- ಪಟ್ಟಣದ ಯುವತಿಯೊಂದಿಗೆ ಸ್ನೇಹ
- ಚಲ್ದಿಗಾನಹಳ್ಳಿ ಕೃಷಿ ಹೊಂಡದಲ್ಲಿ ವಿದ್ಯಾರ್ಥಿ ರಾಕೇಶ್ ಶವ
- ಹಲ್ಲೆ ಮಾಡಿ ಸಾಯಿಸಿದ್ದಾರೆ ಎಂದು ರಾಕೇಶ್ ಪೋಷಕರ ಆರೋಪ
ಶ್ರೀನಿವಾಸಪುರ:ತಾಲೂಕಿನ ಚಲ್ದಿಗಾನಹಳ್ಳಿ ವಿದ್ಯಾರ್ಥಿ ರಾಕೇಶ್ ನ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ತಾರತಮ್ಯ ಮಾಡುತ್ತಿದ್ದಾರೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಗ್ರಹಿಸಿ ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ವತಿಯಿಂದ ಮೃತ ಯುವಕನ ಸ್ವಗ್ರಾಮವಾದ ಚಲ್ದಿಗಾನಹಳ್ಳಿ ಗ್ರಾಮದಿಂದ ಪಟ್ಟಣದ ತಾಲೂಕು ಕಚೇರಿ ತನಕ ಕಾಲ್ನಡಿಗೆ ಪ್ರತಿಭಟನೆ ಜಾಥಾವನ್ನು ಸೋಮವಾರ ಆಯೋಜಿಸಲಾಗಿತ್ತು.
ಜುಲೈ ತಿಂಗಳಲ್ಲಿ ತಾಲೂಕಿನ ಚಲ್ದಿಗಾನಹಳ್ಳಿಯ ವಿದ್ಯಾರ್ಥಿ ರಾಕೇಶ್ ಪಟ್ಟಣದ ಯುವತಿಯೊರ್ವಳನ್ನು ಚಾಟ್ಸ್ ಸೆಂಟರನಲ್ಲಿ ಮಾತನಾಡಿದ ಎಂಬ ಆರೋಪದ ಹಿನ್ನಲೆಯಲ್ಲಿ ಯುವತಿ ಕುಟುಂಬಸ್ಥರು ರಾಕೇಶ್ ನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಇದನ್ನು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮೃತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಶ್ರೀನಿವಾಸಪುರ ಪೊಲೀಸರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಇನ್ನೊಬ್ಬ ಆರೋಪಿ ಇನ್ನು ಪತ್ತೆಯಾಗಿಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಂಗಕರ್ಮಿ ಆಗಿರುವ ಕೋಟಿಗಾನಳ್ಳಿ ರಾಮಯ್ಯ ಸರ್ಕಾರ,ಜಿಲ್ಲಾಡಳಿತಕ್ಕೆ ಸಂವೇದನ ಶೀಲತೆ ಇಲ್ಲ ಅಮಾಯಕ ಮಕ್ಕಳು ಸಾವನಪ್ಪುತ್ತಿದ್ದಾರೆ ಈ ಬಗ್ಗೆ ಸರ್ಕಾರಗಳು ಜವಾಬ್ದಾರಿ ತಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಮುಖಂಡ ವರ್ತನಹಳ್ಳಿ ವೆಂಕಟೇಶ್ ಮಾತನಾಡಿ ಹತ್ಯೆಯನ್ನು ನ್ಯಾಯೋಚಿತವಾಗಿ ತನಿಖೆ ನಡೆಸಬೇಕು ಪ್ರಕರಣದಲ್ಲಿ ನಾಲ್ಕು ಜನ ಆರೋಪಿಗಳ ಹೆಸರಿದ್ದು ಇನ್ನೊಬ್ಬ ಆರೋಪಿಯನ್ನು ಈ ಕೂಡಲೆ ಬಂಧಿಸಬೇಕು ಮೃತ ಯುವಕನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಿದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು ಎಂದು ಅಗ್ರಹಿಸಿದರು.
ಇದೆ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಜಾಥ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಹಲವಾರು ಪ್ರಗತಿ ಪರ ಸಂಘಟನೆಗಳ ಮುಖಂಡರು ರೈತ ಸಂಘ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ದೊಡ್ದ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಾಮಾಂಜಮ್ಮ,ಚಲ್ದಿಗಾನಹಳ್ಳಿ ಈರಪ್ಪ,ಅಂಬೇಡ್ಕರ ಪಾಳ್ಯ ರವಿ,ಗೊರವಿಮಾಕಲಹಳ್ಳಿ ಶ್ರೀನಿವಾಸ್,ಮಾದಿಗ ದಂಡೋರ ಮುಖಂಡ ಅವಲಕುಪ್ಪ ಶಂಕರ್,ಪುರಸಭೆ ಸದಸ್ಯ ಮುನಿರಾಜು,ನಾಗದೇನಹಳ್ಳಿ ವೆಂಕಟರಮಣಪ್ಪ,ಚಲ್ದಿಗಾನಹಳ್ಳಿ ವೆಂಕಟೇಶ್ ಮುಂತಾದವರು ಇದ್ದರು.