ನ್ಯೂಜ್ ಡೆಸ್ಕ್:ಸದಾಕಾಲ ಮನೆಯಲ್ಲಿ ತಂದೆ-ಮಕ್ಕಳ ನಡುವೆ ಸೌಹಾರ್ದತೆಯ ಕೊರತೆ, ಕೌಟಂಬಿಕ ಕಲಹಗಳು ಆರ್ಥಿಕ ಮುಗ್ಗಟ್ಟು, ಅಪಘಾತಗಳು,ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು, ಮಕ್ಕಳಲ್ಲಿನ ದುರ್ವರ್ತನೆ,ಮಾನಸಿಕ ಖಿನ್ನತೆಗೆ ಒಳಗಾಗುವುದು,ವಿವಾಹ ವಿಳಂಬವಾಗುತ್ತಿರುವುದು, ವೈವಾಹಿಕ ಜೀವನದಲ್ಲಿ ವಿಚ್ಛೇದನ,ದಂಪತಿಗೆ ಮಕ್ಕಳಾಗದಿರುವುದು,ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗದೆ ಇರುವುದು,ಯೋಜಿತ ಕಾರ್ಯಗಳನ್ನು ಪುರ್ಣಗೊಳಿಸಲು ಆಗದೆ ಇರುವುದು ಹೀಗೆ ಜೀವನದ ನಾನಾ ಕಾರಣಗಳಿಗೆ ಪಿತೃದೋಷ ಕಾರಣ ಎಂದು ಆಧ್ಯಾತ್ಮಿಕ ಜ್ಯೋತಿಷ್ಯರು ಹೇಳುತ್ತಾರೆ.
ಇದಕ್ಕೆ ಪರಿಹಾರ ಪಡೆಯಲು ದೋಷದಿಂದ ಮುಕ್ತರಾಗಲು ಈ ದೇವಸ್ಥಾನದಲ್ಲಿ ಪಿತೃಗಳಿಗೆ ತರ್ಪಣ ಸಲ್ಲಿಸಿದರೆ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ ಇಲ್ಲಿ ಶಿವ ಭಗವಾನ ಲಿಂಗರೂಪಿಯಾಗಿ ಸ್ವರ್ಣವಲ್ಲೀ ಸಮೇತನಾಗಿ ಮುಕ್ತೀಶ್ವರನಾಗಿ ದರ್ಶನ ನೀಡುತ್ತಾನೆ ಈ ದೇವಾಲಯ ತಮಿಳುನಾಡಿನ ತಿಲತರ್ಪಣಪುರಿ ಗ್ರಾಮದಲ್ಲಿ ಇದೆ.
ಶ್ರೀರಾಮನು ತನ್ನ ತಂದೆಗೆ ತಿಲತರ್ಪಣ ನೀಡಿದ ಸ್ಥಳ
ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಏಳು ಸ್ಥಳಗಳಲ್ಲಿ ಪಿತೃಗಳಿಗೆ ತರ್ಪಣ ಸಲ್ಲಿಸಲು ಯೋಗ್ಯವೆಂದು ಹೇಳಲಾಗಿದ್ದು ಅವುಗಳಲ್ಲಿ ಕಾಶಿ,ರಾಮೇಶ್ವರ,ಶ್ರೀವಂಚಿಯಮ್, ಗಯಾ, ತ್ರಿವೇಣಿ ಸಂಗಮ ಹಾಗೂ ತಿಲತರ್ಪಣಪುರಿ. ಈ ದೇವಾಲಯವನ್ನು ಕಾಶಿ ರಾಮೇಶ್ವರಕ್ಕೆ ಸಮನಾದ ಪವಿತ್ರ ದೇವಾಲಯ ಎಂಬ ನಂಬಿಕೆ ಕೂಡ ಇದೆ. ಅಮಾವಾಸ್ಯೆಯ ದಿನ ಇಲ್ಲಿ ತಿಲತರ್ಪಣ ಸಲ್ಲಿಸುವುದರಿಂದ ಪಿತೃಗಳಿಗೆ ಮುಕ್ತಿ ದೊರೆಯುತ್ತಂತೆ.ಹಿರಿಯರಿಗೆ ತಿಲತರ್ಪಣ ನೀಡಲಾಗದೆ ದೋಷ ಹೊತ್ತಿರುವಂತ ಕುಟುಂಬಗಳವರು ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಹಿರಿಯರಿಗೆ ತಿಲತರ್ಪಣ ನೀಡುವುದರಿಂದ (ಪೂರ್ವಜರಿಗೆ ಮುಕ್ತಿ ಸಿಗಲು ಆಚರಣೆ)ಆ ದೋಷಗಳಿಂದ ಮುಕ್ತಿ ಪಡೆಯಬಹುದು ಎಂಬುದು ನಂಬಿಕೆ.
ಭಗವಾನ್ ಶ್ರೀರಾಮನು ತನ್ನ ತಂದೆ ರಾಜ ದಶರಥನಿಗೆ ತಿಲತರ್ಪಣ ನೀಡಿದಾಗಲೆಲ್ಲ ಕಾರ್ಯದಲ್ಲಿ ಇಡುವಂತ ಪಿಂಡಗಳು ಹುಳುಗಳಾಗಿ ಮಾರ್ಪಟ್ಟು ಶ್ರೀರಾಮನ ಕಾರ್ಯಕ್ಕೆ ಅಡ್ದಿಯಾಗುತ್ತಿದ್ದ ಹಿನ್ನಲೆಯಲ್ಲಿ ಶ್ರೀರಾಮ ನೇರವಾಗಿ ಶಿವನನ್ನು ಪ್ರಾರ್ಥಿಸಿ ತನ್ನ ಸಂಕಷ್ಟ ಹೇಳಿಕೊಂಡಾಗ ಶಿವನೆ ಸೂಚಿಸಿದಂತೆ ಮಂಥರವನದಲ್ಲಿ ಶ್ರೀರಾಮನು ತಿಲತರ್ಪಣ ನೀಡಿದ ಎಂದು ಅಂದಿನಿಂದ ಮಂಥರವನ ತಿಲತರ್ಪಣಪುರಿ ಎಂದು ಕರೆಯಲ್ಪಡುತ್ತದೆ ಎಂಬುದು ಸ್ಥಳ ಪುರಾಣ.ತಿಲ ಎಂದರೆ ಎಳ್ಳು,ತರ್ಪಣ ಎಂದರೆ ಬಿಡುವುದು,
ನರ-ಮುಖ ಗಣಪತಿ ದರ್ಶನ
ಸಾಮಾನ್ಯವಾಗಿ ನಾವೆಲ್ಲರೂ ಆನೆಯ ಮುಖವನ್ನು ಹೊಂದಿರುವ ಗಣೇಶನನ್ನು ನೋಡಿರುತ್ತೇವೆ. ಆದರೆ ಈ ದೇವಾಲಯದಲ್ಲಿ ಗಣೇಶ ಸಾಮಾನ್ಯ ಮನುಷ್ಯರಂತೆ ಮುಖವನ್ನು ಹೊಂದಿದ್ದಾನೆ. ಗಣೇಶ ಇಲ್ಲಿ ಅಪರೂಪ ಎನ್ನುವಂತೆ ಮಾನವ ಮುಖದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ ಬಾಲ ಗಣಪತಿಯ ರೂಪದಲ್ಲಿರುವ ಮಾನವ ಮುಖದ ವಿಗ್ರಹ ಇದ್ದು ನರಮುಖ ಗಣಪತಿ ಅಥವಾ ಆದಿ ವಿನಾಯಕ ಗಣಪತಿ ಎನ್ನುತ್ತಾರೆ.ಪ್ರತಿ “ಸಂಕಷ್ಟಹರ ಚತುರ್ಥಿ”ಯಂದು ಮಹಾ ಗುರು ಅಗಸ್ತ್ಯ ಮುನಿಗಳು ಸ್ವತಃ ಆದಿ ವಿನಾಯಕನನ್ನು ಪೂಜಿಸುತ್ತಾರೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿನ ಗಣೇಶನನ್ನು ಪೂಜಿಸುವುದರಿಂದ ಕೌಟುಂಬಿಕ ಸಂಬಂಧಗಳಲ್ಲಿ ಶಾಂತಿ ನೆಲೆಸುತ್ತದೆ ಮತ್ತು ವಿನಾಯಕನ ಆಶೀರ್ವಾದದಿಂದ ಮಕ್ಕಳ ಸ್ಮರಣಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ದೇವಾಲಯ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಮತ್ತು ಸಂಜೆ 4 ರಿಂದ ರಾತ್ರಿ 9 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಇರುತ್ತದೆ ತಿಲತರ್ಪಣಪುರಿ ತಮಿಳನಾಡಿನ ತಿರುವಾರೂರ್ ಜಿಲ್ಲೆಯಲ್ಲಿದೆ ಮೈಲಾಡುತುರೈ ಪಟ್ಟಣದಿಂದ ತಿರುವಾರೂರ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿ ಪೂನಾಥಮ್ ಬಸ್ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ತಿರುನಲ್ಲಾರ್ ಶನೈಶ್ವರ ದೇವಾಲಯದಿಂದ 25 ಕಿ.ಮೀ ಮತ್ತು ಕೂತನೂರು ಸರಸ್ವತಿ ದೇವಾಲಯದಿಂದ 3 ಕಿ.ಮೀ ದೂರದಲ್ಲಿದೆ.
ರೈಲು ಮಾರ್ಗ
ಇಲ್ಲಿಗೆ ತೆರಳಲು ಕೋಲಾರ ಅಥಾವ ಬೆಂಗಳೂರು ಕಡೆಯಿಂದ ಹೋಗಬೇಕಾದವರು ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ಸ್ಟೇಶನ್ ನಿಂದ ಮೈಲಾಡುತುರೈ ರೈಲ್ವೆ ಸ್ಟೇಷನ್ ಅಥಾವ ಕುಟ್ರಾಲಂ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಸುಮಾರು 20 ಕೀ.ಮಿ ರಸ್ತೆ ಮಾರ್ಗದಲ್ಲಿ ತಿಲಪರ್ಪಣ ಪುರಿ ಸೇರಿಕೊಳ್ಳಬಹುದಾಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವರಿಗಾಗಿ ರೈಲ್ವೆ ಮಾಹಿತಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ಸ್ಟೇಶನ್ ನಿಂದ ಹೊರಡುವ ರೈಲು ಮೈಲಾಡುತುರೈ ಎಕ್ಸ್ ಪ್ರೆಸ್ ಸಂಖ್ಯೆ 16232 ಅಥಾವ ಬೈಪನಹಳ್ಳಿಯಿಂದ ಹೊರಡುವ ಕಾರೈಕಲ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16529 ಆಗಿರುತ್ತದೆ.ಇನ್ನು ಹತ್ತಿರದ ರೈಲ್ವೇ ಸ್ಟೇಷನ್ ಅಂದರೆ ಪೆರಲಂ ಜಂಕ್ಷನ್ ನಿಂದ ಕೇವಲ 3 ಕೀ.ಮಿ ಅಂತರದಲ್ಲಿ ಇದ್ದು ಇಲ್ಲಿಗೆ ಬೈಪನಹಳ್ಳಿ ರೈಲ್ವೇ ಸ್ಟೇಷನ್ ನಿಂದ ಕಾರೈಕಲ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16529 ಹೊರಡಲಿದ್ದು ಮೈಲಾಡುತುರೈ ರೈಲ್ವೆ ಸ್ಟೇಷನ್ ನಂತರದ ಪೆರಲಂ ಜಂಕ್ಷನ್ ನಲ್ಲಿ ಇಳಿಯಲು ಅವಕಾಶ ಇರುತ್ತದೆ.ಇನ್ನು ಸ್ಪಷ್ಟ ಮಾಹಿತಿ ಬೇಕಿದ್ದರೆ ನೇರವಾಗಿ ರೈಲ್ವೆ ಇಲಾಖೆ ವೆಬ್ ಪೇಜ್ ನಲ್ಲಿ ಹುಡುಕಬಹುದಾಗಿರುತ್ತದೆ.
ಬಸ್ ಮಾರ್ಗ
ಬೆಂಗಳೂರಿನಿಂದ ತಿರುನಲ್ಲಾರ್ ಶನೈಶ್ವರ ದೇವಾಲಯಕ್ಕೆ ಸಾಕಷ್ಟು ಸಂಖ್ಯೆ ಬಸ್ ಗಳು ಇದ್ದು ತಿರುನಲ್ಲಾರ್ ನಿಂದ 25 ಕಿ.ಮೀ ದೂರದಲ್ಲಿರುವ ತಿರುತರ್ಪಣಪುರಿಗೆ ಹೋಗಬಹುದಾಗಿರುತ್ತದೆ.