ಶ್ರೀನಿವಾಸಪುರ:ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 730 ಗ್ರಾಂ ಒಣಗಿದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿರುತ್ತಾರೆ.
ಬಂಧಿತರನ್ನು ಸಲ್ಮಾನ್ ಹಾಗೂ ಮೊಹಮ್ಮದ್ ಹುಸೇನ್ ಬಂಧಿತ ಆರೋಪಿಗಳು.ಇವರು ಶ್ರೀನಿವಾಸಪುರದಿಂದ ಮುಳಬಾಗಿಲು ಕಡೆಗೆ ಹೋಗುತ್ತಿದ್ದಾಗ ಖಚಿತಮಾಹಿತಿ ಮೇರೆಗೆ ಅಬಕಾರಿ ಪೋಲಿಸರಿ ದಾಳಿ ನಡೆಸಿ ಬಂಧಿಸಿದ್ದು ಅವರಿಂದ 730 ಗ್ರಾಂ ಗಾಂಜಾ, ಒಂದು ಟಾಟಾ ಏಸ್ ವಾಹನ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಶ ಪಡಿಸಿಕೊಂಡಿರುವ TATA ACE ವಾಹನ ಕರ್ನಾಟಕದಲ್ಲಿ ನೊಂದಣಿಯಾಗಿರುವ ವಾಹನವಾಗಿದ್ದು ಆರೋಪಿಗಳು ಸ್ಥಳಿಯರು ಎನ್ನಲಾಗುತ್ತಿದೆ
ಗಾಂಜ ಆಂಧ್ರದಿಂದ ಅಕ್ರಮವಾಗಿ ಕರ್ನಾಟಕದ ಗಡಿ ದಾಟಿ ಬರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಇವೆ ಇತ್ತಿಚಿಗೆ ಆಂಧ್ರದಿಂದ ಬೆಂಗಳೂರು ಕಡೆಗೆ ಹೋರಟಿದ್ದ ವಾಹನವನ್ನು ಚಿಂತಾಮಣಿ ಪೋಲಿಸರು ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ಪತ್ತೆ ಹಚ್ಚಿದ್ದರು ಅಕ್ರಮ ಸಾಗಾಣಿಕೆ ದಾರರನ್ನು ವಶಕ್ಕೆ ಪಡೆದಿರುತ್ತಾರೆ.
ವರದಿ:ನಂಬಿಹಳ್ಳಿಸುರೇಶ್