ ಪಟ್ಟಣದ ವಲ್ಲಭಾಯಿ ರಸ್ತೆಯ ನಿವಾಸಿ ಸುಬ್ರಮಣಿ ಅಲಿಯಾಸ್ ಗಾರೆ ಮೇಸ್ತ್ರೀ ಸುಬ್ಬಣ್ಣ ಜೊತೆಗೆ ಹಣಕಾಸಿನ ಬಡ್ಡಿ ವ್ಯವಹಾರ ನಡೆಸುತ್ತ,ಹೆಬ್ಬಟ ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಸುತ್ತಿದ್ದ ಈಗ್ಗೆ ಕೆಲ ತಿಂಗಳ ಹಿಂದೆ ಹೆಬ್ಬಟದ ತೋಟದಲ್ಲಿ ಕೆಲಸ ಮಾಡುವಾಗ ಬಂಡೆಗೆ ತಲೆ ತಗುಲಿ ಮೃತಪಟ್ಟಿದ್ದಾನೆ ಎಂದು ಸುಬ್ರಮಣಿ ಪತ್ನಿ ಶೋಭಾ ಹೇಳಿದ್ದು ಅದನ್ನೆ ನಂಬಿದ್ದ ಊರಿನವರು ಮತ್ತು ನಂಟರಿಷ್ಟರು ಸಹಜ ಸಾವು ಇರಬಹುದೆಂದು ಅಂತ್ಯೆಕ್ರಿಯೆ ನಡೆಸಲಾಗಿತ್ತು ನಂತರದಲ್ಲಿ ಸುಬ್ರಮಣಿ ಸಾವಿನ ಬಗ್ಗೆ ಅನುಮಾನದ ಸುದ್ಧಿ ಹರಿದಾಡುತಿತ್ತು ಇದಕ್ಕೆ ಪೂರಕವಾಗಿ ಪೋಲಿಸರಿಗೆ ಅನಾಮಧೇಯ ಪತ್ರವೊಂದು ಶ್ರೀನಿವಾಸಪುರ ಇನ್ಸಪೇಕ್ಟರ್ ಹಾಗು ಠಾಣಾಧಿಕಾರಿಗೆ ಸುಬ್ರಮಣಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಬರುತ್ತದೆ ಈ ಬಗ್ಗೆ ಕಾರ್ಯಪವೃತ್ತರಾದ ಪೋಲಿಸರು ಸುಬ್ರಮಣಿ ಸಾವಿನ ಕುರಿತಾಗಿ ಮಾಹಿತಿ ಕಲೆ ಹಾಕಲು ಪ್ರಾರಂಭಿಸುತ್ತಾರೆ ಈ ಬೆಳವಣಿಗೆ ನಡುವೆ ಮೃತ ಸುಬ್ರಮಣಿಯ ಚಿಕ್ಕಪ್ಪನ ಸೊಸೆ ಅಂದರೆ ಮೃತನಿಗೆ ವರಸೆಯಲ್ಲಿ ನಾದಿನಿಯಾದ ವೆಂಕಟಲಕ್ಷ್ಮಿ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಭಾವನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡುತ್ತಾರೆ ಅದರಂತೆ ಪೋಲಿಸರು ತಾಲ್ಲೂಕು ದಂಡಾಧಿಕಾರಿ ಶಿರಿನ್ ತಾಜ್ ಸಮ್ಮುಖದಲ್ಲಿ ಮೃತ ದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದು ಮರಣೋತ್ತರ ಪರಿಕ್ಷೆ ನಡೆಸುವಾಗ ಮೃತನ ಪತ್ನಿ ಶೋಭಾ ಸ್ಥಳಕ್ಕೆ ಬಾರದೆ ಇರುವುದು ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ ಊರಿನವರನ್ನು ನಂಟರಿಷ್ಟರನ್ನು ನಂಬಿಸಿದ್ದ ಆಕೆ ಗಂಡನ ಸಾವಿನ ತನಿಖೆ ವಿಚಾರದಲ್ಲಿ ದೂರ ಇದ್ದ ಆಕೆಯ ನಡವಳಿಕೆ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಲವ್ವಿ ಡವ್ವಿಗೆ ಗಂಡನ ಪ್ರಾಣ ತಗೆದಳ ನಾಟಕ ಬಯಲು
ಪೋಲಿಸರ ಕಾರ್ಯಚರಣೆಯಲ್ಲಿ ಎಲ್ಲವೂ ಹೊರ ಬಂದಿದ್ದು ಲವ್ವಿ ಡವ್ವಿಗೆ ಗಂಡನ ಪ್ರಾಣ ತಗೆದಳ ನಾಟಕ ಬಯಲಾಗಿದೆ, ಮೃತ ಸುಬ್ರಮಣಿ ಹಾಗು ಆತನ ಪತ್ನಿ ಶೊಭಾ ನಡುವೆ ಕುಟುಂಬ ಕಲಹಗಳು ಇದ್ದು ಮಕ್ಕಳು ದೊಡ್ಡವರಾಗುತ್ತಿದ್ದು ಅವರ ಭವಿಷ್ಯತ್ತು ಉಳಿವಿಗಾಗಿ ಗಂಡ ಸುಬ್ರಮಣಿ ಹೆಂಡತಿಯೊಂದಿಗೆ ಹೊಂದಾವಣಿಕೆ ಮಾಡಿಕೊಂಡು ಹೋಗುತ್ತಿದ್ದ ಎನ್ನುತ್ತಾರೆ ಅವರ ಕುಟುಂಬದ ಆಪ್ತರು ಇದನ್ನೆ ಬಂಡವಾಳ ಮಾಡಿಕೊಂಡ ಪತ್ನಿ ಶೊಭಾ ಗಂಡನಿಗೆ ಡೊಂಟ್ ಕೇರ್ ಎನ್ನುವಂತೆ ಸಂಬಂದಿ ನಾಗೇಶನ ಜೊತೆಗೆ ಅನೈತಿಕ ಸಂಪರ್ಕ ಹೊಂದಿರುವುದನ್ನು ಮುಂದುವರಿಸಿ ಕೊನೆಗೆ ಗಂಡನನ್ನು ಮುಗಿಸಿರುವುದು ಬೆಳಕಿಗೆ ಬಂದಿದೆ ಪೋಲಿಸ್ ತನಿಖೆಯಲ್ಲಿ ಎಲ್ಲವು ಹೊರ ಬಂದಿದ್ದು ಆರೋಪಿಗಳು ಹೆಬ್ಬಟದ ತೋಟದ ಬಳಿ ಸುಬ್ರಮಣಿಯನ್ನು ಬಲವಾದ ಕಬ್ಬಿಣದ ರಾಡ್ ನಿಂದ ತಲೆಗೆ ಬಾರಿಸಿ ಹತ್ಯೆ ಮಾಡಿರುವುದಾಗಿ ಪೋಲಿಸರ ತನಿಖೆ ವೇಳೆ ಬಯಲಾಗಿದೆ.